For Quick Alerts
ALLOW NOTIFICATIONS  
For Daily Alerts

Alert..! ಏಪ್ರಿಲ್ 1ರಿಂದ ಈ ಎಲ್ಲಾ ವಸ್ತುಗಳ ಬೆಲೆ ದುಬಾರಿಯಾಗಲಿದೆ!

|

ಏಪ್ರಿಲ್ 1ರಿಂದ ಅನೇಕ ನಿಯಮಗಳ ಬದಲಾವಣೆ ಜೊತೆಗೆ ಹಲವು ವಸ್ತುಗಳು ಮತ್ತು ಸೇವೆಗಳು ದುಬಾರಿಯಾಗಲಿದೆ. ಇಂದು 2020-21ರ ಆರ್ಥಿಕ ವರ್ಷದ ಕೊನೆಯ ದಿನವಾಗಿದ್ದು, ನಾಳೆ ಅಂದರೆ ಏಪ್ರಿಲ್ 1, 2021-22ರ ಆರ್ಥಿಕ ವರ್ಷದ ಮೊದಲ ದಿನವಾಗಿದೆ.

ನಾಳೆಯಿಂದ ವಿವಿಧ ಕಾರಣಗಳಿಂದ ಗೃಹಪಯೋಗಿ ವಸ್ತುಗಳು ಸೇರಿದಂತೆ, ಮೋಟಾರು ವಾಹನಗಳ ಬೆಲೆ ಹೆಚ್ಚಳವಾಗಲಿದೆ. ಇದರಲ್ಲಿ ದಿನ ಬಳಕೆಯ ವಸ್ತುಗಳು ಸಹ ಇವೆ. ಈ ಕೆಳಗಿನ ವಸ್ತುಗಳನ್ನು ಹಾಗೂ ಸೇವೆಗಾಗಿ ನಾಳೆಗಾಗಿ ಕಾದು ನೋಡಿದರೆ ಹೆಚ್ಚಿನ ಬೆಲೆ ಕೊಡಬೇಕಾಗಬಹುದು. ಹಾಗಿದ್ದರೆ ಏಪ್ರಿಲ್ 1ರಿಂದ ಏನೆಲ್ಲಾ ದುಬಾರಿಯಾಗುತ್ತಿದೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಟಿವಿ ಬೆಲೆ ಹೆಚ್ಚಳವಾಗಲಿದೆ

ಟಿವಿ ಬೆಲೆ ಹೆಚ್ಚಳವಾಗಲಿದೆ

ದೇಶದಲ್ಲಿ ಎಲ್ಇಡಿ ಟಿವಿಗಳ ಬೆಲೆ ಕನಿಷ್ಠ 2,000 ರಿಂದ 3,000 ರೂ. ಹೆಚ್ಚಾಗಬಹುದು. ಎಲ್ಇಡಿ ಟಿವಿ ಮತ್ತು ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮುಂತಾದ ಉಪಕರಣಗಳು ಮುಂದಿನ ತಿಂಗಳಿಂದ ಶೇಕಡಾ 10ರಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಪ್ರಮುಖ ಇನ್ಪುಟ್ ವಸ್ತುಗಳಾದ ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕಿನ ಬೆಲೆ ಏರಿಕೆ ಮತ್ತು ಸಮುದ್ರ ಮತ್ತು ವಾಯು ಸರಕುಗಳ ಹೆಚ್ಚಳ ಇದಕ್ಕೆ ಕಾರಣ.

ಕಳೆದ ಒಂದು ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಓಪನ್-ಸೆಲ್ ಪ್ಯಾನೆಲ್‌ಗಳ ಬೆಲೆ 35% ರಷ್ಟು ಏರಿಕೆಯಾಗಿರುವುದರಿಂದ ಎಲ್ಇಡಿ ಟಿವಿಗಳ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. ಕಚ್ಚಾ ಬೆಲೆ ಹೆಚ್ಚಳದಿಂದಾಗಿ ಪ್ಲಾಸ್ಟಿಕ್ ಕೂಡ ದುಬಾರಿಯಾಗಿದೆ.

 

ಕಾರು, ಬೈಕು, ಸ್ಕೂಟರ್‌ ಮತ್ತು ಟ್ರ್ಯಾಕ್ಟರ್ ಬೆಲೆ ಏರಿಕೆ?

ಕಾರು, ಬೈಕು, ಸ್ಕೂಟರ್‌ ಮತ್ತು ಟ್ರ್ಯಾಕ್ಟರ್ ಬೆಲೆ ಏರಿಕೆ?

ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಹೊರತಾಗಿ, ಅನೇಕ ಕಾರು ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಕಂಪೆನಿಗಳ ವೆಚ್ಚ ಹೆಚ್ಚಳವೇ ಇದಕ್ಕೆ ಕಾರಣ. ಮಾರುತಿ ಜೊತೆಗೆ, ರೆನಾಲ್ಟ್ ಮತ್ತು ನಿಸ್ಸಾನ್ ತಮ್ಮ ಕಾರುಗಳನ್ನು ನಾಳೆಯಿಂದ ದುಬಾರಿಯಾಗಿಸಲಿವೆ. ಅದೇ ಸಮಯದಲ್ಲಿ, ಹೀರೋ ಮೊಟೊಕಾರ್ಪ್ ಬೈಕು ಮತ್ತು ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದಲ್ಲದೆ ಏಪ್ರಿಲ್ 1 ರಿಂದ ಟ್ರಾಕ್ಟರ್‌ಗಳು ಸಹ ದುಬಾರಿಯಾಗುತ್ತವೆ.

ಮೊಬೈಲ್ ಮತ್ತು ಪರಿಕರಗಳು
 

ಮೊಬೈಲ್ ಮತ್ತು ಪರಿಕರಗಳು

ಏಪ್ರಿಲ್ 1 ರಿಂದ ಮೊಬೈಲ್ ಮತ್ತು ಅದರ ಪರಿಕರಗಳ ಬೆಲೆಯೂ ಏರಿಕೆಯಾಗಲಿದೆ. ವಿಶೇಷವೆಂದರೆ, ಈ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಲು ಪ್ರಸ್ತಾಪಿಸಿದ್ದರು. ಈ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ ಮೊಬೈಲ್ ಚಾರ್ಜರ್‌ಗಳು, ಅಡಾಪ್ಟರುಗಳು, ಬ್ಯಾಟರಿಗಳು ಮತ್ತು ಹೆಡ್‌ಫೋನ್‌ಗಳು ಸೇರಿವೆ. ಆಮದು ಸುಂಕ ಹೆಚ್ಚಳದಿಂದಾಗಿ ಸ್ಮಾರ್ಟ್‌ಫೋನ್‌ಗಳು ಸಹ ದುಬಾರಿಯಾಗುತ್ತವೆ.

ಎಸಿ, ರೆಫ್ರಿಜರೇಟರ್ ಮತ್ತು ಸ್ಟೀಲ್

ಎಸಿ, ರೆಫ್ರಿಜರೇಟರ್ ಮತ್ತು ಸ್ಟೀಲ್

ರೆಫ್ರಿಜರೇಟರ್, ಫ್ರೀಜರ್‌ಗಳಲ್ಲಿ ಫೋಮ್‌ಗಳ ತಯಾರಿಕೆಯಲ್ಲಿ ಬಳಸುವ ಎಂಡಿಐ ಎಂಬ ರಾಸಾಯನಿಕ ಬೆಲೆ ಶೇಕಡಾ 200 ರಷ್ಟು ಏರಿಕೆಯಾಗಿದೆ. ಹೀಗಾಗಿ ಉತ್ಪಾದನಾ ವೆಚ್ಚದಲ್ಲಿ ಬೆಲೆ ಏರಿಕೆ ಸಾಧ್ಯತೆ ಇದ್ದು, ಮುಂದಿನ ತಿಂಗಳ ಆರಂಭದಿಂದ ಗೃಹೋಪಯೋಗಿ ಸರಕುಗಳ ಬೆಲೆ ಹೆಚ್ಚುವ ಸಾಧ್ಯತೆ ಇದೆ.

ಬೇಸಿಗೆ ದಗೆ ಕೂಡ ಹೆಚ್ಚಿದ್ದು ಇದರೊಂದಿಗೆ ಹಣದುಬ್ಬರವೂ ಏರತೊಡಗಿದೆ. ಬಿಸಿಲ ದಗೆಯಿಂದ ಬಚಾವಾಗಲು ಸಾಧ್ಯವಿಲ್ಲ ಹೀಗಾಗಿ ಎಸಿ, ರೆಫ್ರಿಜರೇಟರ್ ಖರೀದಿಸಲು ಮುಂದಾದರೂ ಹೆಚ್ಚಿನ ಹಣ ತೆರಬೇಕಾಗಿದೆ.

ಈಗ ಎಸಿಗೆ 2000 ರೂ. ದುಬಾರಿಯಾಗುವ ಸಾಧ್ಯತೆಯಿದೆ. ಇವುಗಳಲ್ಲದೆ, ಜೆಎಸ್‌ಡಬ್ಲ್ಯೂ ಸ್ಟೀಲ್, ಜೆಎಸ್‌ಪಿಎಲ್, ಮತ್ತು ಟಾಟಾ ಸ್ಟೀಲ್ ಸೇರಿದಂತೆ ಅನೇಕ ಕಂಪನಿಗಳು ಉಕ್ಕನ್ನು ದುಬಾರಿಯಾಗಿಸಬಹುದು. ಇದು ಉಕ್ಕಿನಿಂದ ಮಾಡಿದ ವಸ್ತುಗಳನ್ನು ದುಬಾರಿಯಾಗಿಸಬಹುದು.

 

ವಿಮಾನ ಟಿಕೆಟ್ ದರ ಹೆಚ್ಚಾಗಲಿದೆ

ವಿಮಾನ ಟಿಕೆಟ್ ದರ ಹೆಚ್ಚಾಗಲಿದೆ

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​ವಾಯು ಭದ್ರತಾ ಶುಲ್ಕವನ್ನು ಹೆಚ್ಚಿಸಲಿದ್ದು, ಇದು ನಾಳೆಯಿಂದ ವಿಮಾನ ಪ್ರಯಾಣವನ್ನು ದುಬಾರಿಯಾಗಿಸಲಿದೆ. ದೇಶೀಯ ಪ್ರಯಾಣಿಕರು ಇದಕ್ಕಾಗಿ 200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ವಿದೇಶಿ ಪ್ರಯಾಣಿಕರು $ 12 (ಸುಮಾರು 900 ರೂಪಾಯಿ) ಪಾವತಿಸಬೇಕಾಗುತ್ತದೆ.

ವಿಮೆ ಪ್ರೀಮಿಯಂ ಬೆಲೆ ಕೂಡ ಹೆಚ್ಚಲಿದೆ!

ವಿಮೆ ಪ್ರೀಮಿಯಂ ಬೆಲೆ ಕೂಡ ಹೆಚ್ಚಲಿದೆ!

ಇನ್ನು ನೀವು ವಿಮಾ ಪಾಲಿಸಿಯನ್ನು ಹೊಂದಿದ್ದರೆ ಅಲ್ಲೂ ಕೂಡ ಹೆಚ್ಚಿನ ಹಣ ತೆರಬೇಕಾಗಬಹುದು. ಏಕೆಂದರೆ ಏಪ್ರಿಲ್ 1 ರಿಂದ, ಟರ್ಮ್ ಇನ್ಶುರೆನ್ಸ್ ಪ್ರೀಮಿಯಂ ದುಬಾರಿಯಾಗಲಿದೆ. ಹೊಸ ಹಣಕಾಸು ವರ್ಷದಲ್ಲಿ, ವಿಮಾ ಪ್ರೀಮಿಯಂ ಶೇ. 10 ರಿಂದ 15 ಪ್ರತಿಶತದಷ್ಟು ದುಬಾರಿಯಾಗಲಿದೆ.

ಬಿಯರ್ ಬೆಲೆ ಕೂಡ ಹೆಚ್ಚಾಗಲಿದೆ!

ಬಿಯರ್ ಬೆಲೆ ಕೂಡ ಹೆಚ್ಚಾಗಲಿದೆ!

ಏಪ್ರಿಲ್ 1 ರಿಂದ ಜಾರಿಗೆ ಬರುವ ಹೊಸ ಹಣಕಾಸು ವರ್ಷದೊಂದಿಗೆ ಬಿಯರ್ ಬೆಲೆ ಕೂಡ ಹೆಚ್ಚಾಗಲಿದೆ. ದೆಹಲಿ ಎನ್‌ಸಿಆರ್, ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶದಾದ್ಯಂತದ ಮದ್ಯವನ್ನು ಪರಿಷ್ಕೃತ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ದೆಹಲಿಯ ಅಧಿಕಾರಿಗಳು ಈಗಿರುವ ಸಂಗ್ರಹವನ್ನು ಮೂರು ತಿಂಗಳಲ್ಲಿ ಒಂದೇ ಬೆಲೆಗೆ ತೆರವುಗೊಳಿಸುವಂತೆ ಮಳಿಗೆಗಳಿಗೆ ನಿರ್ದೇಶನ ನೀಡಿದ್ದಾರೆ. ಇನ್ನುಳಿದ ಕೆಲವು ರಾಜ್ಯಗಳಲ್ಲಿ ಪರಿಷ್ಕೃತ ಬೆಲೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಇಷ್ಟಲ್ಲದೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮದ್ಯವು ಹೆಚ್ಚು ದುಬಾರಿಯಾಗಲಿದೆ

 

English summary

Alert: These Things Can Be Expensive From April 1

Almost everything will be more costly as April begins, from milk to electricity to cars and bikes to air travel and smartphones. Know more
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X