For Quick Alerts
ALLOW NOTIFICATIONS  
For Daily Alerts

ದೇಶೀಯ ಮಾರುಕಟ್ಟೆಯಲ್ಲಿ 12,000 ಕೋಟಿ ರುಪಾಯಿ ಹೂಡಿಕೆ

|

ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣೆಗಳ ನಂತರ ನವೆಂಬರ್ ಮೊದಲ ವಾರದಲ್ಲೇ ವಿದೇಶಿ ಹೂಡಿಕೆದಾರರು, ದೇಶೀಯ ಮಾರುಕಟ್ಟೆಯಲ್ಲಿ 12,000 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆದಾರರು (FPI) 6,433.8 ಕೋಟಿ ರುಪಾಯಿ ಷೇರುಗಳನ್ನು ಹಾಗೂ 5,673.87 ಕೋಟಿ ರುಪಾಯಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಈ ಮೂಲಕ ನವೆಂಬರ್ 1 ರಿಂದ 9ರವರೆಗೆ 12,108 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಆರ್ಥಿಕ ಸುಧಾರಣಾ ಕ್ರಮಗಳ ಘೋಷಣೆಯಿಂದಾಗಿ ಷೇರುಪೇಟೆ ವಹಿವಾಟು ಸುಧಾರಣೆಗೊಂಡಿದ್ದು, ಬಂಡವಾಳ ಒಳಹರಿವು ಹೆಚ್ಚಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ 12,000 ಕೋಟಿ ರುಪಾಯಿ ಹೂಡಿಕೆ

ಈ ಬಂಡವಾಳ ಒಳಹರಿವು ಸತತ 2 ತಿಂಗಳ ಬಳಿಕ ಹೆಚ್ಚಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರು(FPI) ಅಕ್ಟೋಬರ್‌ ತಿಂಗಳಿನಲ್ಲಿ 16, 464.6 ಕೋಟಿ ರುಪಾಯಿ ಮತ್ತು ಸೆಪ್ಟೆಂಬರ್ ನಲ್ಲಿ 6,552.8 ಕೋಟಿ ರುಪಾಯಿ ಹೂಡಿಕೆ ಮಾಡಿದ್ದರು.

'ಹೂಡಿಕೆದಾರರು ಪೂರ್ಣ ಪ್ರಮಾಣದ ಮನಸ್ಸಿನಿಂದ ವಹಿವಾಟು ನಡೆಸುತ್ತಿಲ್ಲ. ಈ ವಾರದಲ್ಲಿ ಪ್ರತಿ ದಿನ ಸರಾಸರಿ 550 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ, ಈ ಹಿಂದೆ ಪ್ರತಿ ದಿನ 1,500 ಕೋಟಿಗಳಿಂದ 2,000 ಕೋಟಿ ರುಪಾಯಿಗಳವರೆಗೂ ಹೂಡಿಕೆ ಮಾಡುತ್ತಿದ್ದರು' ಎಂದು ಸ್ಯಾಮ್ಕೊ ಸೆಕ್ಯುರಿಟೀಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ಉಮೇಶ್ ಮೆಹ್ತಾ ಹೇಳಿದ್ದಾರೆ.

'ದೇಶೀಯ ಆರ್ಥಿಕತೆ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಿರುವುದು, ಬ್ಯಾಂಕುಗಳ ಮರು ಬಂಡವಾಳೀಕರಣವು ಲಾಭಾಂಶವನ್ನು ಪಾವತಿಸಲು ಆರಂಭಿಸಿದೆ. ಷೇರು ಮಾರುಕಟ್ಟೆಗಳು ಹೊಸ ಸಾರ್ವಕಾಲಿಕ ಗರಿಷ್ಟ ಮಟ್ಟವನ್ನು ಮುಟ್ಟುತ್ತಿವೆ. ನಿರೀಕ್ಷಿತ ಗಳಿಕೆಯ ಬೆಳವಣಿಗೆಗಿಂತಲೂ, ಹೂಡಿಕೆದಾರರನ್ನು ಉತ್ತೇಜಿಸುತ್ತಿದೆ' ಎಂದು ಮಾರ್ನಿಂಗ್‌ಸ್ಟಾರ್ ಹೂಡಿಕೆ ಸಲಹೆಗಾರ ಸಂಸ್ಥೆಯ ಹಿರಿಯ ವಿಶ್ಲೇಷಕ ವ್ಯವಸ್ತಾಪಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

English summary

FPI Invest Rs 12,000 Crore In First Week Of November

Overseas investors remained net buyers in the domestic capital markets with an investment of over Rs. 12,000 crore in first week of november
Story first published: Monday, November 11, 2019, 11:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X