ದೇಶದ ಪ್ರಮುಖ ಐಟಿ ಕಂಪನಿಗಳು ಸುಮಾರು 78,500 ಹೊಸ ಉದ್ಯೋಗಿಗಳಿಗೆ ನೇಮಕಾತಿಗೆ ಸಜ್ಜಾಗಿದೆ. ಐಟಿ ವಲಯದ ಕಳೆದ 8 ವರ್ಷಗ
ಕಳೆದ ಕೆಲ ವರ್ಷಗಳು ಐಟಿ ವಲಯದ ಉದ್ಯೋಗಿಗಳ ಪಾಲಿಗೆ ನಿರಾಶದಾಯಕವಾಗಿತ್ತಲ್ಲದೇ, ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಅಗತ್ಯ ಕೌಶಲ್ಯವಿರದ ಉದ್ಯೋಗಿಗಳನ್ನು ತಂತ್ರಜ್ಞಾನ ಕ್ಷೇತ್ರವು ಕೆಲಸದಿಂದ ವಜಾಗೊಳಿಸುತ್ತಿತ್ತು.
ಆದರೆ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ ನೀಡಿರುವ ಐಟಿ ವಲಯವು ಸರಿಯಾದ ಕೌಶಲ್ಯ ಹೊಂದಿರುವ ಉದ್ಯೋಗಿಗಳ ನೇಮಕಾತಿಗೆ ಮುಂದಾಗಿದೆ.
78,500 ನೇಮಕಾತಿ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆಕಾಂಕ್ಷಿಗಳಿಗೆ ಬಂಪರ್ ಸುದ್ದಿ ಇದಾಗಿದ್ದು, ದೇಶದ ಪ್ರಮುಖ ಐಟಿ ಕಂಪನಿಗಳು ಸುಮಾರು 78,500 ಹೊಸ ಉದ್ಯೋಗಿಗಳಿಗೆ ನೇಮಕಾತಿಗೆ ಸಜ್ಜಾಗಿದೆ. ಐಟಿ ವಲಯದ ಕಳೆದ 8 ವರ್ಷಗಳ ಅವಧಿಯಲ್ಲಿಯೇ ಅತ್ಯಧಿಕ ನೇಮಕಾತಿ ಪ್ರಕ್ರಿಯೆ ಇದಾಗಿದೆ. ಐಟಿ ಕ್ಷೇತ್ರದ ಉದ್ಯೋಗಗಳಿಗಾಗಿ ಎದುರು ನೋಡುವವರ ಪಾಲಿಗೆ ಇದು ಸುಗ್ಗಿ ಕಾಲವಾಗಿದೆ. ಐಟಿ, ಎಂಎನ್‍ಸಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಹತಾಶೆಗೆ ಕಾರಣಗಳೇನು?
ಯಾವ ಕಂಪನಿಗಳಲ್ಲಿ ಕೆಲಸ?
ಭಾರತದ ಪ್ರಮುಖ 4 ಮಾಹಿತಿ ತಂತ್ರಜ್ಞಾನ (ಐಟಿ) ಸಂಸ್ಥೆಗಳು 8,500 ಉದ್ಯೋಗಗಳ ನೇಮಕಾತಿ ಮಾಡಲಿವೆ.
ಟಿಸಿಎಸ್
ಇನ್ಫೋಸಿಸ್
ವಿಪ್ರೋ
ಎಚ್.ಸಿ.ಎಲ್
ಅತ್ಯಧಿಕ ನೇಮಕಾತಿ ಪ್ರಕ್ರಿಯೆ
ಐಟಿ ವಲಯದ ಇತಿಹಾಸದಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲೇಯೇ ಇದು ಬೃಹತ್ ಪ್ರಮಾಣದ ನೇಮಕಾತಿ ಪ್ರಕ್ರಿಯೆಯಾಗಿದೆ. 2018 ರ ಸಾಲಿನಲ್ಲಿ ಜಾಬ್ ಲಾಸ್ ಪ್ರಮಾನ ಹೆಚ್ಚಾಗಿತ್ತು. 2019 ರ ಮಾರ್ಚ್ ಅಂತ್ಯಕ್ಕೆ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಎಚ್.ಸಿ.ಎಲ್ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ 9.6 ಲಕ್ಷಕ್ಕೆ ಹೆಚ್ಚಿದೆ. ಅಗತ್ಯ ಕೌಶಲ್ಯ ಹೊಂದಿರುವವರಿಗೆ ಉದ್ಯೋಗ ಸಿಗಲಿದೆ.
ಎಚ್.ಸಿ.ಎಲ್ ನಲ್ಲಿ 12,000 ಪದವೀಧರರ ನೇಮಕಾತಿ
ಎಚ್ಸಿಎಲ್ ಟೆಕ್ನಾಲಜೀಸ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಸುಮಾರು 12,000 ಪದವೀಧರರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಇದೇ ವಾರ ಹೇಳಿದೆ. ಅಲ್ಲದೇ 2-10 ವರ್ಷ ಅನುಭವವಿರುವ 20 ಸಾವಿರ ಜನರನ್ನು ನೇಮಕ ಮಾಡಲಾಗುವುದು ಎಂದಿದೆ. 12,000 ಪದವೀಧರರ ಪೈಕಿ 10,000 ಮಂದಿ ಭಾರತದ ಕ್ಯಾಂಪಸ್ ಸಂದರ್ಶನದಲ್ಲಿ ಹಾಗು 2000 ಮಂದಿ ಅಮೆರಿಕ ವಿಶ್ವವಿದ್ಯಾನಿಲಯಗಳಿಂದ ನೇಮಕಾತಿ ಮಾಡಿಕೊಳ್ಳಲಿದೆ. ಕಂಪನಿಯು ಉದ್ಯೋಗಿಗಳ ನೇಮಕಾತಿ ಸಂದರ್ಭದಲ್ಲಿ ಮಹಿಳೆಯರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದಿದೆ. ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಈ ಬಿಸಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ಗಳಿಸಿ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications