ಭಾರತದಲ್ಲಿ ಉದ್ಯೋಗ ಪ್ರಮಾಣದಲ್ಲಿ ಆತಂಕಕಾರಿ ಪ್ರಮಾಣದ ಇಳಿಕೆ ಆಗಿದೆ. ಮೂರನೇ ತ್ರೈಮಾಸಿಕದ ಆರಂಭದಿಂದ ಬೆಳವಣಿಗೆ ಪಥದಿಂದ ಕೆಳಗೆ ಇಳಿದಿದೆ. ಮೊದಲ ತ್ರೈಮಾಸಿಕದಲ್ಲಿ ಕಳೆದ ವರ್ಷದ ಅದೇ ಅವಧಿಗೆ ಹೋಲಿಸಿದಲ್ಲಿ 20.3% ಉದ್ಯೋಗ ಕಡಿಮೆ ಆಗಿತ್ತು. ಲಾಕ್ ಡೌನ್ ಮಧ್ಯೆಯೂ ಎರಡನೇ ತ್ರೈಮಾಸಿಕದಲ್ಲಿ ಚೇತರಿಕೆ ಕಂಡು, ಕುಸಿತದ ಪ್ರಮಾಣ 3.5%ಗೆ ತಗ್ಗಿತು.
ಆದರೆ, ಆರ್ಥಿಕತೆಯಲ್ಲಿ ಚೇತರಿಕೆ ಕಂಡರೂ ಮೂರನೇ ತ್ರೈಮಾಸಿಕದಲ್ಲಿ ಮತ್ತೆ ಚಲನೆ ಕಳೆದುಕೊಂಡಿದೆ. ಅಕ್ಟೋಬರ್ ನಲ್ಲಿ 50,000 ಉದ್ಯೋಗ ನಷ್ಟ ಕಂಡಿತ್ತು. ಸಿಎಂಐಇ ಕನ್ಸ್ಯೂಮರ್ ಪಿರಮಿಡ್ಸ್ ಹೌಸ್ ಹೋಲ್ಡ್ ಸಮೀಕ್ಷೆ ಪ್ರಕಾರ, ನವೆಂಬರ್ ನಲ್ಲಿ ಉದ್ಯೋಗ ನಷ್ಟದ ಪ್ರಮಾಣವು 35 ಲಕ್ಷ ಮುಟ್ಟಿತು. ನವೆಂಬರ್ 2020ರಲ್ಲಿ ಉದ್ಯೋಗ ಪ್ರಮಾಣ 39.36 ಕೋಟಿ ಇದ್ದು, ಮಾರ್ಚ್ 2020ರ ತ್ರೈಮಾಸಿಕಕ್ಕಿಂತ 1 ಕೋಟಿ ಕಡಿಮೆ ಇದೆ.
ಡಿಸೆಂಬರ್ ಮೊದಲ ಮೂರು ವಾರದಲ್ಲಿ ಕೆಲಸ ಹುಡುಕುವ ಸಂಖ್ಯೆಯಲ್ಲಿ ಹೆಚ್ಚು ಕಾರ್ಮಿಕರು ಸೇರ್ಪಡೆಯಾಗಿದ್ದಾರೆ. ನವೆಂಬರ್ ಗೆ ಹೋಲಿಸಿದಲ್ಲಿ ಸರಾಸರಿಯಾಗಿ ಡಿಸೆಂಬರ್ ನಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ನವೆಂಬರ್ ನಲ್ಲಿ ಉದ್ಯೋಗ ಪ್ರಮಾಣ 37.4% ಇದ್ದದ್ದು, ಡಿಸೆಂಬರ್ ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಂದರೆ 37.5% ಆಗಿದೆ. ನಿರುದ್ಯೋಗ ಪ್ರಮಾಣವು 6.5% ನಿಂದ 9.5%ಗೆ ಏರಿಕೆ ಆಗಿದೆ.

ಇನ್ನು ಮೂರನೇ ತ್ರೈಮಾಸಿಕದ ಕೊನೆಗೆ ಉದ್ಯೋಗದ ಪ್ರಮಾಣವು 39.5 ಕೋಟಿ ಆಗುವ ನಿರೀಕ್ಷೆ ಇದೆ. ಆದರೆ ಬಾಕಿ ಇರುವ ಅವಧಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಆಗಬಾರದು, ಅಷ್ಟೇ. FY20ರ Q3ರಲ್ಲಿ 40.5 ಕೋಟಿ ಉದ್ಯೋಗ ಪ್ರಮಾಣ ಇತ್ತು. FY21ರ Q3ರಲ್ಲಿ ಅದಕ್ಕಿಂತ 2.5 ಪರ್ಸೆಂಟ್ ಕಡಿಮೆ ಇತ್ತು.
ಆರ್ಥಿಕ ಪ್ರಗತಿ ಹಾಗೂ ಉದ್ಯೋಗ ಒಂದಕ್ಕೊಂದು ಸಂಬಂಧ ಇದೆ ಎಂದು ನಂಬಲಾಗುತ್ತದೆ. 2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ 7.2% ಇಳಿಕೆ ಆಗಿದ್ದು, ಮೊದಲ ತ್ರೈಮಾಸಿಕದಲ್ಲಿ 23.9% ಇಳಿಕೆ ಆಗಿತ್ತು. ಈ ಎರಡೂ ತ್ರೈಮಾಸಿಕದಲ್ಲಿ ಉದ್ಯೋಗಕ್ಕಿಂತ ಜಿಡಿಪಿ ಹೆಚ್ಚು ಇಳಿಕೆ ಆಗಿದೆ.


Click it and Unblock the Notifications