ಕಿಲ್ಲರ್ ಜೀನ್ಸ್ ನಿಂದ ಬ್ರ್ಯಾಂಡ್ ನಿಂದ ವಸಂತ ಬೇಸಿಗೆ-20ರ ಕಲೆಕ್ಷನ್ ಬಿಡುಗಡೆ

ಬೆಂಗಳೂರು, ಸೆ.02: ಕಿಲ್ಲರ್ ಜೀನ್ಸ್ ಸ್ಪ್ರಿಂಗ್ ಸಮ್ಮರ್ 2020 (ಎಸ್ ಎಸ್ 20) ಸಂಗ್ರಹಗಳನ್ನು ಬಿಡುಗಡೆ ಮಾಡಿದೆ. ಎಸ್‍ಎಸ್'20 ಸಂಗ್ರಹವು ಕಿಲ್ಲರ್ ಜೀನ್ಸ್ ಮತ್ತು ಕಂಪನಿಯ ಇತರ ಅಗ್ರಗಣ್ಯ ಬ್ರಾಂಡ್‍ಗಳಾದ ಇಂಟೆಗ್ರಿಟಿ, ಲಾಮನ್‍ಪಿಜಿ3, ಈಸಿಯರ್ ಬೈ ಕಿಲ್ಲರ್ ಮತ್ತು ಮಹಿಳೆಯರ ಉಡುಪು ಬ್ರಾಂಡ್ ಆಗಿರುವ ದೇಸಿ ಬೆಲ್ಲೆಯ ವೈವಿಧ್ಯಮಯ ಶ್ರೇಣಿಯನ್ನು ಅನಾವರಣಗೊಳಿಸಿದೆ. ಬ್ರಾಂಡ್ ಬಳಕೆ ಮತ್ತು ಆದಾಯದಲ್ಲಿ ಡೆನಿಮ್ ಜೀನ್ಸ್ ವಲಯದಲ್ಲಿ ಕಿಲ್ಲರ್ ಜೀನ್ಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ದೇಸಿ ಬೆಲ್ಲೆ ಬೈ ಕಿಲ್ಲರ್ ನ ಅಧಿಕೃತವಾಗಿ ಮೊಟ್ಟಮೊದಲ ಎಸ್‍ಎಸ್'20 ಸಂಗ್ರಹವನ್ನು ಪ್ರಸ್ತುತ ಮಹಿಳೆಯರ ಫ್ಯೂಷನ್ ಎಂಬ ಧ್ಯೇಯದ ಸುತ್ತ ಹೆಣೆಯಲಾಗಿದೆ. ದೇಸಿ ಬೆಲ್ಲೆ ಬೈ ಕಿಲ್ಲರ್, ಆಕರ್ಷಕ ಶೈಲಿ ಮತ್ತು ಕಾರ್ಯನಿರ್ವಹಣೆ ನಡುವಿನ ಪವಾಡ ಸದೃಶ ಸಮತೋಲನವನ್ನು ಸಾಧಿಸಿದೆ. ಬ್ರಾಂಡ್‍ನ ವಿಶೇಷ ಪ್ರೀತಿ, ನಿಖರತೆ ಮತ್ತು ಗಮನ ಸೆಳೆಯುವಿಕೆಯು ಆಧುನಿಕ ಮಹಿಳೆಯರಿಗೆ ಈ ಗಮನಾರ್ಹ ದೇಸಿ ಸಿದ್ಧ ಉಡುಪುಗಳನ್ನು ತಂದಿದ್ದು, ವೈವಿಧ್ಯಮಯ ವ್ಯಕ್ತಿತ್ವದವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಕಿಲ್ಲರ್ ಜೀನ್ಸ್, ಲಾಮನ್‍ಪಿಜಿ3

ಕಿಲ್ಲರ್ ಜೀನ್ಸ್, ಲಾಮನ್‍ಪಿಜಿ3

ಪುರುಷರ ಉಡುಪುಗಳು ಕೂಡಾ ಎಲ್ಲ ಪ್ರಮುಖ ಬ್ರಾಂಡ್‍ಗಳ ಅಂದರೆ ಕಿಲ್ಲರ್ ಜೀನ್ಸ್, ಲಾಮನ್‍ಪಿಜಿ3, ಇಂಟೆಗ್ರಿಟಿ, ಈಸಿಸ್ ಬೈ ಕಿಲ್ಲರ್ ಗಳು ಇಟಾಲಿಯನ್ ಮತ್ತು ಟರ್ಕಿಶ್ ವಿನ್ಯಾಸಗಾರರ ವಿಶಿಷ್ಟ ವಿನ್ಯಾಸಗಳನ್ನು ಅನಾವರಣಗೊಳಿಸುತ್ತವೆ. ಈ ವೈವಿಧ್ಯಮಯ ಶ್ರೇಣಿಯಲ್ಲಿ ಸಾಂದರ್ಭಿಕ ಬಳಕೆಯ ಡೆನಿಮ್ ಜೀನ್ಸ್ಸ್, ಪ್ಯಾಂಟ್, ಟಿ-ಷರ್ಟ್ ಮತ್ತು ಔಪಚಾರಿಕ ಉಡುಪುಗಳಲ್ಲಿ ಷರ್ಟ್‍ಗಲು ಮತ್ತು ಸ್ಥಿತಿಸ್ಥಾಪಕತ್ವವಿರುವ, ಕಚೇರಿಗೆ ಧರಿಸಬಹುದಾದ ಡೆನಿಮ್ ಜೀನ್ಸ್ ಗಳು ಸೇರಿವೆ.

ಕಿಲ್ಲರ್ ಜೀನ್ಸ್, ಲಾಮನ್‍ಪಿಜಿ3

ಕಿಲ್ಲರ್ ಜೀನ್ಸ್, ಲಾಮನ್‍ಪಿಜಿ3

ಸಮೃದ್ಧ ಎಳೆಗಳು ಹಾಗೂ ನೇಯ್ಗೆ ವಿನ್ಯಾಸ

ಸಮೃದ್ಧ ಎಳೆಗಳು ಹಾಗೂ ನೇಯ್ಗೆ ವಿನ್ಯಾಸಗಳನ್ನು ಮತ್ತು ವೈವಿಧ್ಯವನ್ನು ಒಳಗೊಂಡ ಕಿಲ್ಲರ್ ಜೀನ್ಸ್‍ಗಳು ಗ್ರಾಹಕರು ಹಾಗೂ ವಿತರಕರನ್ನು ಎಸ್‍ಎಸ್'20 ಸಂಗ್ರಹಗಳ ಬಿಡುಗಡೆಗಾಗಿ ತುದಿಗಾಲಲ್ಲಿ ನಿಲ್ಲಿಸಿದೆ. ಕಚೇರಿಗೆ ಧರಿಸುವ ಸ್ಮಾರ್ಟ್ ಕ್ಯಾಷುವಲ್, ಆಕರ್ಷಕ ಹಬ್ಬದ ಉಡುಗೆ ಮತ್ತು ವೈವಿಧ್ಯಮಯ ಶ್ರೇಣಿಯ ಪ್ರಸ್ತುತೆವನಿಸುವ ಭಾರತ- ಪಾಶ್ಚಿಮಾತ್ಯ ವಿನ್ಯಾಸಗಳನ್ನು ದೇಸಿ ಬೆಲ್ಲೆ ಬೈ ಕಿಲ್ಲರ್ ಜೀನ್ಸ್ ವರ್ಗದಡಿ ಬಿಡುಗಡೆ ಮಾಡಲಾಗಿದೆ.
 ಸ್ವದೇಶಿ ಫ್ಯಾಷನ್ ಕಲೆಯ ಸಂಗ್ರಹ

ಸ್ವದೇಶಿ ಫ್ಯಾಷನ್ ಕಲೆಯ ಸಂಗ್ರಹ

ವಸ್ತುಗಳ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಮತ್ತು ಉತ್ಕೃಷ್ಟ ಎಳೆಗಳ ಬಳಕೆಯಿಂದಾಗಿ, ಕಂಪನಿಯು ತನ್ನ ಸ್ವದೇಶಿ ಫ್ಯಾಷನ್ ಕಲೆಯನ್ನು ಈ ವಿಶಿಷ್ಟ ಸಂಗ್ರಹದೊಂದಿಗೆ ವಿಶಿಷ್ಟವನ್ನಾಗಿಸಿದೆ. ವಯಸ್ಸು ಮೀರಿದ ಟ್ರೆಂಡ್ ಸೃಷ್ಟಿಸುವುದು ಮತ್ತು ಎಲ್ಲ ಋತುಗಳಲ್ಲೂ ಆತ್ಮವಿಶ್ವಾಸದಿಂದಿರುವ ಪುರುಷ ಹಾಗೂ ಮಹಿಳೆಯರನ್ನು ಸೃಷ್ಟಿಸುವುದು ಇದರ ಉದ್ದೇಶ.

ಆಡಳಿತ ನಿರ್ದೇಶಕ ಕೇವಲ್‍ಚಂದ್ ಪಿ.ಜೈನ್

ಆಡಳಿತ ನಿರ್ದೇಶಕ ಕೇವಲ್‍ಚಂದ್ ಪಿ.ಜೈನ್

ಎಸ್‍ಎಸ್ 20 ಬಗ್ಗೆ ಪ್ರತಿಕ್ರಿಯಿಸಿದ ಕಿಲ್ಲರ್ ಜೀನ್ಸ್ (ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್) ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೇವಲ್‍ಚಂದ್ ಪಿ.ಜೈನ್, "ಕಿಲ್ಲರ್ ಜೀನ್ಸ್ ವಿಶೇಷವಾಗಿ ಯುವಕರತ್ತ ಗಮನ ಹರಿಸುವ ಬ್ರಾಂಡ್ ಆಗಿದ್ದು, ನಮ್ಮ ಬ್ರಾಂಡ್‍ನ ಎಲ್ಲ ಕೊಡುಗೆಗಳಲ್ಲೂ ಫ್ಯಾಷನ್ ಪ್ರಧಾನವಾಗಿರುತ್ತದೆ. ನಮ್ಮ ವಿನ್ಯಾಸಗಾರರು ಹಲವು ವಿನ್ಯಾಸಗಳನ್ನು ಪೋಷಿಸಿದ್ದು, ಯುವ ಪೀಳಿಗೆ ಮನಸೆಳೆಯುವಂಥ ಇನ್ನಷ್ಟು ಸಿದ್ಧ ಉಡುಪುಗಳನ್ನು ನಾವು ಭವಿಷ್ಯದಲ್ಲಿ ಬಿಡುಗಡೆ ಮಾಡಲಿದ್ದೇವೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+