ಸಹಾಯಕ್ಕಾಗಿ ಸುಪ್ರೀಂಕೋರ್ಟ್ ಕದ ತಟ್ಟಿದ ಏರ್‌ಟೆಲ್, ವೊಡಾಫೋನ್, ಐಡಿಯಾ

ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೊಡಾಫೋನ್ , ಐಡಿಯಾ ಹೊಂದಾಣಿಕೆಯ ಒಟ್ಟು ಆದಾಯದ ಕುರಿತಾದ ದಂಡ ಮತ್ತು ಬಾಕಿ ಮೊತ್ತದ ಬಡ್ಡಿಗಳ ಮರುಪರಿಶೀಲನೆ ಕೋರಿ ಪ್ರತ್ಯೇಕ ಅರ್ಜಿಗಳನ್ನು ಶುಕ್ರವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿವೆ.

ಅಕ್ಟೋಬರ್ 24ರ ಸುಪ್ರೀಂ ಕೋರ್ಟ್ ತೀರ್ಪಿನ ಸಂಪೂರ್ಣ ಆದೇಶವನ್ನು ಪ್ರಶ್ನಿಸದೆ, ಸೀಮಿತ ಪರಿಶೀಲನೆಗೆ ಈ ಟೆಲಿಕಾಂ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಹೊಂದಾಣಿಕೆಯ ಒಟ್ಟು ಆದಾಯ, 1.47ಲಕ್ಷ ಕೋಟಿ ರುಪಾಯಿ ಹೆಚ್ಚುವರಿ ಪರವಾನಗಿ ಶುಲ್ಕ, ಸ್ಪೆಕ್ಟ್ರಮ್ ಬಳಕೆಯ ಶುಲ್ಕ(SUC) ಸೇರಿದಂತೆ ಮೂರು ತಿಂಗಳ ಪಾವತಿ ಗಡುವನ್ನು ವಿಸ್ತರಿಸಲು ಸಹ ಕೋರಿಲ್ಲ.

ಸಹಾಯಕ್ಕಾಗಿ ಸುಪ್ರೀಂಕೋರ್ಟ್ ಕದ ತಟ್ಟಿದ ಏರ್‌ಟೆಲ್, ವೊಡಾಫೋನ್, ಐಡಿಯಾ

ಹೊಂದಾಣಿಕೆಯ ಒಟ್ಟು ಆದಾಯ(AGR) ಆಧಾರದ ಮೇಲೆ ಪರವಾನಗಿ ಶುಲ್ಕ ಹಾಗೂ ಸ್ಪೆಕ್ಟ್ರಮ್ ಬಳಕೆಯ ಶುಲ್ಕವನ್ನು ಹಾಕಲಾಗುತ್ತದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ವೊಡಾಫೋನ್ , ಐಡಿಯಾ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು.

2019-20ರ ಹಣಕಾಸಿನ ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ಏರ್‌ಟೆಲ್, ವೋಡಾಫೋನ್, ಐಡಿಯಾ ಒಟ್ಟಾರೆ 74,000 ಕೋಟಿ ರುಪಾಯಿ ನಷ್ಟ ಅನುಭವಿಸಿವೆ. ಸರ್ಕಾರಕ್ಕೆ ನೀಡಬೇಕಿದ್ದ ಬೃಹತ್ ಪ್ರಮಾಣದ ಬಾಕಿ ಮೊತ್ತವನ್ನು ಪಾವತಿಸಬೇಕಿದ್ದ ಸಂಸ್ಥೆಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದ್ದು ನಷ್ಟದ ಹಾದಿ ಹಿಡಿದಿವೆ. ನಷ್ಟವನ್ನು ತಗ್ಗಿಸಲು ಹರಸಾರಹ ಪಡುತ್ತಿರುವ ಈ ಮೂರು ಟೆಲಿಕಾಂ ಸಂಸ್ಥೆಗಳು ಇದೀಗ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+