1 ಗಂಟೆಯಲ್ಲಿ 85,773 ಕೋಟಿ ರುಪಾಯಿ ವಹಿವಾಟು ನಡೆಸಿದ ಅಲಿಬಾಬಾ

ಚೀನಾದ ಬಹುದೊಡ್ಡ ಇ-ಕಾಮರ್ಸ್ ಸಂಸ್ಥೆ ಅಲಿಬಾಬಾ ಕೇವಲ 1 ಗಂಟೆಯಲ್ಲಿ ದಾಖಲೆಯ ವಹಿವಾಟು ನಡೆಸುವುದರ ಮೂಲಕ ವಿಶ್ವದಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಸೋಮವಾರ (ನವೆಂಬರ್ 11) ಜಾಗತಿಕ ಶಾಪಿಂಗ್ ಫೆಸ್ಟಿವಲ್ ಆರಂಭಿಸಿರುವ ಅಲಿಬಾಬಾ, ಮೊದಲ 1 ನಿಮಿಷ 8 ಸೆಕೆಂಡ್‌ಗಳಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್(ಭಾರತದ ರುಪಾಯಿಗಳಲ್ಲಿ 7,147 ಕೋಟಿ 75 ಲಕ್ಷ) ವಹಿವಾಟು ನಡೆಸಿತು. ಹಾಗೆಯೇ ಮೊದಲ ಒಂದು ಗಂಟೆಯಲ್ಲಿ 12 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 85,773 ಕೋಟಿ) ಮೊತ್ತದ ಸರಕುಗಳು ಮಾರಾಟಗೊಂಡಿವೆ.

1 ಗಂಟೆಯಲ್ಲಿ 85,773 ಕೋಟಿ ರುಪಾಯಿ ವಹಿವಾಟು ನಡೆಸಿದ ಅಲಿಬಾಬಾ

ಡಬಲ್ 11 ಅಥವಾ ಸಿಂಗಲ್ಸ್ ಡೇ ಎಂದು ಕರೆಯಲಾಗುವ ಈ ಶಾಪಿಂಗ್ ಫೆಸ್ಟಿವಲ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು 2016ರ 11.11 ಶಾಪಿಂಗ್ ಫೆಸ್ಟಿವಲ್‌ ಒಟ್ಟು ಮಾರಾಟ ಮೌಲ್ಯವನ್ನ ಮೀರಿದೆ. ಮೊದಲ 9 ಗಂಟೆಯಲ್ಲಿ 23 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 1 ಲಕ್ಷದ 64 ಸಾವಿರ ಕೋಟಿ) ವಹಿವಾಟು ನಡೆಸಿದೆ.

ದೇಶೀಯ ಮಾರುಕಟ್ಟೆಯಲ್ಲಿ 12,000 ಕೋಟಿ ರುಪಾಯಿ ಹೂಡಿಕೆ

ಡಬಲ್ 11 ಎಂದು ಕರೆಯಲ್ಪಡುವ ಈ ಶಾಪಿಂಗ್ ಫೆಸ್ಟಿವಲ್‌ 2009ರಲ್ಲಿ ಮೊದಲು ಆರಂಭವಾಯಿತು. ಆ ವೇಳೆ 27 ಬ್ರ್ಯಾಂಡ್ ಗಳಷ್ಟೇ ಭಾಗವಹಿಸಿದ್ದವು. ಇದೀಗ ಈ ಶಾಪಿಂಗ್ ಫೆಸ್ಟಿವಲ್‌ ನಲ್ಲಿ 2 ಲಕ್ಷ ಬ್ರ್ಯಾಂಡ್ ಗಳು ಸೇರಿಕೊಂಡಿವೆ. ಅಲ್ಲದೆ 2009ರಲ್ಲಿ ನಡೆದಿದ್ದ ಖರೀದಿಗಿಂತಲೂ 1,360 ಪಟ್ಟು ಹೆಚ್ಚು ವಹಿವಾಟು ನಡೆದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+