For Quick Alerts
ALLOW NOTIFICATIONS  
For Daily Alerts

2018-19ರ ಬ್ಯಾಂಕಿಂಗ್ ವಂಚನೆ 71,500 ಕೋಟಿ: ಆರ್ಬಿಐ

ದೇಶದ ಬ್ಯಾಂಕುಗಳಲ್ಲಿ 2018-19 ರ ಅವಧಿಯಲ್ಲಿ ಒಟ್ಟು ರೂ. 71,500 ಕೋಟಿ ಮೊತ್ತದ 6,800 ಕ್ಕೂ ಹೆಚ್ಚು ಅವ್ಯವಹಾರ ಪ್ರಕರಣಗಳು ವರದಿಯಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಮಾಡಿದೆ.

|

ದೇಶದ ಬ್ಯಾಂಕಿಂಗ್ ವಲಯದಲ್ಲಿ ಅವ್ಯವಹಾರ ಪ್ರಕರಣಗಳ ಪ್ರಮಾಣ ಹೆಚ್ಚುತ್ತಲೇ ಇರುವುದು ಕಳವಳಕಾರಿ ಸಂಗತಿ.

2018-19ರ ಬ್ಯಾಂಕಿಂಗ್ ವಂಚನೆ 71,500 ಕೋಟಿ: ಆರ್ಬಿಐ

ದೇಶದ ಬ್ಯಾಂಕುಗಳಲ್ಲಿ 2018-19 ರ ಅವಧಿಯಲ್ಲಿ ಒಟ್ಟು ರೂ. 71,500 ಕೋಟಿ ಮೊತ್ತದ 6,800 ಕ್ಕೂ ಹೆಚ್ಚು ಅವ್ಯವಹಾರ ಪ್ರಕರಣಗಳು ವರದಿಯಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಮಾಡಿದೆ.
2018-19 ವರ್ಷದಲ್ಲಿನ ಈ ಬೆಳವಣಿಗೆ ದೇಶದ ಬ್ಯಾಂಕಿಂಗ್ ವಲಯವನ್ನು ಬೆಚ್ಚಿ ಬೀಳಿಸುವಂತಿದೆ.
2017-18 ರ ಅವಧಿಯಲ್ಲಿ ರೂ. 41,167 ಕೋಟಿ ಮೊತ್ತದ 5,916 ಅವ್ಯವಹಾರ ಪ್ರಕರಣಗಳು ಬ್ಯಾಂಕಿಂಗ್ ವಲಯದಲ್ಲಿ ವರದಿಯಾಗಿದ್ದವು.

ಕಳೆದ ಹಣಕಾಸು ವರ್ಷದಲ್ಲಿ (ವಂಚನೆ ಮೊತ್ತದಲ್ಲಿ ಶೇ. 73ರಷ್ಟು ಹೆಚ್ಚಳ) ನಿಗದಿತ ವಾಣಿಜ್ಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ಒಟ್ಟು 6,801 ವಂಚನೆ ಪ್ರಕರಣಗಳ ಮೂಲಕ ರೂ. 71,542.93 ಕೋಟಿ ಅವ್ಯವಹಾರ ಕಂಡುಬಂದಿತ್ತು.
ಕಳೆದ 11 ಹಣಕಾಸಿನ ವರ್ಷಗಳಲ್ಲಿ ಒಟ್ಟು 53,334 ಪ್ರಕರಣಗಳು ವರದಿಯಾಗಿದ್ದು, ಬೃಹತ್ ಪ್ರಮಾಣದ ರೂ. 2.05 ಲಕ್ಷ ಕೋಟಿ ಮೊತ್ತ ಅವ್ಯವಹಾರ ನಡೆದಿದೆ ಎಮದು ರಿಸರ್ವ್ ಬ್ಯಾಂಕ್ ಅಂಕಿಅಂಶ ವರದಿ ಮಾಡಿದೆ.
ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮಾಹಿತಿ ನೀಡಿದ್ದು, ವರ್ಷದಿಂದ ವರ್ಷಕ್ಕೆ ಬ್ಯಾಂಕಿಂಗ್ ಅವ್ಯವಹಾರ ಪ್ರಕರಣಗಳಲ್ಲಿ ಏರಿಕೆಯಾಗುತ್ತಾ ಬಂದಿರುವುದು ಕಂಡು ಬಂದಿದೆ.

Read more about: rbi banking frauds
English summary

Bank fraud touches unprecedented Rs 71,500 crore in 2018-19: RBI

Over 6,800 cases of bank fraud involving an unprecedented Rs 71,500 crore have been reported in 2018-19, the Reserve Bank of India has said.
Story first published: Tuesday, June 4, 2019, 12:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X