RRVLನಲ್ಲಿ ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿಯಿಂದ 5,512.50 ಕೋಟಿ ರು. ಹೂಡಿಕೆ

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿಯಿಂದ (ADIA) 5,512.50 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಲ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಮಂಗಳವಾರ ಘೋಷಣೆ ಮಾಡಿದೆ.

RRVL ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 1.20% ಈಕ್ವಿಟಿ ಪಾಲು ಖರೀದಿಯನ್ನು ಎಡಿಐಎ ಮಾಡಿದಂತಾಗುತ್ತದೆ.

ಈಗಿನ ವ್ಯವಹಾರವೂ ಸೇರಿಕೊಂಡಂತೆ ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬದಾಲ, ಜಿಐಸಿ, ಟಿಪಿಜಿ ಹಾಗೂ ಎಡಿಐಎ ಈ ಎಲ್ಲವೂ ಸೇರಿ ಕಳೆದ ನಾಲ್ಕು ವಾರದೊಳಗೆ 37,710 ಕೋಟಿ ರುಪಾಯಿಯನ್ನು ಸಂಗ್ರಹಿಸಿದಂತಾಗುತ್ತದೆ. ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ.

RRVLನಲ್ಲಿ ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿಯ 5512 ಕೋಟಿ ಹೂಡಿಕೆ

ADIA ಆರಂಭವಾದದ್ದು 1976ರಲ್ಲಿ. ಜಾಗತಿಕ ಮಟ್ಟದಲ್ಲಿ ವಿವಿಧ ಹೂಡಿಕೆ ಸಂಸ್ಥೆಗಳಲ್ಲಿ ಅಬುಧಾಬಿ ಸರ್ಕಾರದ ಪರವಾಗಿ ಹೂಡಿಕೆ ಮಾಡಿಕೊಂಡು ಬಂದಿದೆ. ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+