ಕೊರೊನಾ ತಗ್ಗಿದ ಮೇಲೆ ಗಗನಕ್ಕೆ ಚಿಮ್ಮಲಿದೆ ವಿಮಾನ ಪ್ರಯಾಣದ ಟಿಕೆಟ್ ರೇಟ್

ಕೊರೊನಾ ವೈರಾಣು ಪೂರ್ತಿಯಾಗಿ ತನ್ನ ಪ್ರಭಾವ ಕಳೆದುಕೊಂಡ ಮೇಲೆ ವಿಮಾನ ಪ್ರಯಾಣ ದರವು ಕೊರೊನಾಗೆ ಮುಂಚೆ ಇದ್ದ ಬೆಲೆಗಿಂತ ಮೂರು ಪಟ್ಟು ಹೆಚ್ಚಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಿನ ಬಿಕ್ಕಟ್ಟಿನ ನಂತರ ಮುಂದೆ ವ್ಯವಹಾರ ನಡೆಸಿಕೊಂಡು ಹೋಗುವುದು ಹೇಗೆ ಎಂಬುದು ಕೂಡ ಸವಾಲಿನ ವಿಚಾರವಾಗಿದೆ.

ಸವಾಲು ಏಕೆಂದರೆ, ಮೂರನೇ ಒಂದು ಭಾಗದಷ್ಟು ಸಾಮರ್ಥ್ಯದ ಜತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ಮೊದಲ ಹಂತವಾಗಿ ಸೀಟಿನ ವ್ಯವಸ್ಥೆಯು ಒಂದು ಸಾಲಿನಲ್ಲಿ ಒಬ್ಬರೇ ಕೂರುವಂತೆ ಮಾಡಬೇಕಾಗುತ್ತದೆ. ಹೀಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ 180 ಸೀಟಿನ ವ್ಯವಸ್ಥೆಯ ವಿಮಾನದಲ್ಲಿ 60 ಮಂದಿ ಮಾತ್ರ ಪ್ರಯಾಣಿಸಲು ಸಾಧ್ಯ.

ಕೊರೊನಾ ತಗ್ಗಿದ ಮೇಲೆ ಗಗನಕ್ಕೆ ಚಿಮ್ಮಲಿದೆ ವಿಮಾನದ ಟಿಕೆಟ್ ರೇಟ್

ಹೀಗೆ ಕಡಿಮೆ ಪ್ರಯಾಣಿಕರನ್ನು ಕರೆದೊಯ್ಯಬೇಕಾದ್ದರಿಂದ ಪ್ರಯಾಣ ದರವು ಒಂದೂವರೆಯಿಂದ ಮೂರು ಪಟ್ಟು ಹೆಚ್ಚು ಮಾಡಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಇಂಡಿಗೋ ಯೋಜನೆ ರೂಪಿಸಲು ಆರಂಭಿಸಿದೆ. ಅದರ ಪ್ರಕಾರ, ನಿಲ್ದಾಣದಲ್ಲಿ ವಿಮಾನದ ತನಕ ಪ್ರಯಾಣಿಕರನ್ನು ಕರೆದೊಯ್ಯಬೇಕಲ್ಲ, ಅದಕ್ಕೆ ಬಳಸುವ ಬಸ್ಸಿನಲ್ಲಿ ಒಟ್ಟು ಸಾಮರ್ಥ್ಯದ ಶೇಕಡಾ ಐವತ್ತರಷ್ಟು ಮಂದಿಯನ್ನು ಮಾತ್ರ ಕರೆದೊಯ್ಯಲಾಗುತ್ತದೆ. ಇನ್ನು ತಾತ್ಕಾಲಿಕವಾಗಿ ವಿಮಾನದಲ್ಲಿ ಊಟದ ವ್ಯವಸ್ಥೆ ರದ್ದು ಮಾಡಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+