ಅಬುಧಾಬಿ ಹೂಡಿಕೆ ಪ್ರಾಧಿಕಾರವು ಭಾರತದ ಸ್ಟಾರ್ಟ್‌ಅಪ್ ಸಂಸ್ಥೆಯಾದ ಲೆನ್ಸ್‌ಕಾರ್ಟ್ ಸೊಲ್ಯೂಷನ್ಸ್ ಪ್ರೈವೇಟ್‌ನ ಸ್ಕೇಕ್ (ಷೇರು) ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳಲು ಒಪ್ಪಂದವನ್ನು ಮಾಡಿಕೊಳ್ಳಲು ಸಜ್ಜಾಗಿದೆ. ಸುಮಾರು 500 ಮಿಲಿಯನ್ ಡಾಲರ್‌ನ ಒಪ್ಪಂದ ಇದಾಗಿದೆ. ಮಿಡಲ್ ಈಸ್ಟರ್ನ್ ಸವರನ್ ವೆಲ್ತ್ ಫಂಡ್ ಅಸ್ತಿತ್ವದಲ್ಲಿರುವ ಲೆನ್ಸ್‌ಕಾರ್ಟ್ ಷೇರುಗಳು ಮತ್ತು ಹೊಸ ಷೇರುಗಳ ಖರೋದಿಗೆ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ.
ಲೆನ್ಸ್‌ಕಾರ್ಟ್‌ನೊಂದಿಗಿನ 4 ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಒಪ್ಪಂದವನ್ನು ಈ ವಾರದ ಆರಂಭದಲ್ಲಿ ಘೋಷಣೆ ಮಾಡಬಹುದು ಎಂದು ಈ ಬಗ್ಗೆ ಮಾಹಿತಿ ತಿಳಿದಿರುವವರು ಹೇಳಿದ್ದಾರೆ. ಪ್ರಸ್ತುತ ದೇಶದಾದ್ಯಂತ ಮಾತ್ರವಲ್ಲ ಜಾಗತಿಕವಾಗಿ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ನಡುವೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಲ್ಲಿ ಏರಿಳಿತ ಕಂಡು ಬಂದಿದೆ. ಕಂಪನಿಯು ಭಾರತದ ಅತಿದೊಡ್ಡ ಆಪ್ಟಿಕಲ್ ಬ್ರಾಂಡ್ ಆಗಿ ಬೆಳೆದಿದೆ. ಅಂದರೆ ಕನ್ನಡಕ ಮಾರಾಟದ ಸಂಸ್ಥೆಯಾಗಿದೆ.

ಕಂಪನಿಯು ಸಾಫ್ಟ್‌ವೇರ್ ಗ್ರೂಪ್ ಕಾರ್ಪ್ ಆದ ಕೆಕೆಆರ್ & ಕೋ, ಟೆಮಾಸೆಕ್ ಹೋಲ್ಡಿಂಗ್ಸ್ ಪಿಟಿಎ ಮತ್ತು ಪ್ರೇಮ್‌ಜಿ ಇನ್‌ವೆಸ್ಟ್ ಮುಂತಾದವುಗಳಿಂದ ಬೆಂಬಲಿತವಾಗಿದೆ. ಚರ್ಚೆಗಳು ಮುಂದುವರಿದಿದ್ದರೂ, ವಿವರಗಳು ಇನ್ನೂ ಬದಲಾಗಬಹುದು ಎಂದು ಜನರು ಹೇಳಿದರು. ಎಡಿಐಎ ಮತ್ತು ಲೆನ್ಸ್‌ಕಾರ್ಟ್‌ನ ಪ್ರತಿನಿಧಿಗಳು ಕಾಮೆಂಟ್ ಮಾಡಲು ನಿರಾಕರಿಸಿದ್ದಾರೆ. ಗ್ರಾಹಕರಿಗೆ ನೇರವಾಗಿ ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಲೆನ್ಸ್‌ಕಾರ್ಟ್ ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದೆ. ಲೆನ್ಸ್‌ಕಾರ್ಟ್ ಅನ್ನು 2010 ರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಪೆಯೂಶ್ ಬನ್ಸಾಲ್ ಸ್ಥಾಪನೆ ಮಾಡಿದ್ದಾರೆ. ಸುಮಾರು 400 ಮಿಲಿಯನ್ ಡಾಲರ್‌ನ ಜಪಾನ್‌ನ ಓನ್‌ಡೇಸ್ ಇಂಕ್‌ನಲ್ಲಿ ಅಧಿಕ ಪಾಲನ್ನು ಖರೀದಿಸಲು ಕಂಪನಿಯು ಜೂನ್‌ನಲ್ಲಿ ಒಪ್ಪಿಕೊಂಡಿದೆ ಎಂದು ಬ್ಲೂಬರ್ಗ್ ನ್ಯೂಸ್ ವರದಿ ಮಾಡಿದೆ.


Click it and Unblock the Notifications