ಅಮೆರಿಕ ಮೂಲದ ಇ ಕಾಮರ್ಸ್ ಕಂಪೆನಿಯಿಂದ ಪುಣೆಯಲ್ಲಿ ಪ್ರಾಯೋಗಿಕ ಯೋಜನೆಯೊಂದನ್ನು ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ರೈತರಿಂದ ತಾಜಾ ಉತ್ಪನ್ನಗಳ ಖರೀದಿಗೆ ಮುಂದಾಗಿದೆ. 'ಫಾರ್ಮ್ ಟು ಫೋರ್ಕ್' ಅಭಿಯಾನದ ಅಡಿಯಲ್ಲಿ ಈ ಮಾರಾಟಕ್ಕೆ ಮುಂದಾಗಿದೆ ಅಮೆಜಾನ್.
ಅಮೆಜಾನ್ ರೀಟೇಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಪೂರ್ಣವಾಗಿ ಅಮೆರಿಕದ ದೈತ್ಯ ಇ ಕಾಮರ್ಸ್ ಕಂಪೆನಿ ಅಮೆಜಾನ್ ನಿಂದ ನಡೆಯುತ್ತದೆ. ಈಗಾಗಲೇ ಪುಣೆ ಭಾಗದ ಹಲವು ರೈತರ ಜತೆಗೆ ಮಾತುಕತೆ ನಡೆಸಲಾಗಿದೆ. ಅಮೆಜಾನ್ ಫ್ರೆಷ್ ಮತ್ತು ಅಮೆಜಾನ್ ಪ್ಯಾಂಟ್ರಿ ಮೂಲಕ ಆನ್ ಲೈನ್ ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಂಪೆನಿಯಿಂದ ಶೀತಲಗೃಹಗಳ ನಿರ್ಮಾಣ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆ ಸಫಲವಾದಲ್ಲಿ ಇತರ ಭಾಗಗಳಲ್ಲೂ ವಿಸ್ತರಿಸುವ ಉದ್ದೇಶ ಇದೆ. ಸದ್ಯಕ್ಕೆ ಅಮೆಜಾನ್ ನಿಂದ ವಿವಿಧ ಮಂಡಿಗಳಿಂದ ಹಣ್ಣು, ತರಕಾರಿ ಖರೀದಿಸಲಾಗುತ್ತಿದೆ. ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಆಹಾರ ಮತ್ತು ದಿನಸಿ ಪದಾರ್ಥಗಳು ಬಹಳ ಮುಖ್ಯವಾದ ಪಾಲು ಹೊಂದಿವೆ. ಇದರಲ್ಲಿ ಪಾರಮ್ಯ ಸಾಧಿಸಲು ಇ ಕಾಮರ್ಸ್ ಕಂಪೆನಿಗಳು ಸೇರಿದಂತೆ ಸಂಘಟಿತ ಚಿಲ್ಲರೆ ಮಾರಾಟಗಾರರು ಯತ್ನಿಸುತ್ತಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications