ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಸುರಕ್ಷಿತೆಗೆ ಅಧಿಕ ಆದ್ಯತೆಯನ್ನು ನೀಡುತ್ತೇವೆ. ಸಾಮಾನ್ಯವಾಗಿ ಜನರು ಸುರಕ್ಷಿತ ಹೂಡಿಕೆ ವಿಚಾರಕ್ಕೆ ಬಂದಾಗ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ಕೆಲವು ಯೋಜನೆಯಲ್ಲಿ ಅಧಿಕ ರಿಟರ್ನ್ ಕೂಡಾ ಪಡೆಯಬಹುದು. ಆದರೆ ನಾವು ರಿಸ್ಕ್‌ನೊಂದಿಗೆ ದೀರ್ಘಾವಧಿಯಲ್ಲಿ ಅಧಿಕ ರಿಟರ್ನ್ ಪಡೆಯುವ ನಿರ್ಧಾರ ಮಾಡಿದರೆ, ಷೇರು ಮಾರುಕಟ್ಟೆ ಬೆಸ್ಟ್ ಆಯ್ಕೆಯಾಗಿದೆ.
ಯಾರು ಸ್ಟಾಕ್ ಮಾರುಕಟ್ಟೆ ಹೂಡಿಕೆಯಿಂದ ಅಧಿಕ ರಿಟರ್ನ್ ಅನ್ನು ಪಡೆಯಲು ಬಯಸುತ್ತಾರೋ ಅವರು ದೀರ್ಘಾವಧಿ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುವುದು ಅತೀ ಉತ್ತಮ ಆಯ್ಕೆಯಾಗಿದೆ. ಅಧಿಕ ರಿಟರ್ನ್, ಉತ್ತಮ ರಿಸಲ್ಟ್ ಅನ್ನು ಪಡೆಯುವ ನಿಟ್ಟಿನಲ್ಲಿ ಹವಲಾರು ಮಂದಿ ದೀರ್ಘಾವಧಿ ಹೂಡಿಕೆ ಮೇಲೆ ನಂಬಿಕೆಯನ್ನು ಇರಿಸಿದ್ದಾರೆ.
2023ರಲ್ಲಿ ಭಾರತದಲ್ಲಿ ನೀವು ಖರೀದಿ ಮಾಡಬಹುದಾದ 5 ಬೆಸ್ಟ್ ಸ್ಟಾಕ್‌ಗಳ ಬಗ್ಗೆ ಇಲ್ಲಿ ನಾವು ವಿವರ ನೀಡಿದ್ದೇವೆ. ದೀರ್ಘಾವಧಿ ಹೂಡಿಕೆಯಲ್ಲಿ ಹಣವನ್ನು ಡಬಲ್ ಮಾಡಲು ಈ ಷೇರುಗಳಲ್ಲಿ ಹೂಡಿಕೆ ಮಾಡುವುದು ನಿಮಗೆ ಸಹಾಯಕವಾಗಲಿದೆ. ದೀರ್ಘಾವಧಿ ಎಂದರೆ 5 ವರ್ಷಗಳ ಅವಧಿಯ ಹೂಡಿಕೆಯಾಗಿದೆ. 5 ಬೆಸ್ಟ್ ಸ್ಟಾಕ್‌ಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.... ಮುಂದೆ ಓದಿ...
ರಿಲಯನ್ಸ್ ಇಂಡಸ್ಟ್ರೀಸ್
ಭಾರತದ ಅತೀ ದೊಡ್ಡ ಸಂಸ್ಥೆಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೂಡಾ ಒಂದಾಗಿದೆ. ತೈಲದಿಂದ ಹಿಡಿದು ರಾಸಾಯನಿಕದವರೆಗೆ ಎಲ್ಲ ಕ್ಷೇತ್ರದಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಹೆಜ್ಜೆಯನ್ನು ಇರಿಸಿದೆ. ತೈಲ ಮತ್ತು ಗ್ಯಾಸ್, ರಿಟೇಲ್, ಡಿಜಿಟಲ್ ಸೇವೆ, ಹಣಕಾಸು ಸೇವೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ನೀಡುತ್ತಾ ಬಂದಿದೆ. ಈ ಸ್ಟಾಕ್ ಭಾರತದ ಬೆಸ್ಟ್ ದೀರ್ಘಾವಧಿ ಷೇರು ಆಗಿದೆ. ರಿಲಯನ್ಸ್ ಪ್ರತಿ ಷೇರು ಮೌಲ್ಯ ಈ ಸಮಯಕ್ಕೆ 2,394.00 ರೂಪಾಯಿ ಆಗಿದೆ.
ಟಾಟಾ ಕನ್‌ಸಲ್ಟನ್ಸಿ ಸರ್ವಿಸ್
ಟಾಟಾ ಕನ್‌ಸಲ್ಟನ್ಸಿ ಸರ್ವಿಸ್ ಲಿಮಿಟೆಡ್ (ಟಿಸಿಎಸ್) ಭಾರತದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ. ಟಿಸಿಎಸ್ ಸಂಸ್ಥೆಯು ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಯನ್ನು ನೀಡುತ್ತಾ ಬಂದಿದೆ. ಷೇರು ಮಾರುಕಟ್ಟೆಯಲ್ಲಿ ಸುರಕ್ಷಿತ ಷೇರುಗಳ ಪೈಕಿ ಟಿಸಿಎಸ್ ಷೇರುಗಳು ಕೂಡಾ ಒಂದಾಗಿದೆ. ಟಾಟಾ ಕನ್‌ಸಲ್ಟನ್ಸಿ ಸರ್ವಿಸ್ ಪ್ರತಿ ಷೇರು ಮೌಲ್ಯ 3,423.35 ರೂಪಾಯಿ ಆಗಿದೆ.
ಇನ್ಫೋಸಿಸ್
ಇನ್ಫೋಸಿಸ್ ಲಿಮಿಟೆಡ್ ಕನ್‌ಸಲ್ಟಿಗ್, ತಂತ್ರಜ್ಞಾನ, ಔಟ್‌ಸೋರ್ಸಿಂಗ್ ಮತ್ತು ಮುಂದಿನ ಜನರೇಷನ್ ಡಿಜಿಟಲ್ ಸೇವೆ ಅನ್ನು ನೀಡುತ್ತದೆ. ಈ ಸ್ಟಾಕ್ ಕೂಡಾ ಷೇರು ಮಾರುಕಟ್ಟೆಯಲ್ಲಿನ 5 ಬೆಸ್ಟ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಇನ್ಫೋಸಿಸ್ ಲಿಮಿಟೆಡ್ ಸ್ಟಾಕ್ ಮೌಲ್ಯ 1,567.40 ರೂಪಾಯಿ ಆಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಪ್ರತಿ ಷೇರಿಗೆ 1,618.50 ರೂಪಾಯಿ ಆಗಿದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್ ಅದಾನಿ ಗ್ರೂಪ್‌ನ ಎಲ್ಲ ಸ್ಟಾಕ್‌ಗಳ ಮೌಲ್ಯಕ್ಕಿಂತ ಅಧಿಕವಾಗಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಭಾರತದ ಗ್ರಾಹಕ ಉತ್ಪನ್ನಗಳ ಸಂಸ್ಥೆಯಾಗಿದೆ. ಇದು ಬ್ರಿಟಿಷ್ ಸಂಸ್ಥೆ ಯೂನಿಲಿವರ್‌ನ ಅಂಗಸಂಸ್ಥೆಯಾಗಿದೆ. ಮುಂಬೈನಲ್ಲಿ ಇದರ ಮುಖ್ಯ ಕಚೇರಿ ಇದೆ. ಹೂಡಿಕೆದಾರರು ಆಯ್ಕೆ ಮಾಡುವ ಪ್ರಮುಖ ಸ್ಟಾಕ್‌ಗಳ ಪೈಕಿ ಎಚ್‌ಯುಎಲ್ ಕೂಡಾ ಒಂದಾಗಿದೆ. ಎಚ್‌ಯುಎಲ್ ಪ್ರತಿ ಸ್ಟಾಕ್ ಮೌಲ್ಯ 2,495.00 ರೂಪಾಯಿ ಆಗಿದೆ.


Click it and Unblock the Notifications