ಲಾಕ್‌ಡೌನ್ ಎಫೆಕ್ಟ್‌: 27 ಪರ್ಸೆಂಟ್ ಸಂಸ್ಥೆಗಳಿಗೆ ವೇತನ ನೀಡುವುದಕ್ಕೂ ಹಣವಿರುವುದಿಲ್ಲ

ಕೊರೊನಾವೈರಸ್‌ ಸೋಂಕು ತಡೆಗಟ್ಟಲು ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಉದ್ಯಮಗಳಿಗೆ ತೀವ್ರ ಹೊಡೆತಬಿದ್ದಿದ್ದು, ರಾಷ್ಟ್ರೀಯ ಷೇರು ವಿನಿಮಯ (ಎನ್ಎಸ್ಇ) ಅಡಿ ಬರುವ ಟಾಪ್ 100 ಸಂಸ್ಥೆಗಳ ಪೈಕಿ 27 ಪರ್ಸೆಂಟ್‌ರಷ್ಟು ಸಂಸ್ಥೆಗಳಿಗೆ ವೇತನ ನೀಡುವುದೂ ಕಷ್ಟಸಾಧ್ಯವಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಡಿಯೋಲಾಯ್ಟ್ ಅಧ್ಯಯನ ವರದಿಯ ಪ್ರಕಾರ ಲಾಕ್ ಡೌನ್ ನಿಂದಾಗಿ ಸಂಸ್ಥೆಗಳ ಲಾಭ ಒಂದು ವೇಳೆ 30 ಪರ್ಸೆಂಟ್‌ರಷ್ಟು ಕುಸಿದರೆ, 100 ಕಂಪನಿಗಳ ಪೈಕಿ 27 ಕಂಪನಿಗಳ ಬಳಿ ಸಂಬಳವನ್ನು ಭರಿಸುವ ಶಕ್ತಿಯೂ ಇರುವುದಿಲ್ಲ.

27 ಪರ್ಸೆಂಟ್ ಸಂಸ್ಥೆಗಳಿಗೆ ವೇತನ ನೀಡುವುದಕ್ಕೂ ಹಣವಿರುವುದಿಲ್ಲ!

ಎಲ್ಲಾ ವರ್ಗಗಳಲ್ಲಿಯೂ ನಿಧಾನಗತಿ ಎದುರಾಗುವುದರಿಂದ ಸಂಸ್ಥೆಗಳು ವೇತನ ನೀಡುವ ತಮ್ಮ ಸಾಮರ್ಥ್ಯದ ಮೌಲ್ಯಮಾಪನ ಮಾಡಿಕೊಳ್ಳಲೇಬೇಕಾಗಿದೆ ಎಂದು ಎನ್ಎಸ್ ಸಿ ಅಡಿಯಲ್ಲಿ ಬರುವ 100 ಸಂಸ್ಥೆಗಳ ಅಧ್ಯಯನ ನಡೆಸಿರುವ ಡಿಯೋಲಾಯ್ಟ್ ಸಲಹೆ ನೀಡಿದೆ.

ಆದರೆ ಈ 27 ಸಂಸ್ಥೆಗಳ ಹೆಸರನ್ನು ಡಿಯೋಲಾಯ್ಟ್ ಬಹಿರಂಗಪಡಿಸದೆ , ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದೆ. ಉಳಿದ ಸಂಸ್ಥೆಗಳಿಗೆ ಕಾರ್ಯನಿರ್ವಹಣಾ ವೆಚ್ಚಗಳನ್ನು 5.5 ತಿಂಗಳವರೆಗೆ ಸರಿದೂಗಿಸುವುದು ಕಷ್ಟವಾಗುವುದಿಲ್ಲ. ಆದರೆ ದುರ್ಬಲವಾಗಿರುವ 20 ಸಂಸ್ಥೆಗಳಿಗೆ ಕಾರ್ಯನಿರ್ವಹಣಾ ವೆಚ್ಚಗಳನ್ನು ಒಂದು ತ್ರೈಮಾಸಿಕದವರೆಗು ನಿಭಾಯಿಸುವುದು ಕಷ್ಟಸಾಧ್ಯ ಎಂದು ಡಿಯೋಲಾಯ್ಟ್ ಅಧ್ಯಯನ ವರದಿ ಹೇಳಿದೆ.

ವಿವಿಧ ಸನ್ನಿವೇಶಗಳ ಅಡಿಯಲ್ಲಿ ಪರಿಹಾರ ವೆಚ್ಚ ವ್ಯಾಪ್ತಿ ಅನುಪಾತವನ್ನು ನಿರ್ಣಯಿಸಲು ಮತ್ತು ಪರಿಹಾರವನ್ನು ಮುಂದೂಡುವ ಮೂಲಕ , ಗುರಿ ಪರಿಹಾರ ವೆಚ್ಚದ ವ್ಯಾಪ್ತಿಯನ್ನು ಕಾಯ್ದುಕೊಳ್ಳುವ ಯೋಜನೆಯನ್ನು ಕಂಪನಿಗಳಿಗೆ ಡೆಲಾಯ್ಟ್ ಸೂಚಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+