2021ನೇ ಇಸವಿಯಲ್ಲೂ ವಿಮಾನ ಯಾನದ ಬೇಡಿಕೆ ಚೇತರಿಸಿಕೊಳ್ಳುವುದು ಅನಿಶ್ಚಿತ ಎಂದು ವಿಮಾನಯಾನ ಕನ್ಸಲ್ಟೆಂಟ್ ಆದ ಸೆಂಟರ್ ಫಾರ್ ಏಷ್ಯಾ ಪೆಸಿಫಿಕ್ ಏವಿಯೇಷನ್ (CAPA) ಅಭಿಪ್ರಾಯ ಪಟ್ಟಿದೆ. ಅದರಲ್ಲೂ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಬೇಡಿಕೆ ಕುದುರುವುದು ಕಷ್ಟ ಎಂದಿದೆ.
CAPA ಪ್ರಕಾರ, ಅಂತರರಾಷ್ಟ್ರೀಯ ವಿಮಾನ ಸಂಚಾರವು 2020ರ ಹಣಕಾಸು ವರ್ಷದಲ್ಲಿ ಇದ್ದ ಸ್ಥಿತಿಯ 35ರಿಂದ 40%ನಷ್ಟು ಚೇತರಿಕೆ ಕಾಣಬಹುದು. ಇನ್ನು ದೇಶೀಯ ವಿಮಾನ ಸಂಚಾರಕ್ಕೆ ಬಂದರೆ, 2021- 22ನೇ ಸಾಲಿನಲ್ಲಿ 2020ರ ಹಣಕಾಸು ವರ್ಷದ 70ರಿಂದ 80 ಪರ್ಸೆಂಟ್ ನಷ್ಟಕ್ಕೆ ಮುಟ್ಟಬಹುದು.
ಕೊರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಮುನ್ನ ವಾಣಿಜ್ಯ, ಎಂಐಸಿಇ, ವಿರಾಮ ಹಾಗೂ ವಿದೇಶಿಗರು ದೇಶೀ ವಿಮಾನಗಳಲ್ಲಿ ಸಂಚರಿಸುತ್ತಿದ್ದ ಪ್ರಮಾಣದ ಅಂದಾಜು 55% ಹಿಂತಿರುಗಬಹುದು. ಆದರೆ ಅದಕ್ಕಾಗಿ ಕೊರೊನಾ ನಿಯಂತ್ರಣ ಆಗಬೇಕು ಮತ್ತು ಲಸಿಕೆ ಹಾಕಬೇಕು ಎಂದು ಹೇಳಲಾಗಿದೆ.

CAPA ತಿಳಿಸುವಂತೆ, ಕಡಿಮೆ ಪ್ರಯಾಣ ದರದದ ಮೂಲಕ ಬೇಡಿಕೆಯನ್ನು ಉತ್ತೇಜಿಸಬೇಕು. ಆದರೆ ಕೆಲವು ಸಂಸ್ಥೆಗಳು ದರ ಮಿತಿಯನ್ನು ವಿರೋಧಿಸಿವೆ. ಆದ್ದರಿಂದ ನಿಯಮಾವಳಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications