ಬೆಂಗಳೂರಿನಲ್ಲಿ ಮನೆಯನ್ನು ಬಾಡಿಗೆ ಪಡೆಯುವ ಪ್ರಮಾಣವು ಅಧಿಕವಾಗುತ್ತಾ ಸಾಗುತ್ತಿದೆ. ಜೊತೆಗೆ ಮನೆ ಬಾಡಿಗೆ ದರವು ಕೂಡಾ ಹೆಚ್ಚಳವಾಗುತ್ತಾ ಸಾಗುತ್ತಿದೆ. ಬೆಂಗಳೂರಿನಲ್ಲಿ 2023 ರ ಮೊದಲ ಒಂಬತ್ತು ತಿಂಗಳಲ್ಲಿ ಮಾರಾಟವಾದ ಮನೆಗಳ ಪ್ರಮಾಣ ಎಷ್ಟಿದೆ, ಅದರ ಒಟ್ಟು ಮೌಲ್ಯ ಎಷ್ಟಿದೆ ಎಂದು ತಿಳಿದರೆ ನೀವು ಬೆರಗಾಗುವುದು ಖಂಡಿತ.
ಹೌದು, ಬೆಂಗಳೂರಿನಲ್ಲಿ 2023ರ ಜನವರಿಯಿಂದ ಸೆಪ್ಟೆಂಬರ್‌ವರೆಗಿನ ಒಂಬತ್ತು ತಿಂಗಳುಗಳ ಅವಧಿಯಲ್ಲಿ ಒಟ್ಟಾಗಿ 38 ಸಾವಿರ ಕೋಟಿ ರೂಪಾಯಿ ಮೌಲ್ಯದ 47,100 ಕ್ಕೂ ಅಧಿಕ ಮನೆಗಳು ಮಾರಾಟವಾಗಿದೆ. ನಾವು 2022 ರ ಲೆಕ್ಕಾಚಾಕ್ಕೆ ಹೋಲಿಕೆ ಮಾಡಿದಾಗ 2023 ರಲ್ಲಿ ಒಟ್ಟು ಮನೆಗಳ ಮಾರಾಟ ಪ್ರಮಾಣದ ಮೌಲ್ಯವು ಶೇಕಡ 42 ರಷ್ಟು ಏರಿಕೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೌಲ್ಯದ ಹೆಚ್ಚಳವು ನಗರದಲ್ಲಿ ರಿಯಲ್-ಎಸ್ಟೇಟ್ ಬೆಲೆಗಳ ಏರಿಕೆಯನ್ನು ಸೂಚಿಸುತ್ತದೆ. 2022 ರಲ್ಲಿ ಬೆಂಗಳೂರಿನಲ್ಲಿ ಕೇವಲ 47,500 ವಸತಿಗಳು ಮಾರಾಟ ಮಾಡಲಾಗಿದೆ. ಈ ವರ್ಷ ಮಾರಾಟವಾದ ಆಸ್ತಿಗಳ ಮೌಲ್ಯಕ್ಕೆ ಬಂದಾಗ ಪುಣೆ ಅತ್ಯಧಿಕ ಬೆಳವಣಿಗೆಯನ್ನು ಕಂಡಿದೆ. ಅಂದರೆ ಶೇಕಡ 96 ರಷ್ಟು ಬೆಳವಣಿಗೆ ಕಂಡಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶ, ಹೈದರಾಬಾದ್ ಮತ್ತು ಚೆನ್ನೈ ಶೇಕಡ 40 ರಿಂದ 45 ರಷ್ಟು ಮಾರಾಟದ ಬೆಳವಣಿಗೆಯನ್ನು ಕಂಡಿದೆ.
ಈ ಬಗ್ಗೆ ಟಿಒಐಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ಅಧ್ಯಕ್ಷ ಕಿಶೋರ್ ಜೈನ್, "ನಾವು ಇಲ್ಲಿಯವರೆಗೆ ಉತ್ತಮ ವರ್ಷವನ್ನು ಹೊಂದಿರುವುದರಿಂದ ಸಂಖ್ಯೆಗಳು (ಮೌಲ್ಯ) ಆಶ್ಚರ್ಯವೇನಿಲ್ಲ. ಸರಾಸರಿ, ಪ್ರತಿ ಘಟಕದ ಮೌಲ್ಯ ಸುಮಾರು 80 ಲಕ್ಷ ರೂಪಾಯಿ ಆಗಿದೆ. ಆದರೆ ಕೈಗೆಟಕುವ ದರದ ಮನೆಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ ಐಷಾರಾಮಿ ಮನೆಗಳ ಪ್ರಮಾಣ ಅಧಿಕವಾಗಿದೆ," ಎಂದು ಹೇಳಿದ್ದಾರೆ.
ಉದ್ಯಮವು ಕ್ಯಾಲೆಂಡರ್ ವರ್ಷದ ಕೊನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಕನಿಷ್ಠ 16,000-20,000 ಹೆಚ್ಚಿನ ವಸತಿ ಘಟಕಗಳ ಮಾರಾಟವನ್ನು ನಿರೀಕ್ಷಿಸುತ್ತಿದೆ ಎಂದು ಜೈನ್ ಹೇಳಿದರು. ಇದರಿಂದಾಗಿ ಮೌಲ್ಯದಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.
"ನಾವು ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ನಲ್ಲಿ 16,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದ್ದೇವೆ. ನಾಲ್ಕನೇ ತ್ರೈಮಾಸಿಕದಲ್ಲಿ ರಜೆಗಳು ಅಧಿಕವಾಗುತ್ತದೆ, ನಾವು ಹೆಚ್ಚಿನ ಮಾರಾಟವನ್ನು ನಿರೀಕ್ಷಿಸುತ್ತಿದ್ದೇವೆ. ಎನ್‌ಆರ್‌ಐ ಸಮುದಾಯದಿಂದ ಕೆಲವು ಬೇಡಿಕೆಯೂ ಇದೆ. ನಾವು ಹಲವಾರು ಡೀಲ್‌ಗಳನ್ನು ಮುಚ್ಚುವ ಸಾಧ್ಯತೆಯಿದೆ," ಎಂದು ತಿಳಿಸಿದರು.
ತ್ರೈಮಾಸಿಕದಲ್ಲಿ ವಸತಿ ಮಾರಾಟವು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. 2023 ರಲ್ಲಿ "ತಡೆಯಲಾಗದ ಭಾರತೀಯ ವಸತಿ ವಲಯ" ಹಿಂದಿನ ಎಲ್ಲಾ ಗರಿಷ್ಠ ಮಟ್ಟವನ್ನು ಮೀರಿಸಿದೆ ಎಂದು ಅನರಾಕ್ ಹೇಳಿದರು.
"ಏಕಕಾಲದಲ್ಲಿ, ಮಾರಾಟವಾದ ವಸತಿಗಳ ಒಟ್ಟಾರೆ ಮಾರಾಟದ ಮೌಲ್ಯವು ಸಹ ಹೆಚ್ಚಾಗಿದೆ. ಹಣಕಾಸು ವರ್ಷ 2023ರ ನಾಲ್ಕನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಮಾರಾಟದ ಸಂಖ್ಯೆಗಳನ್ನು ಒಟ್ಟುಗೂಡಿಸುವ ಮೊದಲು, ಬಲವಾದ ಮಾರಾಟ ವೇಗ ಕಂಡು ಬಂದಿದೆ," ಎಂದು ವಿಶ್ಲೇಷಕರು ಹೇಳುತ್ತಾರೆ.
"2023 ರಲ್ಲಿ ಖರೀದಿದಾರರನ್ನು ಕಂಡುಕೊಂಡ ಮನೆಗಳ ಒಟ್ಟು ಮೌಲ್ಯವು 4.5 ಲಕ್ಷ ಕೋಟಿ ರೂಪಾಯಿ ದಾಟುತ್ತದೆ ಎಂದು ಸೂಚಿಸುತ್ತದೆ. 2022 ರ ಒಟ್ಟು ಮಾರಾಟ ಮೌಲ್ಯಕ್ಕಿಂತ ಶೇಖಡ 38 ರಷ್ಟು ಏರಿಕೆಯಾಗಿದೆ. 2022 ರಲ್ಲಿ 3.27 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮನೆಗಳನ್ನು ಮಾರಾಟ ಮಾಡಿದೆ," ಎಂದು ಸಂಸ್ಥೆಯ ವಿಶ್ಲೇಷಣೆ ಉಲ್ಲೇಖಿಸಿದೆ.
ಅಗ್ರ 7 ನಗರಗಳಾದ ಎನ್‌ಸಿಆರ್, ಎಂಎಂಆರ್, ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಮತ್ತು ಕೋಲ್ಕತ್ತಾ ಈ ವರ್ಷ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮಾರಾಟವನ್ನು ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2.4 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಮಾರಾಟವಾಗಿದೆ. ಶೇಕಡ 44 ರಷ್ಟು ಹೆಚ್ಚಳವನ್ನು ದಾಖಲಿಸಿದೆ.


Click it and Unblock the Notifications