For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲೇ ಹೊಸ ರೂ. 100 ನೋಟು ಬಿಡುಗಡೆ, ಅಸಲಿ-ನಕಲಿ ಕಂಡು ಹಿಡಿಯುವುದು ಹೇಗೆ?

ಶೀಘ್ರದಲ್ಲಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಬದಲಾವಣೆಯೊಂದಿಗೆ ರೂ. 100 ನೋಟನ್ನು ಬಿಡುಗಡೆ ಮಾಡಲಿದೆ.

|

ಶೀಘ್ರದಲ್ಲಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಬದಲಾವಣೆಯೊಂದಿಗೆ ರೂ. 100 ನೋಟನ್ನು ಬಿಡುಗಡೆ ಮಾಡಲಿದೆ.

ಆರ್ಬಿಐನ ನೂತನ ಗವರ್ನರ್ ಶಕ್ತಿಕಾಂತ್ ದಾಸ್ ಸಹಿ ಹೊಂದಿರುವ ನೋಟು ಬಿಡುಗಡೆಯಾಗಲಿದ್ದು, ಹಳೆ ನೋಟಿನಂತೆಯೇ ಹೊಸ ನೋಟುಗಳಲ್ಲಿ ಮಹಾತ್ಮಾ ಗಾಂಧಿಜೀಯವರ ಫೋಟೊ ಇರಲಿದೆ. ಅಸಲಿ ಮತ್ತು ನಕಲಿ ನೋಟಿನ ಪತ್ತೆ ಸ್ವಲ್ಪ ಕಷ್ಟವಾಗಬಹುದು. ಆದರೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡರೆ ತಕ್ಷಣ ನಕಲಿ ನೋಟನ್ನು ಪತ್ತೆ ಹಚ್ಚುವುದು ಸುಲಭ.

ನೇರಳೆ ಬಣ್ಣದ ನೋಟುಗಳು ಅತೀ ಶೀಘ್ರದಲ್ಲೇ ನಿಮ್ಮ ಕೈಗೆ ಸೇರಲಿವೆ ಎಂದು ಆರ್ಬಿಐ ತಿಳಿಸಿದ್ದು, ಅದರಲ್ಲಿನ ವಿಶೇಷ ಲಕ್ಷಣಗಳೇನು ಎಂಬುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.

ನೋಟಿನ ವೈಶಿಷ್ಟ್ಯ

ನೋಟಿನ ವೈಶಿಷ್ಟ್ಯ

- ಹೊಸ 100 ರೂಪಾಯಿ ನೋಟಿನ ಮುಂಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 100 ರೂಪಾಯಿ ಎಂದು ಬರೆದಿರುತ್ತದೆ.
- ನೋಟಿನ ಮಧ್ಯ ಭಾಗದಲ್ಲಿ ಮಹಾತ್ಮಾ ಗಾಂಧಿಜೀಯ ಫೋಟೋ ಇರಲಿದೆ.
- ಸಣ್ಣ ಅಕ್ಷರದಲ್ಲಿ ಆರ್ಬಿಐ, ಭಾರತ್, ಇಂಡಿಯಾ, 100 ಎಂದು ಬರೆದಿರುತ್ತದೆ.
- ಭದ್ರತಾ ದೃಷ್ಟಿಯಿಂದ ರಕ್ಷಣಾ ಥ್ರೆಡ್ ಅಳವಡಿಸಲಾಗಿದ್ದು, ಬಣ್ಣದಲ್ಲಿ ಬದಲಾವಣೆಯನ್ನು ನೀವು ಕಾಣಬಹುದು.
- ನೋಟಿನ ಬಲಬದಿಯಲ್ಲಿ ಅಶೋಕ ಲಾಂಛನ ಇರಲಿದೆ.

ನೋಟಿನ ಹಿಂಬದಿ

ನೋಟಿನ ಹಿಂಬದಿ

100 ರೂ. ಮುಖಬೆಲೆಯ ನೋಟಿನ ಹಿಂಬಾಗದಲ್ಲಿ ಈ ಕೆಳಗಿನ
- ಎಡಭಾಗದಲ್ಲಿರುವ ಟಿಪ್ಪಣಿ ಮುದ್ರಣ ವರ್ಷ
- ಸ್ವಚ್ಛ ಭಾರತ್ ಲೋಗೋ ಮತ್ತು ಘೋಷಣೆ
- ಭಾಷಾ ಫಲಕ
- ರಾನಿ ಕಿ ವಾವ್ ವಿಶಿಷ್ಟ ಚಿತ್ರ
- ದೇವನಾಗರಿಯಲ್ಲಿ १०० ಸಂಖ್ಯೆ

ವೆಬ್ಸೈಟ್ ಗೆ ಭೇಟಿ ನೀಡಿ

ವೆಬ್ಸೈಟ್ ಗೆ ಭೇಟಿ ನೀಡಿ

ರೂ. 100 ನೋಟಿನ ಬಗ್ಗೆ ಎಲ್ಲ ಮಾಹಿತಿ ಮತ್ತು ವೈಶಿಷ್ಟ್ಯಗಳನ್ನು ಆರ್ಬಿಐ ವೆಬ್ಸೈಟ್ ನಲ್ಲಿ ಪರೀಕ್ಷಿಸಬಹುದು. ಆರ್ಬಿಐನ paisaboltahai.rbi.org.in ನಲ್ಲಿ ನೋಟಿನ ವೈಶಿಷ್ಟ್ಯವನ್ನು ನೀಡಲಾಗಿದೆ. ಇದರ ಆಧಾರದ ಮೇಲೆ ಯಾವುದು ನಕಲಿ? ಯಾವುದು ಅಸಲಿ ಎಂಬುದನ್ನು ಪತ್ತೆ ಮಾಡಬಹುದಾಗಿದೆ.

ಕೆನ್ನೇರಳೆ ಬಣ್ಣ

ಕೆನ್ನೇರಳೆ ಬಣ್ಣ

ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಹೊಸ ನೋಟುಗಳು ಕೆನ್ನೇರಳೆ ಬಣ್ಣದಲ್ಲಿ ಮುದ್ರಣವಾಗುತ್ತಿವೆ. ಮಹಾತ್ಮಾ ಗಾಂಧಿಯಿರುವ ಹೊಸ ಸರಣಿಯ ನೋಟುಗಳಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ. ನೋಟಿನ ಬಲಭಾಗದಲ್ಲಿ ಅಶೋಕ ಕಂಬದ ಲಾಂಛನ ಇರಲಿದೆ.

ನೋಟಿನ ಅಳತೆ

ನೋಟಿನ ಅಳತೆ

ಪ್ರಸ್ತುತ ಚಲಾವಣೆಯಲ್ಲಿರುವ ರೂ. 100 ನೋಟು 73mm x 157mm ಗಾಳತೆ ಹೊಂದಿದೆ. ಹೊಸ ನೋಟಿನ ಸುತ್ತಳತೆ 66 mm × 142mm ಇರಲಿದೆ. ಹೊಸ ನೋಟು ಅಳತೆಯಲ್ಲಿ ಹತ್ತು ರೂಪಾಯಿ ನೋಟಿಗಿಂತ ಸಲ್ಪ ದೊಡ್ಡದಾಗಿ ಇರಲಿದೆ. ಹಳೆ ನೂರು ರೂಪಾಯಿ ನೋಟಿಗೆ ಹೋಲುವ ವಿನ್ಯಾಸದಲ್ಲಿಯೇ ಹೊಸ ನೋಟುಗಳು ಇರಲಿವೆ.

ಇತಿಹಾಸ, ಸಂಸ್ಕೃತಿ, ಪರಂಪರೆ

ಇತಿಹಾಸ, ಸಂಸ್ಕೃತಿ, ಪರಂಪರೆ

ಗುಜರಾತಿನ ಪಟಾನ್ ನಲ್ಲಿ ಹರಿಯುವ ಸರಸ್ವತಿ ನದಿ ತೀರದಲ್ಲಿರುವ ಮೆಟ್ಟಿಲುಗಳಿರುವ 'ರಾಣಿ ಕಿ ವಾವ್' ಚಿತ್ರ ನೋಟಿನ ಹಿಂಬದಿಯಲ್ಲಿದೆ. ಇದು ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಸಾರಲಿದೆ. ಹನ್ನೊಂದನೇ ಶತಮಾನದ ರಾಜ ಭೀಮನ ಸ್ಮರಣಾರ್ಥ ಇದನ್ನು ನಿರ್ಮಿಸಲಾಗಿದೆ. ರಾಣಿ ಕಿ ವಾವ್ ವಿಶ್ವ ಪಾರಂಪಾರಿಕ ತಾಣವೆಂದು ಯುನೆಸ್ಕೊದಿಂದ ಮಾನ್ಯತೆ ಪಡೆದಿದೆ.

English summary

Soon RBI circulate new 100 notes, know how to check fake or real note

soon RBI circulate new 100 notes, check it fake or real know how to check fake note
Story first published: Wednesday, February 27, 2019, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X