ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ, ಅಂದರೆ ಸೆಪ್ಟೆಂಬರ್ 1ರಿಂದ ಈಚೆಗೆ ದೇಶದ 18 ರಾಜ್ಯಗಳಲ್ಲಿ ಒಟ್ಟು 577.5 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ. ಈ ಪೈಕಿ ಅತಿ ಹೆಚ್ಚು ದಂಡ ವಸೂಲಿ ಆಗಿರುವುದು ಉತ್ತರಪ್ರದೇಶದಲ್ಲಿ. ವಸೂಲಾದ ಒಟ್ಟು ದಂಡದ ಮೊತ್ತ 201.9 ಕೋಟಿ ರುಪಾಯಿ. ಆ ನಂತರದ ಸ್ಥಾನಗಳಲ್ಲಿ ಗುಜರಾತ್ ಮತ್ತು ಬಿಹಾರ ಇದೆ.
ಅತ್ಯಂತ ಕಡಿಮೆ ದಂಡ ವಸೂಲಿ ಆಗಿರುವುದು ಗೋವಾದಲ್ಲಿ. ಅಲ್ಲಿ ಕೇವಲ 58 ಚಲನ್ ನೀಡಲಾಗಿದ್ದು, 7,800 ರುಪಾಯಿ ದಂಡ ವಸೂಲಿ ಆಗಿದೆ. ಇನ್ನು ಹೊಸ ಕಾಯ್ದೆಯನ್ನು ಜಾರಿ ಮಾಡದ ಮಹಾರಾಷ್ಟ್ರದಲ್ಲಿ 6,416 ಚಲನ್ ನೀಡಲಾಗಿದೆ. 4.16 ಲಕ್ಷ ರುಪಾಯಿ ದಂಡ ವಸೂಲಿ ಮಾಡಲಾಗಿದೆ.
ಅಂದ ಹಾಗೆ, ಈ ಅಂಕಿ- ಅಂಶಗಳನ್ನು ಬಹಿರಂಗ ಮಾಡಿರುವುದು ರಸ್ತೆ ಸಾರಿಗೆ ಸಚಿವಾಲಯ. ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಈ ಉತ್ತರ ನೀಡಲಾಗಿದೆ. ಕೇಂದ್ರ ಸರ್ಕಾರದ ವಾಹನ್ ಮತ್ತು ಸಾರಥಿ ಡೇಟಾ ಬೇಸ್ ನಲ್ಲಿ ದೊರೆತ ಮಾಹಿತಿಯ ಸಮಗ್ರ ದತ್ತಾಂಶದ ವಿವರ ಇದಾಗಿದೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಕೋರ್ಟ್ ನಲ್ಲಿ ಕಟ್ಟಲಾದ ದಂಡ ಮೊತ್ತದ ಚಲನ್ ವಿವರ ಇದಾಗಿದೆ. ಸಂಚಾರ ಪೊಲೀಸರಿಗೆ ಬಂದ ಆದಾಯದ ವಿವರಗಳು ಇಲ್ಲ ಎಂದಿದ್ದಾರೆ. ಹೊಸದಾಗಿ ಕಾಯ್ದೆ ಜಾರಿಗೆ ಬಂದ ಮೇಲೆ ದೊಡ್ಡ ಮೊತ್ತದ ದಂಡ ಹಾಕುವ ಪದ್ಧತಿ ಜಾರಿಗೆ ಬಂದಿದೆ. ಆದರೆ ಗುಜರಾತ್, ಉತ್ತರಾಖಂಡ್ ಮತ್ತು ತಮಿಳುನಾಡಿನಲ್ಲಿ ದಂಡದ ಮೊತ್ತ ಇಳಿಸಲಾಗಿದೆ.
ಹೊಸ ಕಾಯ್ದೆಯ ಅನ್ವಯ ದೇಶದ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ. ಅಧಿಸೂಚನೆ ಹೊರಡಿಸಲಾಗಿದ್ದು, ದಂಡವನ್ನು ಸ್ಥಳದಲ್ಲೇ ಪೊಲೀಸರಿಗೆ ಪಾವತಿಸಬಹುದು. ಕೋರ್ಟ್ ಗೆ ತೆರಳಿಯೇ ದಂಡ ಪಾವತಿಸಬೇಕು ಎಂದಿಲ್ಲ ಎಂಬ ಮಾತನ್ನು ಗಡ್ಕರಿ ಹೇಳಿದ್ದಾರೆ.
ಸಚಿವಾಲಯದ ಮಾಹಿತಿ ಪ್ರಕಾರ, 2018ನೇ ಇಸವಿಗೆ ಹೋಲಿಸಿದರೆ ಈ ವರ್ಷ ಅಪಘಾತದ ಪ್ರಮಾಣ ಕಡಿಮೆ ಆಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications