ಹಿಂದೂಗಳ ಪವಿತ್ರ ಯಾತ್ರಾಸ್ಥಳ ಅಮರನಾಥ ಯಾತ್ರೆಗೆ(Amarnath Yatra) ಹೋಗಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅಮರನಾಥ ಯಾತ್ರೆಗೆ ಹೋಗುವ ಯಾತ್ರೆಗಳಿಗೆ ನೋಂದಣಿಯಿಂದ ಹಿಡಿದು ಆರೋಗ್ಯ ತಪಾಸಣೆ ಹಾಗೂ ಅಲ್ಲಿಗೆ ಹೋಗಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸಂಪೂರ್ಣ ಮಾರ್ಗಸೂಚಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಹೌದು, ಹಿಂದೂಗಳ ಪವಿತ್ರ ಯಾತ್ರಾಸ್ಥಳ ಅಮರನಾಥ ಯಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಮಂದಿ ಹೋಗಿ ಅಮರನಾಥನ ದರ್ಶನ ಪಡೆದು ಬರುತ್ತಾರೆ.
2025 ರ ಅಮರನಾಥ ಯಾತ್ರೆಯ ಪ್ರಮುಖ ದಿನಾಂಕಗಳು
2025 ರ ಅಮರನಾಥ ಯಾತ್ರೆಯ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ
ನೋಂದಣಿ ಪ್ರಕ್ರಿಯೆಯು ಏಪ್ರಿಲ್ 14, 2025 ರಂದು ಪ್ರಾರಂಭವಾಯಿತು.ಯಾತ್ರಿಕರು ತಮ್ಮ ಸ್ಥಳವನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ.
ಅಮರನಾಥ ಯಾತ್ರೆ ಜುಲೈ 25, 2025 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 19, 2025 ರವರೆಗೆ ನಡೆಯಲಿದೆ.
ನೋಂದಣಿ ಮಾಡುವುದು ಹೇಗೆ..?
ಯಾತ್ರಿಕರು ಶ್ರೀ ಅಮರನಾಥ ಜೀ ದೇವಾಲಯ ಮಂಡಳಿಯ (SASB) ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ದೇಶಾದ್ಯಂತ ಗೊತ್ತುಪಡಿಸಿದ 540 ಬ್ಯಾಂಕ್ ಶಾಖೆಗಳ ಮೂಲಕ ಆಫ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
ಆನ್‌ಲೈನ್ ನೋಂದಣಿ ಹಂತಗಳು ಈ ಕೆಳನಂತೆ ಇವೆ.
1. ನೀವು ಅಧಿಕೃತ SASB ಪೋರ್ಟಲ್ https://jksasb.nic.in ಗೆ ಭೇಟಿ ನೀಡಿ.
2. ಯಾತ್ರಾ 2025 ನೋಂದಣಿ" ಮೇಲೆ ಕ್ಲಿಕ್ ಮಾಡಿ.
3. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
ಏಪ್ರಿಲ್ 15, 2025 ರ ನಂತರ ನೀಡಲಾದ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC)
ಸರ್ಕಾರ ಮಾನ್ಯ ಮಾಡಿರುವ ID ಪುರಾವೆ
4. ನೋಂದಣಿಯನ್ನು ಪೂರ್ಣಗೊಳಿಸಲು ಪಾವತಿ ಮಾಡಿ.
ಆಫ್‌ಲೈನ್ ನಲ್ಲಿ ನೋಂದಣಿ ಹೇಗೆ?
ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ಗಳ ನಿರ್ದಿಷ್ಟ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿಯನ್ನು ಮಾಡಲಾಗುತ್ತಿದೆ. ವೈಯಕ್ತಿಕವಾಗಿ ನೋಂದಾಯಿಸುವಾಗ ಮೂಲ ದಾಖಲೆಗಳು ಮತ್ತು CHC ಅನ್ನು ಕೊಂಡೊಯ್ಯಲು ಖಚಿತಪಡಿಸಿಕೊಳ್ಳಿ.
ಆರೋಗ್ಯ ಪ್ರಮಾಣಪತ್ರ ಕಡ್ಡಾಯ?
ಅಧಿಕೃತ ವೈದ್ಯರು ಅಥವಾ ಆರೋಗ್ಯ ಸಂಸ್ಥೆಗಳು ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC) ಇಲ್ಲದೆ ಯಾರೂ ಯಾತ್ರೆ ಮಾಡಲು ಅವಕಾಶವಿರುವುದಿಲ್ಲ.
ಯಾವ ವಯಸ್ಸಿನವರು ಯಾತ್ರಿಗೆ ಅವಕಾಶವಿಲ್ಲ?
13 ವರ್ಷಕ್ಕಿಂತ ಕಡಿಮೆ ಇರುವ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾತ್ರೆಗೆ ಅವಕಾಶವಿಲ್ಲ.
ಯಾತ್ರಿಗೆ ಹೋಗವರಿಗೆ ಸಲಹೆಗಳು
ಅಮರನಾಥ ಯಾತ್ರೆಯು ಸವಾಲಿನ ಪರ್ವತದ ಚಾರಣವಾಗಿದೆ. ಹೀಗಾಗಿ ಕನಿಷ್ಠ ಒಂದು ತಿಂಗಳ ಮೊದಲು ದೈಹಿಕ ಸದೃಢತಾ ತರಬೇತಿಯನ್ನು ಪ್ರಾರಂಭಿಸುವುದು ಬಹಳ ಉತ್ತಮ. ನಿಮ್ಮ ಜೊತೆಯಲ್ಲಿ ಉಣ್ಣೆಯ ಬಟ್ಟೆಗಳು, ಜಲನಿರೋಧಕ ಬೂಟುಗಳು, ರೇನ್‌ಕೋಟ್‌ಗಳು ಮತ್ತು ಟಾರ್ಚ್ ಇರಬೇಕು.ಇದರ ಜೊತೆಗೆ ಯಾತ್ರಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಯಾತ್ತಿಗಳು ತಪ್ಪದೇ ಪಾಲಿಸಬೇಕು.
ಯಾತ್ರಿಗರು ಇದನ್ನು ಮಾಡಬೇಡಿ
- ಅಮರನಾಥ ಯಾತ್ರಿಗೆ ಹೋಗುವ ಪ್ರದೇಶವು ಪರಿಸರ ಸೂಕ್ಷ್ಮವಾಗಿರುತ್ತದೆ. ಪ್ಲಾಸ್ಟಿಕ್ ಚೀಲಗಳನ್ನು ತಗೆದುಕೊಂಡು ಹೋಗಬೇಡಿ.
- ಅಮರನಾಥ ಯಾತ್ರೆಯ ಸಮಯದಲ್ಲಿ ಧೂಮಪಾನ ಅಥವಾ ಮದ್ಯಪಾನ ಮಾಡುವುದನ್ನು ತಪ್ಪಿಸಿ.
- ಹವಾಮಾನ ಸರಿ ಇಲ್ಲದ ಸಮಯದಲ್ಲಿ ಯಾತ್ರೆಯನ್ನು ಕೈಗೊಳ್ಳಬೇಡಿ.
- ಎಲ್ಲಾ ಯಾತ್ರಿಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಪ್ರದೇಶದ ಪಾವಿತ್ರ್ಯವನ್ನು ಕಾಪಾಡಲು ಮನವಿ ಮಾಡುತ್ತಲೇ ಇರುತ್ತದೆ. ಈ ನಿಯಮವನ್ನು ಪಾಲನೆ ಮಾಡಿ.
- ಅಮರನಾಥ ಲಿಂಗ ಸಮುದ್ರಮಟ್ಟದಿಂದ 12756 ಅಡಿ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ಹಿಮಲಿಂಗ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
- ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಹೋಗ ಬಯಸುವ ಭಕ್ತರು ಪಹಲ್ಗಾಮ್ ಮಾರ್ಗ (ಸಾಂಪ್ರದಾಯಿಕ ಮತ್ತು ಉದ್ದವಿದೆ) ಅಥವಾ ಬಾಲ್ಟಾಲ್ ಮಾರ್ಗ (ಕಡಿಮೆ ಆದರೆ ಕಡಿದಾದ ದಾರಿ) ಕಡೆಗೆ ಹೋಗಬಹುದು.
ಇಲ್ಲಿಗೆ ಹೋಗಲು ಹೆಲಿಕಾಪ್ಟರ್ ಸೇವೆಗಳು ಕೂಡ ಲಭ್ಯವಿದೆ.ಅಧಿಕೃತ ಸಂಸ್ಥೆಯ ಆನ್‌ಲೈನ್‌ನಲ್ಲಿ ಈ ಸೇವೆಯನ್ನು ನೀವು ಬುಕ್ ಮಾಡಬಹುದು.


Click it and Unblock the Notifications