ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳು ಸಂಭವಿಸಿದೆ. ಟ್ವಿಟ್ಟರ್ ಈ ಹಿಂದೆ ಸಿಂಗಾಪುರದಲ್ಲಿ ಕಚೇರಿಯನ್ನು ಬಂದ್ ಮಾಡಿದೆ. ಬೆಂಗಳೂರಿನಲ್ಲಿ ಈಗಾಗಲೇ ಕಚೇರಿಯನ್ನು ತೆರವುಗೊಳಿಸಿದೆ. ಈಗ ದೆಹಲಿ ಹಾಗೂ ಮುಂಬೈನಲ್ಲಿ ಕಚೇರಿಯನ್ನು ತೆರವುಗೊಳಿಸುವ ಸಾಧ್ಯತೆಯಿದೆ.
ಟ್ವಿಟ್ಟರ್ ಸಂಸ್ಥೆಯಲ್ಲಿ ನಷ್ಟ ಉಂಟಾಗಲು ಆರಂಭವಾದ ಬಳಿಕ, ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇದಾದ ಬೆನ್ನಲ್ಲೇ ಹಲವಾರು ದೇಶಗಳಲ್ಲಿನ ಟ್ವಿಟ್ಟರ್ ಕಚೇರಿಯನ್ನು ಮುಚ್ಚಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಕಚೇರಿ ಖಾಲಿ ಮಾಡುವ ಪ್ರಕ್ರಿಯೆಯನ್ನು ಟ್ವಿಟ್ಟರ್ ಆರಂಭ ಮಾಡಿದೆ ಎಂದು ವರದಿಗಳು ಉಲ್ಲೇಖಿಸಿದೆ.
ಮುಂಬೈನ ಬಿಕೆಸಿಯ ವಿವೋಕ್ ಫೆಸಿಲೀಟೀಸ್‌ನಲ್ಲಿ ಟ್ವಿಟ್ಟರ್ ಸಂಸ್ಥೆಯ ಸುಮಾರು 150ರಷ್ಟು ಉದ್ಯೋಗಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ದೆಹಲಿಯ ಕತುಬ್ ಪ್ರದೇಶದಲ್ಲಿ 80ರಷ್ಟು ಉದ್ಯೋಗಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮಾಹಿತಿಯ ಪ್ರಕಾರ ಸಂಸ್ಥೆಯು ಬೆಂಗಳೂರಿನಲ್ಲಿನ ಕಚೇರಿಯನ್ನು ಖಾಲಿ ಮಾಡಿದೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಕಚೇರಿ ಬಾಡಿಗೆ ಕಟ್ಟದ ಎಲಾನ್ ಮಸ್ಕ್
ಕಳೆದ ವಾರ ಎಲಾನ್ ಮಸ್ಕ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಟ್ವಿಟ್ಟರ್ ಕಚೇರಿ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದಾದ ಬೆನ್ನಲ್ಲೇ ಸಿಂಗಾಪುರದಲ್ಲಿನ ಕಚೇರಿಯ ಬಾಡಿಗೆಯನ್ನು ಕೂಡಾ ಪಾವತಿಸದ ಕಾರಣ ಕಚೇರಿಯನ್ನು ಬಂದ್ ಮಾಡಲಾಯಿತು. ಈ ಕಚೇರಿಯನ್ನು ಕೆಲಸ ಮಾಡುತ್ತಿದ್ದವರು ಮರುದಿನದಿಂದ ಕಚೇರಿಗೆ ಬರುವುದು ಬೇಡ ಎಂದು ಇಮೇಲ್ ಮೂಲಕ ಮಾಹಿತಿ ನೀಡಲಾಗಿದೆ. ಅವರಿಗೆ ವರ್ಕ್ ಫ್ರಮ್ ಹೋಮ್ ಅನ್ನು ನೀಡಲಾಗಿದೆ.
"ಬಾಡಿಗೆಯನ್ನು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಸಿಂಗಾಪುರದಲ್ಲಿನ ಕಚೇರಿಯಿಂದ ಟ್ವಿಟ್ಟರ್ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಇದು ಏಷ್ಯಾ-ಪೆಸಿಫಿಕ್‌ನ ಮುಖ್ಯ ಕಚೇರಿಯಾಗಿದೆ," ಎಂದು ಕಳೆದ ಗುರುವಾರ ಕೆಸ್ಸಿ ನ್ಯೂಟನ್ ಪ್ಲಾಟ್‌ಫಾರ್ಮ್ ವರದಿ ಮಾಡಿದೆ. "ಉದ್ಯೋಗಿಗಳನ್ನು ಕಟ್ಟಡದ ಮಾಲೀಕ ಹೊರಗೆ ಕಳುಹಿಸಿದ್ದಾರೆ," ಎಂದು ವರದಿಯಾಗಿದೆ.
ಟ್ವಿಟ್ಟರ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ತನ್ನ ಕಚೇರಿಯ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ದೂರು ದಾಖಲು ಮಾಡಲಾಗಿದೆ. ಟ್ವಿಟ್ಟರ್ ಸಂಸ್ಥೆಯು ಆಸ್ತಿಯ ಮಾಲೀಕರಾದ ಕೊಲಾಂಬಿಯಾ ರೈಟ್‌ಗೆ 136,250 ಡಾಲರ್ ಬಾಡಿಗೆ ಮೊತ್ತವನ್ನು ಪಾವತಿಸಿಲ್ಲ. ಯುಎಸ್‌ನಲ್ಲಿರುವ ಈ ಹಾರ್ಟ್‌ಫಾರ್ಡ್ ಬಿಲ್ಡಿಂಗ್‌ನ 30ನೇ ಮಳಿಗೆಯನ್ನು ವಿಶ್ವದ ಎರಡನೇ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಕಚೇರಿಗಾಗಿ ಬಾಡಿಗೆ ಪಡೆದಿದ್ದಾರೆ. ಟ್ಟಿಟ್ಟರ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ತನ್ನ ಮುಖ್ಯ ಕಚೇರಿಯ ಬಾಡಿಗೆಯನ್ನು ಪಾವತಿ ಮಾಡಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ ಎಷ್ಟು ತಿಂಗಳ ಬಾಡಿಗೆಯನ್ನು ಟ್ವಿಟ್ಟರ್ ಪಾವತಿಸಿಲ್ಲ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications