ಹೆಚ್ಚು ಸಂಭಾವನೆ ಕೇಳಿ ಹಿಟ್ ಸಿನಿಮಾವನ್ನು ಕಳೆದುಕೊಂಡ ನಟ-ನಟಿಯರು

ಬಾಲಿವುಡ್‌ನಲ್ಲಿ ಪ್ರತಿ ವರ್ಷ ಹೊಸ ಸ್ಟಾರ್‌ಗಳು ಎಂಟ್ರಿ ಕೊಡುತ್ತಾರೆ. ಸೂಪರ್‌ಸ್ಟಾರ್‌ಗಳ ಪೈಪೋಟಿಯ ನಡುವೆ ಹೊಸ ಹೊಸ ಪ್ರತಿಭೆಗಳಿಗೆ ಇದು ವೇದಿಕೆಯಾಗಿದೆ. ಹೊಸ ಸ್ಟಾರ್‌ಗಳ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯುತ್ತವೆ.

ಪ್ರಸಿದ್ಧ ನಟ-ನಟಿಯರು ಸ್ಕ್ರಿಪ್ಟ್‌ಗಳನ್ನು ಆಯ್ದುಕೊಂಡು ಸಂಭಾವನೆ ಓಕೆ ಆದಾಗ ಮಾತ್ರ ಚಿತ್ರಗಳಲ್ಲಿ ನಟಿಸಲು ಒಪ್ಪಿಗೆ ನೀಡುತ್ತಾರೆ. ಸಂಭಾವನೆ ಬೇಡಿಕೆಗೆ ನಿರ್ಮಾಪಕರು ಒಪ್ಪದೇ ಇದ್ದರೆ ಅಷ್ಟೇ ಸುಲಭವಾಗಿ ತಿರಸ್ಕರಿಸುವುದು ಸಾಮಾನ್ಯ.

ಹೀಗೆ ಪ್ರಸಿದ್ಧ ನಟ-ನಟಿಯರು ಸಂಭಾವನೆ ಹೊಂದಾಣಿಕೆಯಾಗದೇ ತಿರಸ್ಕರಿಸಿದ ಚಿತ್ರಗಳೇ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡಿದ ಉದಾಹರಣೆ ಇದೆ. ಅಲ್ಲದೆ ಹೊಸ ಸ್ಟಾರ್ ಉದಯಕ್ಕೂ ನಾಂದಿಯಾಗಿದೆ. ಆ ನಟರು ಯಾರು? ಯಾವ ಚಿತ್ರ ಎಂಬುದರ ವಿವರ ಈ ಕೆಳಗಿದೆ.

ಶಾರೂಕ್ ಖಾನ್

ಶಾರೂಕ್ ಖಾನ್

ಕಿಂಗ್ ಆಫ್ ರೊಮ್ಯಾನ್ಸ್, ಬಾಲಿವುಡ್ ಬಾದ್ ಷಾ ಎಂದೇ ಬಿರುದುಳ್ಳ ಸೂಪರ್‌ಸ್ಟಾರ್‌ ಶಾರೂಕ್ ಖಾನ್‌ ಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾರೂಖ್ ನಟನೆಯ ಬಹುತೇಕ ಚಿತ್ರ ಕೋಟಿ ಕೋಟಿ ಹಣ ಗಳಿಸಿದೆ. ಆದರೆ ಸೂಪರ್‌ಹಿಟ್ ಆದ ಪದ್ಮಾವತ್ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಶಾರೂಕ್‌ಗೆ ಆಫರ್ ನೀಡಲಾಗಿತ್ತು.

ಆದರೆ ಶಾರೂಖ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದರು. ಇದಕ್ಕೆ ಕಾರಣ ಏನು ಗೊತ್ತಾ? ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ನಟಿಸಲು ಶಾರೂಖ್ 90 ಕೋಟಿ ರುಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದರು.

ಸಂಜಯ್‌ ಲೀಲಾ ಬನ್ಸಾಲಿ 90 ಕೋಟಿ ರುಪಾಯಿ ಸಂಭಾವನೆಯನ್ನು ಮರುಪರಿಶೀಲಿಸುವಂತೆ ಎಸ್ಆರ್‌ಕೆಗೆ ಕೇಳಿದರು. ಆದರೆ ಶಾರೂಖ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆದ್ದರಿಂದ ಶಾರೂಕ್ ಆ ಚಿತ್ರದಿಂದ ಹೊರಬಿದ್ದ ಪರಿಣಾಮ ರಣವೀರ್ ಸಿಂಗ್‌ಗೆ ಲಾಭವಾಯಿತು. ಚಿತ್ರದ ವ್ಯಾಪಾರ ವಿಶ್ಲೇಷಕರು ಹೇಳುವಂತೆ ಪದ್ಮಾವತ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರುಪಾಯಿ ಹಣಗಳಿಕೆ ಮಾಡಿದೆ.

 

ಕರೀನಾ ಕಪೂರ್

ಕರೀನಾ ಕಪೂರ್

ಬಾಲಿವುಡ್ ಮೋಸ್ಟ್ ಬ್ಯೂಟಿಫುಲ್ ಅಂಡ್ ಟ್ಯಾಲೆಂಟೆಡ್ ನಟಿ, ಬೆಬೊ ಎಂದೇ ಕರೆಯಲ್ಪಡುವ ಕರೀನಾ ಕಪೂರ್ ಕೂಡ ಒಂದೊಳ್ಳೆ ಆಫರ್ ಮಿಸ್ ಮಾಡಿಕೊಂಡ ನಟಿ. 2003 ನವೆಂಬರ್‌ನಲ್ಲಿ ರಿಲೀಸ್ ಆದ ಬ್ಲಾಕ್ ಬಸ್ಟರ್ ಸಿನಿಮಾ ಕಲ್‌ ಹೋ ನಾ ಹೊ ಚಿತ್ರದಲ್ಲಿ ನಟಿಸಲು ಕರೀನಾ ಕಪೂರ್ ಗೆ ಆಫರ್ ಬಂದಿತ್ತು.

ಆದರೆ ಶಾರೂಕ್ ರೀತಿಯಲ್ಲಿ ಕರೀನಾ ಕೂಡ 20 ಕೋಟಿ ರುಪಾಯಿಗೂ ಅಧಿಕ ಸಂಭಾವನೆ ಬೇಡಿಕೆ ಇಟ್ಟ ಪರಿಣಾಮ ಚಿತ್ರದಲ್ಲಿ ನಟಿಸುವ ಅವಕಾಶ ಕಳೆದುಕೊಂಡರು. ಖ್ಯಾತ ನಿರ್ಮಾಪಕ ಕರಣ್ ಜೋಹಾರ್, ಕರೀನಾ ಆಫರ್ ನಿರಾಕರಿಸಿದ ಪಾತ್ರಕ್ಕೆ ಪ್ರೀತಿ ಜಿಂಟಾರನ್ನ ಆಯ್ಕೆ ಮಾಡಿದರು. ಕಲ್ ಹೋ ನಾ ಹೋ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರುಪಾಯಿಗೂ ಅಧಿಕ ಹಣ ಸಂಪಾದಿಸಿತು.

 

ಶ್ರೀದೇವಿ

ಶ್ರೀದೇವಿ

ಅಪ್ರತಿಮ ಬಾಲಿವುಡ್ ನಟಿ ದಿವಂಗತ ಶ್ರೀದೇವಿಗೆ ಸೂಪರ್ ಡ್ಯೂಪರ್ ಹಿಟ್ ಬಾಹುಬಲಿ: ದಿ ಬಿಗಿನಿಂಗ್‌ನಲ್ಲಿ ನಟಿಸುವ ಅವಕಾಶವಿತ್ತು. ನಟ ಪ್ರಭಾಸ್‌ರ ತಾಯಿಯ ಪಾತ್ರದಲ್ಲಿ ನಟಿಸಬೇಕೆಂದು ನಿರ್ದೇಶಕ, ನಿರ್ಮಾಪಕರು ಬಯಸಿದ್ದರು.

ಆದರೆ 6 ಕೋಟಿ ರುಪಾಯಿಗೂ ಕಡಿಮೆ ದರದಲ್ಲಿ ನಟಿಸಲು ಶ್ರೀದೇವಿ ನಿರಾಕರಿಸಿದರು. ನಂತರ ಈ ಪಾತ್ರವನ್ನು 2.50 ಕೋಟಿಗೆ ರಮ್ಯಾ ಕೃಷ್ಣ ನಿಭಾಯಿಸಿದರು. ಚಿತ್ರದ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಶ್ರೀದೇವಿ ಖಂಡಿತವಾಗಿಯೂ ಒಳ್ಳೆಯ ಆಫರ್ ಮಿಸ್ ಮಾಡಿಕೊಂಡರು. 180 ಕೋಟಿ ರುಪಾಯಿ ಬಜೆಟ್‌ನ ಬಾಹುಬಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 650 ಕೋಟಿ ರುಪಾಯಿಗೂ ಅಧಿಕ ಹಣ ಗಳಿಸಿದೆ.

 

ನವಾಜುದ್ದೀನ್ ಸಿದ್ದಿಕಿ

ನವಾಜುದ್ದೀನ್ ಸಿದ್ದಿಕಿ

ಬಾಲಿವುಡ್‌ನ ಪ್ರತಿಭಾವಂತ ಬಹುಮುಖ ಪ್ರತಿಭೆ ನವಾಜುದ್ದೀನ್ ಸಿದ್ದಿಕಿ. 2017ರಲ್ಲಿ ಬಿಡುಗಡೆಯಾದ ಅಕ್ಷಯ್ ಕುಮಾರ ನಟನೆಯ ಜಾಲಿ ಎಲ್ ಎಲ್ ಬಿ 2 ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂದಿತ್ತು.ನವಾಜುದ್ದೀನ್ ಈ ಚಿತ್ರದಲ್ಲಿ ನಟಿಸಲು 3.50 ಕೋಟಿ ರುಪಾಯಿ ಸಂಭಾವನೆ ಕೇಳಿದರು.

ಆದರೆ ಈ ಚಿತ್ರವು 50 ಕೋಟಿಗಿಂತಲೂ ಕಡಿಮೆ ಬಜೆಟ್‌ನ ಚಿತ್ರವಾಗಿದ್ದರಿಂದ ನಿರ್ಮಾಪಕರು ಹಣ ಭರಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಈ ಚಿತ್ರದಲ್ಲಿ ನಟಿಸುವ ಅವಕಾಶ ಅಕ್ಷಯ್ ಕುಮಾರ್‌ಗೆ ಸಿಕ್ಕಿತು. ಸ್ಕ್ರಿಪ್ಟ್ ಚೆನ್ನಾಗಿದ್ದರಿಂದ ಅಕ್ಷಯ್ ಕುಮಾರ್ ಒಂದು ಕೋಟಿ ರುಪಾಯಿ ತೆಗೆದುಕೊಂಡರು. ಈ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ 200 ಕೋಟಿ ರುಪಾಯಿ ಸಂಪಾದಿಸಿದೆ.

 

ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ

ಬಾಲಿವುಡ್‌ನ ಹಾಟ್ ಬ್ಯೂಟಿ ಸೋನಾಕ್ಷಿ ಸಿನ್ಹಾ ತಮ್ಮ ಚೊಚ್ಚಲ ಚಿತ್ರ ದಬಾಂಗ್ ಮೂಲಕವೇ ಬಾಲಿವುಡ್‌ನಲ್ಲಿ ಪ್ರಭಾವ ಬೀರಿದ ನಟಿಯಾಗಿದ್ದಾರೆ. ಅವರ ನಟನೆಯ ಕೌಶಲ್ಯವನ್ನು ಇಡೀ ಬಾಲಿವುಡ್ ಹಾಡಿ ಹೊಗಳಿತ್ತು. ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ಸಖತ್ ಆಗಿಯೇ ಮೋಡಿ ಮಾಡಿತು. ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕ-ನಿರ್ದೇಶಕ ಸಾಜಿದ್ ನಾಡಿಯಾಡ್ವಾಲಾ ಅವರು ಕಿಕ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಲು ಆಫರ್ ನೀಡಿದರು.

ಆದರೆ ದಬಾಂಗ್ ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದ ಸೋನಾಕ್ಷಿ ಈ ಚಿತ್ರದಲ್ಲಿ ನಟಿಸಲು 10 ಕೋಟಿ ರುಪಾಯಿ ಬೇಡಿಕೆ ಇಟ್ಟರು. ಪರಿಣಾಮ ಈ ಪಾತ್ರವು ಜಾಕ್ವೆಲಿನ್ ಫರ್ನಾಂಡೀಸ್‌ಗೆ ಹೋಯಿತು. 140 ಕೋಟಿ ಬಜೆಟ್‌ನ ಕಿಕ್ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರುಪಾಯಿ ಹಣ ಗಳಿಸಿದ್ದಲ್ಲದೆ. ಸೋನಾಕ್ಷಿ ಬದಲು ನಟಿಸಿದ್ದ ಜಾಕ್ವೆಲಿನ್ ಬಾಲಿವುಡ್‌ನಲ್ಲಿ ಯಶಸ್ವಿ ಹೆಜ್ಜೆಯನ್ನಿಡಲು ಸಾಧ್ಯವಾಯಿತು.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+