ಕಳೆದ ಎರಡು ದಿನಗಳಿಂದ ಅದಾನಿ ಗ್ರೂಪ್‌ನ ಕೆಲವು ಸ್ಟಾಕ್‌ಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗುತ್ತಿದೆ. ಅದಾನಿ ಸಮೂಹದ ಒಂದು ಕಂಪನಿಯಾದ ಅದಾನಿ ಟೋಟಲ್ ಗ್ಯಾಸ್ ಕಳೆದ ಎರಡು ದಿನಗಳಲ್ಲಿ ಶೇಕಡ 30 ರಷ್ಟು ಹೆಚ್ಚಳವನ್ನು ಕಂಡಿದೆ.
ಇಂದು, ಅದಾನಿ ಟೋಟಲ್ ಗ್ಯಾಸ್ ಷೇರುಗಳು ಮಧ್ಯಾಹ್ನ 12:44 ಕ್ಕೆ ಶೇಕಡ 12.85 ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 727.00 ರೂಪಾಯಿಗೆ ತಲುಪಿದೆ. ಸ್ಟಾಕ್ ಸುಮಾರು 4.59 ಪಟ್ಟು ಹೆಚ್ಚಳವಾಗಿದೆ. ಈ ಸಮಯಕ್ಕೆ ಅದಾನಿ ಟೋಟಲ್ ಗ್ಯಾಸ್ ಷೇರು ಶೇಕಡ 14.09 ರಷ್ಟು ಏರಿಕೆಯಾಗಿ, 735.00 ರೂಪಾಯಿಗೆ ತಲುಪಿದೆ.

ಈ ವರ್ಷ ಜನವರಿ 24 ರಂದು ಹಿಂಡೆನ್‌ಬರ್ಗ್ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಆರೋಪಿಸಿದೆ. ಅದಾದ ಬಳಿಕ ಷೇರು ಭಾರೀ ಇಳಿಕೆಯಾಗಿದೆ. ಆದರೆ ಈ ವಾರವು ಅದಾನಿ ಗ್ರೂಪ್ ಷೇರು ಸುಮಾರು ಶೇಕಡ 20 ರಷ್ಟು ಏರಿಕೆಯಾಗಿದೆ.
ಹಿಂದಿನ ವಹಿವಾಟಿನ ಅವಧಿಯಲ್ಲಿ ಬಹುತೇಕ ಎಲ್ಲಾ ಅದಾನಿ ಸ್ಟಾಕ್‌ಗಳು ಏರಿಕೆಯಾದವು. ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಅತ್ಯಧಿಕ ಲಾಭವನ್ನು ಗಳಿಸಿದೆ. ಸ್ಟಾಕ್ ಶೇಕಡ 20 ರಷ್ಟು ಏರಿಕೆಯಾಗಿ 644.15 ರೂಪಾಯಿಗೆ ತಲುಪಿದೆ. ಅದಾನಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯಕ್ಕೆ 15 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ.
ಕಳೆದ ವಾರ, ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ವಿಚಾರಣೆಯಲ್ಲಿ ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ಬ್ಯಾಚ್‌ನ ಆದೇಶವನ್ನು ಕಾಯ್ದಿರಿಸಿತ್ತು. ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಸುಪ್ರೀಂ ಕೋರ್ಟ್‌ಗೆ ಅದಾನಿ ಗ್ರೂಪ್ ವಿರುದ್ಧ ವರದಿ ಸಲ್ಲಿಸಿದೆ.
"ನಾವು ವಿದೇಶಿ ವರದಿಗಳನ್ನು ಏಕೆ ಸತ್ಯವೆಂದು ತೆಗೆದುಕೊಳ್ಳಬೇಕು? ನಾವು ವರದಿಯನ್ನು ತಿರಸ್ಕರಿಸುತ್ತಿಲ್ಲ, ಆದರೆ ನಮಗೆ ಪುರಾವೆ ಬೇಕು. ಹಾಗಾದರೆ ಅದಾನಿ ಗ್ರೂಪ್ ವಿರುದ್ಧ ನಿಮ್ಮ ಬಳಿ ಏನು ಪುರಾವೆ ಇದೆ?," ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ತಿಳಿಸಿದರು. ಇದಾದ ಬಳಿಕ ಅದಾನಿ ಗ್ರೂಪ್ ಸ್ಟಾಕ್‌ಗಳು ಏರಿಕೆಯಾಗುತ್ತಾ ಸಾಗುತ್ತಿದೆ.
ಈ ಸಮಯಕ್ಕೆ ಅದಾನಿ ಸ್ಟಾಕ್ ಹೇಗಿದೆ?
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 1.22ರಷ್ಟು ಇಳಿಕೆಯಾಗಿ 2,394 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 0.70ರಷ್ಟು ಕುಗ್ಗಿ, 346 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 0.30ರಷ್ಟು ಇಳಿದು, 835.15 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 0.58ರಷ್ಟು ಏರಿಕೆಯಾಗಿದ್ದು, 433.70 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 0.21ರಷ್ಟು ಇಳಿದು, 1,873 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 0.68ರಷ್ಟು ಏರಿಕೆಯಾಗಿ, 871 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.14.11ರಷ್ಟು ಹೆಚ್ಚಳವಾಗಿ 735.10 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.1.41ರಷ್ಟು ಇಳಿಕೆಯಾಗಿದ್ದು, 1,038ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 4.81ರಷ್ಟು ಕುಸಿದು 218.85 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 3.23ರಷ್ಟು ಇಳಿಕೆಯಾಗಿ 431.80 ರೂಪಾಯಿಗೆ ತಲುಪಿದೆ.


Click it and Unblock the Notifications