ಈ ಹಿಂದೆ ನಗರದ ವಿ.ವಿ.ಪುರಂ ವೃತ್ತದ ಬಳಿ ನಡೆಯುತ್ತಿದ್ದ ಪ್ರಸಿದ್ದ ಅವರೆ ಕಾಳು ಮೇಳ ಅಥವಾ ಅವರೆಬೇಳೆ ಮೇಳ ಈಗ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ. ಈಗಾಗಲೇ ಅಂದರೆ ಜನವರಿ ಐದರಿಂದ ಈ ಮೇಳ ಆರಂಭವಾಗಿದ್ದು, ಒಂಬತ್ತನೇ ತಾರೀಕಿನವರೆಗೆ ನಡೆಯುತ್ತದೆ.
ಇದೇ ರೀತಿ ಮೈಸೂರಿನಲ್ಲೂ ಈ ಮೇಳ ಈಗಾಗಲೇ ನಡೆದಿದೆ ಮತ್ತು ಭರ್ಜರಿ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ. ಬೆಂಗಳೂರಿನ ಸಜ್ಜನರಾವ್ ಸರ್ಕಲ್ ಬಳಿಯ ವಾಸವಿ ಕಾಂಡಿಮೆಂಟ್ಸ್ ಭಾಗದಲ್ಲಿ ನಡೆಯುತ್ತಿದ್ದ ಮೇಳ, ಫುಡ್ ಸ್ಟ್ರೀಟ್ ಚಿತ್ರಣ ಬದಲಾಗುತ್ತಿರುವುದರಿಂದ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತಿದೆ.
ಕಡಲೇಕಾಯಿ ಪರಿಷೆಯಲ್ಲಿ ಮಿಂದೆದ್ದ ಬೆಂಗಳೂರಿನ ಜನತೆ ಈಗ ಅವರೆಕಾಳು ಮೇಳಕ್ಕೆ ದಾಂಗುಡಿ ಇಡುತ್ತಿದ್ದಾರೆ. ಈ ಬಾರಿಯ ಮೇಳದಲ್ಲಿ ಅಪ್ಪು ಸ್ಪೆಷಲ್ ಐಟಂಗಳು ಇರುವುದು ವಿಶೇಷ.

ಐದು ದಿನಗಳ ಈ ಮೇಳದಲ್ಲಿ ಕೋಟ್ಯಾಂತರ ರೂಪಾಯಿಯ ವಹಿವಾಟು ನಡೆಯುತ್ತದೆ. ಅಕ್ಕಪಕ್ಕದ ಹಲವು ರಾಜ್ಯಗಳ ಬೆಳೆಗಾರರು ಮೂಟೆಗಟ್ಟಲೆ ಅವರೆಕಾಯಿಯೊಂದಿಗೆ ನಗರಕ್ಕೆ ಆಗಮಿಸಿ ವ್ಯಾಪಾರ ನಡೆಸುತ್ತಾರೆ. ಚೌಕಾಸಿಯೇ ಇಲ್ಲಿ ವ್ಯಾಪಾರ ನಡೆಸುವ ಗ್ರಾಹಕರಿಗೆ ಮೂಲಮಂತ್ರ ಎನ್ನುವುದು ಗೊತ್ತಿರುವ ವಿಚಾರ.
ಮಧ್ಯವರ್ತಿಗಳ ನೆರವೆಲ್ಲದೆ ನಡೆಯುವ ವಹಿವಾಟಿದು!
ರಾಮನಗರ, ಹುಣಸೂರು, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಆನೇಕಲ್ ಮುಂತಾದ ಭಾಗದ ಜನರು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೇ ವಹಿವಾಟು ನಡೆಸುತ್ತಾರೆ. ಇನ್ನುಳಿದ ಭಾಗದಿಂದ ಬರುವ ಬೆಳೆಗಾರರು ಮಿಡ್ಲ್ ಮ್ಯಾನ್ ಮೂಲಕ ವಹಿವಾಟು ನಡೆಸುತ್ತಾರೆ.
1995ರಲ್ಲಿ ವಾಸವಿ ಕಾಂಡಿಮೆಂಟ್ಸ್ ಅವರೆಬೇಳೆ ತಿನಿಸುಗಳನ್ನು ಮಾರಾಟ ಮಾಡಲು ಆರಂಭಿಸಿತ್ತು. ಫುಡ್ ಸ್ಟ್ರೀಟಿಗೆ ಬರುವ ರೈತರು ಮಾರಾಟವಾಗದೆ ಉಳಿದ ಅವರೆಬೇಳೆ ಅವರೆಕಾಯಿಗಳನ್ನು ಅಲ್ಲಿಯೇ ಚೆಲ್ಲಿ ಹೋಗುತ್ತಿದ್ದರು. ಈ ರೀತಿ ವ್ಯರ್ಥವಾಗುವುದನ್ನು ತಪ್ಪಿಸುವ ಸಲುವಾಗಿ ಅವರೆಮೇಳ ಯೋಜಿಸಿಲು ಆರಂಭಿಸಿದ್ದು ಈ ಮೇಳದ ಇತಿಹಾಸ.
ಅವರೆಕಾಳು ಜಿಲೇಬಿ, ಜಾಮೂನು, ಸೋನಪಾಪಡಿ, ದೋಸೆ ಸೇರಿದಂತೆ ವಿವಿಧ ಖಾದ್ಯಗಳು ಇಪ್ಪತ್ತು ರೂಪಾಯಿಯಿಂದ ಅರವತ್ತು ರೂಪಾಯಿಯವರೆಗೆ ದೊರಕಲಿದೆ. ಕೊರೊನಾ ಕಾರಣದಿಂದಾಗಿ ಫುಲ್ ಸ್ವಿಂಗ್ ನಲ್ಲಿ ಈ ಮೇಳ ಕಳೆದ ಎರಡು ವರ್ಷದಲ್ಲಿ ನಡೆಯಲಿಲ್ಲ. ಆದರೆ, ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮೇಳ ನಡೆಯುತ್ತಿದೆ, ಜೊತೆಗೆ, ಜನರ ಸ್ಪಂದನೆ ಕೂಡಾ ಉತ್ತಮವಾಗಿದೆ. ನಿರ್ದಿಷ್ಟ ಪ್ರಮಾಣದಲ್ಲಿ ಈ ಮೇಳದಲ್ಲಿ ನಡೆಯುವ ವಹಿವಾಟಿನ ಅಂದಾಜು ಇಲ್ಲದಿದ್ದರೂ, ಕೋಟ್ಯಾಂತರ ರೂಪಾಯಿ ಟರ್ನೌರ್ ನಡೆಯುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications