ತಿಂಗಳಿನಲ್ಲಿ ನೂರಾರು ಸಿನಿಮಾಗಳು ಭಾರತದಲ್ಲಿ ರಿಲೀಸ್ ಆಗುತ್ತಿರುತ್ತವೆ. ಅದರಲ್ಲಿ ಜನರ ಮನಗೆದ್ದು ಹಣ ಗಳಿಸೋದು ಮಾತ್ರ ಕೆಲವೇ ಆಗಿವೆ. ಸಿನಿಮಾ ನಿರ್ಮಾಪಕರು ಎಷ್ಟೇ ಹಣ ಸುರಿದು ಸಿನಿಮಾ ತೆಗೆದರು ವೀಕ್ಷಕರು ತಮಗೆ ಇಷ್ಟ ಆಗುವ ಸಿನಿಮಾವನ್ನು ಮಾತ್ರ ಕೈ ಹಿಡಿಯುತ್ತಾರೆ. ನವೆಂಬರ್ ತಿಂಗಳಿನಲ್ಲಿ ಅನೇಕ ಕನ್ನಡ, ಹಿಂದಿ, ಇಂಗ್ಲೀಷ್ ಚಿತ್ರಗಳು ತೆರೆಗಪ್ಪಳಿಸಿದವು. ಅದರಲ್ಲೂ ಮತ್ತೊಮ್ಮೆ ಆಯುಷ್ಮಾನ್ ಖುರಾನ್ ನಟನೆಯ ಸಿನಿಮಾವೇ ಅತಿ ಹೆಚ್ಚು ಹಣ ಸಂಪಾದಿಸಿದೆ.
ಯುವ ನಟ ಆಯುಷ್ಮಾನ್ ಖುರಾನ್‌ನ ನಟನೆಯ ಹಿಂದಿ ಸಿನಿಮಾ ಬಾಲ, ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿದ ಬಾಲಿವುಡ್ ಸಿನಿಮಾವಾಗಿದೆ. 113.59 ಕೋಟಿ ರುಪಾಯಿ ಸಂಪಾದನೆ ಮಾಡಿರುವ ಈ ಸಿನಿಮಾ ಆಯುಷ್ಮಾನ್ ಖುರಾನ್ ನಟನೆಯ ಸತತ 7ನೇ ಹಿಟ್ ಚಿತ್ರವಾಗಿದೆ.

ಆಯುಷ್ಮಾನ್ ಈ ಸಿನಿಮಾಗೂ ಮೊದಲು ನಟಿಸಿದ್ದ ಡ್ರೀಮ್ ಗರ್ಲ್ 113.37 ಕೋಟಿ, ಆರ್ಟಿಕಲ್ 15 ಸಿನಿಮಾ 65.17 ಕೋಟಿ, ಅಂಧಾದುನ್ 73.37 ಕೋಟಿ, ಹಾಗೂ ಬಧಾಯಿ ಹೊ 134.46 ಕೋಟಿ, ಶುಭ ಮಂಗಳ ಸಾವ್‌ಧಾನ 41.98 ಕೋಟಿ ಮತ್ತು ಬರೇಲಿ ಕಿ ಬರ್ಫಿ ಚಿತ್ರ 34.02 ಕೋಟಿ ಹಣ ಸಂಪಾದಿಸಿದೆ.
ಹೀಗೆ ಆಯುಷ್ಮಾನ್ ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆಗಿದ್ದು, ಈತನ ಕಾಲ್ ಶೀಟ್ ಪಡೆಯಲು ನಿರ್ಮಾಪಕರು ಹಿಂದೆ ಬಿದ್ದಿದ್ದಾರೆ. ಇದರಿಂದಲೇ ಈತನನ್ನ ಬಾಲಿವುಡ್‌ನ ಲಕ್ಕಿ ಸ್ಟಾರ್ ಅಂತಾನೆ ಕರೆಯಲಾಗ್ತಿದೆ.


Click it and Unblock the Notifications