22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಮ್ ಗೆ ರು. 3488; ಇನ್ನು 4 ಸಾವಿರದತ್ತ ಓಟ

ಬೆಂಗಳೂರು, ಆಗಸ್ಟ್ 9: ವರ ಮಹಾಲಕ್ಷ್ಮೀ ಹಬ್ಬವಿದೆ. ಚಿನ್ನವೋ ಬೆಳ್ಳಿಯೋ ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದೀರಾ? ಹಾಗಿದ್ದರೆ ಮೊದಲಿಗೆ ಈ ವರದಿಗೆ ಓದಿಕೊಂಡುಬಿಡಿ. ಆಗಸ್ಟ್ 9ರ ಶುಕ್ರವಾರದಂದು 22 ಕ್ಯಾರೆಟ್ ನ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಪ್ರತಿ ಗ್ರಾಮ್ ಗೆ 3,488 ರುಪಾಯಿ ಇದ್ದರೆ, 24 ಕ್ಯಾರೆಟ್ ನ ಚಿನ್ನದ ಬೆಲೆ ಪ್ರತಿ ಗ್ರಾಮ್ ಗೆ 3,730 ರುಪಾಯಿ ಇದೆ.

ಅಲ್ಲಿಗೆ ಆಭರಣ ಮಾಡಿಸಿಕೊಳ್ಳಬೇಕು ಅಂದುಕೊಳ್ಳುವವರಿಗೆ ಪ್ರತಿ ಗ್ರಾಮ್ ಗೆ ವೇಸ್ಟೇಜ್, ಮೇಕಿಂಗ್ ಚಾರ್ಜ್, ಜಿಎಸ್ ಟಿ ಈ ಎಲ್ಲವೂ ಸೇರಿ 3,900 ರುಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ. ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ ಪ್ರತಿ ಕೇಜಿಗೆ 43,700 ರುಪಾಯಿ ಇದೆ.

22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಮ್ ಗೆ ರು. 3488; 4 ಸಾವಿರದತ್ತ ಓಟ

ಜಿಎಸ್ ಟಿ 3% ಹಾಕಲಾಗುತ್ತದೆ ಹಾಗೂ ಅದು ಪ್ರತ್ಯೇಕ ಎಂಬುದನ್ನು ಇಲ್ಲಿ ನೆನಪಿಡಬೇಕು. ಈಗ ಇಷ್ಟೊಂದು ಬೆಲೆ ಆಗುವುದಕ್ಕೆ ಕಾರಣ ಏನು ಎಂಬುದನ್ನು ಕರ್ನಾಟಕ ಜ್ಯುವೆಲ್ಲರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಟಿ. ಎ. ಶರವಣ ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿ, "ಬೆಳ್ಳಿ ಕೇಜಿಗೆ 50 ಸಾವಿರ ರುಪಾಯಿ ತನಕ ಆಗಬಹುದು. ಇನ್ನು 24 ಕ್ಯಾರೆಟ್ ಚಿನ್ನ ಹತ್ತು ಗ್ರಾಮ್ ಗೆ 40 ಸಾವಿರ ರುಪಾಯಿ ತಲುಪುವ ಸಾಧ್ಯತೆ ಇದೆ" ಎಂದು ಹೇಳಿದರು.

"ಅಮೆರಿಕ- ಇರಾನ್ ಮಧ್ಯೆ ಯುದ್ಧ ಪರಿಸ್ಥಿತಿ ತಲೆದೋರಿದೆ. ಡಾಲರ್ ನಲ್ಲಿ ಹಣ ಇಟ್ಟುಕೊಂಡಂಥವರು ಅದನ್ನು ಚಿನ್ನವಾಗಿ ಮಾರ್ಪಡಿಸಿ, ಇಟ್ಟುಕೊಳ್ಳುತ್ತಿದ್ದಾರೆ. ಹೂಡಿಕೆಗೆ ಚಿನ್ನ ಬಹಳ ಸುರಕ್ಷಿತ ಎಂಬ ಭಾವನೆ ಇರುವುದರಿಂದ ಚಿನ್ನದ ಖರೀದಿ ದೊಡ್ಡ ಪ್ರಮಾಣದಲ್ಲಿ ಆಗುತ್ತಿದ್ದು, ಈ ಎಲ್ಲ ಅಂಶವು ಸೇರಿ ಬೆಲೆ ಜಾಸ್ತಿ ಆಗುತ್ತಿದೆ" ಎಂದರು.

22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಮ್ ಗೆ ರು. 3488; 4 ಸಾವಿರದತ್ತ ಓಟ

ಈ ವರ್ಷದ ವರ ಮಹಾಲಕ್ಷ್ಮೀ ಹಬ್ಬವನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಇಪ್ಪತ್ತೈದು ಪರ್ಸೆಂಟ್ ನಷ್ಟು ಖರೀದಿ ಪ್ರಮಾಣ ಕಡಿಮೆ ಆಗಿದೆ. ಆದರೆ ಶ್ರಾವಣ ಮಾಸ, ಹಬ್ಬಗಳ ಸಾಲು, ಜತೆಗೆ ಮದುವೆ ಸೀಸನ್ ಇರುವುದರಿಂದ ಖರೀದಿ ತೀರಾ ಏನೂ ಬಿದ್ದಿಲ್ಲ ಎಂದು ಟಿ. ಎ. ಶರವಣ ಅವರು ಲೆಕ್ಕ ಮುಂದಿಟ್ಟರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+