ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಟ ಅಕ್ಷಯ್ ಕುಮಾರ್ ಅಪರಿಚಿತರೇನಲ್ಲ. ಬಹಳ ಹಿಂದೆಯೇ ವಿಷ್ಣು- ವಿಜಯ್ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಜತೆ ಅಭಿನಯ ಮಾಡಿದ್ದರು ಅಕ್ಷಯ್. ಇದೀಗ ಅಕ್ಷಯ್ ಕುಮಾರ್ ಬಗ್ಗೆ 'ಕಾಸ್ ಸುದ್ದಿ'ಯೊಂದಿದೆ.
ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು- 2019 ಎಂಬ ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು ಅಕ್ಷಯ್ ಕುಮಾರ್. ಇದೀಗ ಬಂದಿರುವ ಸುದ್ದಿ ಪ್ರಕಾರ: 120 ಕೋಟಿ ರುಪಾಯಿ ಪಡೆಯುವುದರೊಂದಿಗೆ ಹಿಂದಿ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.
ತನು ವೆಡ್ಸ್ ಮನು ಸಿನಿಮಾದ ನಿರ್ದೇಶಕ ಆನಂದ್ ಎಲ್. ರಾಯ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಮನರಂಜನೆ ವೆಬ್ ಸೈಟ್ ಮಾಡಿರುವ ವರದಿ ಪ್ರಕಾರ, ಆ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅಕ್ಷಯ್ ಕುಮಾರ್ 120 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಇನ್ನೂ ಹೆಸರಿಡದ ಆ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಮತ್ತು ಧನುಷ್ ಕೂಡ ಅಭಿನಯಿಸುತ್ತಿದ್ದಾರೆ.

ಸಿನಿಮಾದ ಶುರುವಿನಲ್ಲೇ ಅಕ್ಷಯ್ ಕುಮಾರ್ ಸಂಭಾವನೆ ಪಡೆಯುತ್ತಾರೆ. ಅಂದ ಹಾಗೆ ಸಿನಿಮಾದಲ್ಲಿ ಅಕ್ಷಯ್ ಅಭಿನಯಿಸುತ್ತಾರೆ ಅಂದರೆ, ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವುದಷ್ಟೇ ಅಲ್ಲ, ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಿಂದಲೂ ಒಳ್ಳೆ ದರ ಸಿಗುತ್ತದೆ.
ಅಂದ ಹಾಗೆ, ಅಕ್ಷಯ್ ಮತ್ತು ಅವರ ತಂಡದವರು ನಂಬುವಂತೆ, ಯಾವುದೇಎ ಸಿನಿಮಾಗೆ ಅಕ್ಷಯ್ ಕುಮಾರ್ ಅಭಿನಯದ ಮೂಲಕ ಬರುವ ಹೆಸರು, ವರ್ಚಸ್ಸಿಗೆ 100 ಕೋಟಿ ರುಪಾಯಿ ಸಂಭಾವನೆ ಪಡೆಯಬಹುದು. ಇನ್ನು ಆನಂದ್ ಸಿನಿಮಾವು 2020ರ ದ್ವಿತೀಯಾರ್ಧದಲ್ಲಿ ಶುರುವಾಗುತ್ತದೆ. ಇನ್ನು 2ರಿಂದ 3 ವಾರಗಳಲ್ಲಿ ಸಿನಿಮಾ ಘೋಷಣೆ ಆಗುತ್ತದೆ.
2019ರಲ್ಲಿ ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ಗುಡ್ ನ್ಯೂಜ್ 200 ಕೋಟಿ, ಕೇಸರಿ, ಮಿಷನ್ ಮಂಗಲ್ ಮತ್ತು ಹೌಸ್ ಫುಲ್ 4 ಸಿನಿಮಾಗಳು ಕ್ರಮವಾಗಿ 154 ಕೋಟಿ, 202 ಕೋಟಿ ಮತ್ತು 194 ಕೋಟಿ ಗಳಿಸಿವೆ. ಅಕ್ಷಯ್ ಅಭಿನಯದ ಸೂರ್ಯವಂಶಿ, ಲಕ್ಷ್ಮೀ ಬಾಂಬ್ ಮತ್ತು ಪೃಥಿರಾಜ್ ಸಿನಿಮಾಗಳು ಬಿಡುಗಡೆ ಆಗಬೇಕಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications