ಹದಿಹರೆಯದ ವಯಸ್ಸಿನಲ್ಲಿ ಏನೇನೋ ಹೊಸ ಹೊಸ ಪ್ರಯತ್ನಗಳನ್ನು ಮಾಡಲು ಜನರು ಮುಂದಾಗುವುದು ಸಾಮಾನ್ಯವಾಗಿದೆ. ಹೀಗೆಯೇ ಬೆಂಗಳೂರಿನಲ್ಲಿ 22 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಕಾಲ್ ಗರ್ಲ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಮುಂದಾಗಿದ್ದಾರೆ. ಆದರೆ ಇದರಿಂದ ಭಾರೀ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಹೌದು, ಬೆಂಗಳೂರಿನ ಟೆಕ್ಕಿ ಸುಮಾರು 1.5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ವಿಲ್ಸನ್ ಗಾರ್ಡನ್‌ನ ಸುಮನ್ (ಹೆಸರು ಬದಲಾಯಿಸಲಾಗಿದೆ) ಶುಕ್ರವಾರ ಸಂಜೆ ಇಂಟರ್ನೆಟ್‌ನಿಂದ ಗೇಮ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾಗ, ಗೇಮ್ ಪೋರ್ಟಲ್‌ನಲ್ಲಿ ಕ್ಲಿಕ್ ಮಾಡಿದ್ದೇನೆ ಎಂದು ಆಡುಗೋಡಿ ಪೊಲೀಸರಿಗೆ ತಿಳಿಸಿದ್ದಾರೆ.

ಗೇಮ್ ಅನ್ನು ಆಡುತ್ತಿದ್ದಾಗ ಅದರಲ್ಲಿ ವಯಸ್ಕ ವರ್ಗೀಕೃತ ಸೈಟ್‌ನ ಜಾಹೀರಾತು ಬಂದಿದೆ. ಆಗ ಸುಮನ್ ಈ ಸೈಟ್‌ಗ್ ಭೇಟಿ ನೀಡಿದ್ದಾರೆ. ಅದರಲ್ಲಿ ಲೈಂಗಿಕ ಕಾರ್ಯಕರ್ತೆಯ ಸೇವೆಗಳು ಲಭ್ಯವಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಕಾಲ್ ಗರ್ಲ್ ಅನ್ನು ಬುಕ್ ಮಾಡಲು ಮುಂದಾಗಿದ್ದಾರೆ.
Cybercrimes in Bengaluru: ಬೆಂಗಳೂರಿಗರೇ ಎಚ್ಚರ, ನಗರದಲ್ಲಿ ಸೈಬರ್ ಕ್ರೈಮ್ ಶೇ. 50ರಷ್ಟು ಜಿಗಿತ, ಕಂಡಲ್ಲಿ ಬಲೆ ಬೀಸ್ತಾರೆ!
ಗೇಮ್ ಆಪ್‌ನಲ್ಲಿ ಬಂದ ಜಾಹೀರಾತಿನ ಸೈಟ್‌ನಲ್ಲಿ ಡಿಸ್ಪ್ಲೇ ಆಗಿದ್ದ ನಂಬರ್‌ಗೆ ಮೆಸೇಜ್ ಕಳಿಸಲಾಗಿದೆ. ಅವಾಗ ತಕ್ಷಣ ಪ್ರತಿಕ್ರಿಯೆ ಬಂದಿದೆ. ಯಾವ ಸ್ಥಳ ಎಂದು ಕೇಳಾಗಿದೆ. ತಾನು ಕೋರಮಂಗಲದಲ್ಲಿ ಇದ್ದೇನೆ ಎಂದು ಸುಮನ್ ಹೇಳಿದ್ದರು. ಸೇವೆಗೆ 5000 ರೂಪಾಯಿ ವೆಚ್ಚವಾಗಲಿದೆ ಮತ್ತು ದೃಢೀಕರಣಕ್ಕಾಗಿ ಮುಂಗಡವಾಗಿ 500 ರೂಪಾಯಿ ಪಾವತಿಸಬೇಕೆಂದು ಮೆಸೇಜ್‌ನಲ್ಲಿ ತಿಳಿಸಲಾಗಿದೆ.
ಸುಮನ್ ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ ಮೊತ್ತವನ್ನು ಪಾವತಿಸಿದ ನಂತರ, ದುಷ್ಕರ್ಮಿಗಳು ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹೋಟೆಲ್‌ನ ವಿಳಾಸವನ್ನು ಕಳುಹಿಸಿದ್ದಾರೆ. ರಾತ್ರಿ 7.30ಕ್ಕೆ ಸುಮನ್ ಅಲ್ಲಿಗೆ ಹೋದಾಗ ಉಳಿದ 4500 ರೂಪಾಯಿಯನ್ನು ಪಾವತಿ ಮಾಡುವಂತೆ ತಿಳಿಸಲಾಗಿದೆ.
ಡೆಪಾಸಿಟ್ ಮೊತ್ತ ಪಾವತಿಸಿ ಎಂದ ವಂಚಕರು
ಎಲ್ಲ ಮೊತ್ತವನ್ನು ಪಾವತಿ ಮಾಡಿದ ಬಳಿಕ ಮರುದಿನ ಬೆಳಿಗ್ಗೆ ಮರುಪಾವತಿ ಮಾಡುವುದಾಗಿ ಭರವಸೆ ನೀಡಿ ಭದ್ರತಾ ಡೆಪಾಸಿಟ್ ಆಗಿ 8,900 ರೂಪಾಯಿಯನ್ನು ಪಾವತಿ ಮಾಡುವಂತೆ ತಿಳಿಸಲಾಗಿದೆ. ಅದಾದ ಬಳಿಕ ಯುವತಿಯ ಭದ್ರತಾ ಠೇವಣಿಯಾಗಿ ಅಷ್ಟೇ ಮೊತ್ತವನ್ನು ಪಾವತಿ ಮಾಡುವಂತೆ ಹೇಳಲಾಗಿದೆ.
"ನಾನು ಅವರಿಗೆ ಇದನ್ನು ಮೊದಲು ನನಗೆ ಹೇಳಿಲ್ಲ ಎಂದು ತಿಳಿಸಿದೆ. ಆದರೆ ವ್ಯಕ್ತಿ ನನ್ನ ಮನವೊಲಿಸುವ ಪ್ರಯತ್ನವನ್ನು ಮಾಡಿದ. ಬಳಿಕ ನಾನು ಅವರು ತಿಳಿಸಿದ ನಂಬರ್‌ಗೆ ಯುವತಿಯ ಭದ್ರತಾ ಠೇವಣಿಯನ್ನು ಕೂಡಾ ಪಾವತಿ ಮಾಡಿದೆ. ಅದಾದ ಬಳಿಕ ಕೊಠಡಿ ವಿವರಗಳನ್ನು ಕೇಳಿದೆ," ಎಂದು ಸುಮನ್ ಹೇಳಿದರು.
"ನನ್ನ ಐಡಿ ಪರಿಶೀಲನೆ ಮಾಡುವಂತೆ ಕೇಳಿದರು. ನಾನು ಅವರಿಗೆ ನನ್ನ ಆಧಾರ್‌ನ ಸಾಫ್ಟ್ ಕಾಪಿಯನ್ನು ಕಳುಹಿಸಿದೆ, ಸಂಖ್ಯೆಯನ್ನು ಮರೆಮಾಚಿದೆ. ನಂತರ ದುಷ್ಕರ್ಮಿಗಳು ಐಡಿ ಪರಿಶೀಲನೆಗಾಗಿ 13,500 ರೂಪಾಯಿ ಕೇಳಿದರು. ಅದನ್ನು ಕೂಡಲೇ ವಾಪಾಸ್ ನೀಡುವುದಾಗಿ ಭರವಸೆಯನ್ನು ನೀಡಿದರು," ಎಂದು ವಂಚನೆಗೆ ಒಳಗಾದವರು ಹೇಳುತ್ತಾರೆ.
"ಆ ಸಮಯದಲ್ಲಿ ನನಗೆ ಅನುಮಾನವಾಯಿತು. ಆದರೆ ನಾನು ಈಗಾಗಲೇ ಪಾವತಿ ಮಾಡಿದ ಹಣವನ್ನು ವಾಪಾಸ್ ಪಡೆಯಬೇಕೆಂದು ಬಯಸಿದೆ. ನಾನು ಅವರಿಗೆ 13,500 ರೂಪಾಯಿ ಕಳುಹಿಸಿದ ನಂತರ, ಅವರು ಮತ್ತೆ ಹುಡುಗಿಯ ಐಡಿ ಪರಿಶೀಲನೆಗೆ ಪಾವತಿಸಲು ನನಗೆ ಹೇಳಿದರು," ಎಂದು ಸುಮನ್ ವಿವರಿಸಿದರು.
"ಒಂದಿಲ್ಲೊಂದು ಕಾರಣ ನೀಡಿ ಹೆಚ್ಚಿನ ಹಣ ಕೇಳಿದ್ದಾರೆ. ನಾನು ನಿರಾಕರಿಸಿದಾಗ, ಕರೆ ಮಾಡಿದವರು ತನ್ನನ್ನು ಗೌರವ್ ಸಿಂಗ್ ಎಂದು ಪರಿಚಯಿಸಿಕೊಂಡರು ಮತ್ತು ಅವರು ಅಧಿಕೃತ ಸೇವೆ ಒದಗಿಸುವ ಸಂಸ್ಥೆ ಎಂದು ನನಗೆ ನಂಬುವಂತೆ ನಾನು ಪಾವತಿಸಿದ ಮೊತ್ತದ ಇನ್‌ವಾಯ್ಸ್ ಕಳುಹಿಸಿದರು," ಎಂದರು.
"ನನ್ನನ್ನು ತಮ್ಮ ಕಂಪನಿಯ ಅಕೌಂಟೆಂಟ್ ಎಂದು ಹೇಳಿಕೊಳ್ಳುವ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾನ್ಫರೆನ್ಸ್ ಕರೆಗೆ ಜಾಯ್ನ್ ಮಾಡಿಸಿದರು. ಕಾರ್ಯವಿಧಾನವನ್ನು ಪೂರ್ಣಗೊಳಿಸಲು ನಾನು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದೇನೆ ಮತ್ತು ಅದಕ್ಕಾಗಿ ನಾನು ಅವರಿಗೆ 19,500 ರೂಪಾಯಿ ಪಾವತಿಸಬೇಕಾಗಿದೆ. ಅದನ್ನು ತಕ್ಷಣವೇ ನನಗೆ ಹಿಂತಿರುಗಿಸಲಾಗುವುದು ಎಂದು ಇಬ್ಬರೂ ನನಗೆ ಹೇಳಿದರು," ಎಂದು ಸುಮನ್ ತಿಳಿಸಿದರು.
"ಕೊನೆಯ ಪರಿಶೀಲನೆಗೆ 30,000 ರೂಪಾಯಿ ಕೊಡುವಂತೆ ಕೇಳಿದರು. ನನ್ನ ಬಳಿ ಅಷ್ಟು ಹಣವಿಲ್ಲ ಎಂದು ನಾನು ಅವರಿಗೆ ಹೇಳಿದಂತೆ, ಸಿಂಗ್ ಅವರು ನನ್ನ ಪರವಾಗಿ ಅರ್ಧದಷ್ಟು ಹಣವನ್ನು ಪಾವತಿಸಿದ್ದಾರೆ ಎಂದು ಪಾವತಿಯ ಸ್ಕ್ರೀನ್‌ಶಾಟ್ ಅನ್ನು ನನಗೆ ಕಳುಹಿಸಿದರು. ನಾನು ಅವರಿಗೆ 15,000 ರೂಪಾಯಿ ಕಳುಹಿಸಿದೆ.
"ನಂತರ ಅಕೌಂಟೆಂಟ್ ಒಂದು ವಹಿವಾಟಿನಲ್ಲಿ ಪಾವತಿ ಮಾಡಬೇಕೆಂದು ಹೇಳಿದ್ದರು. ನನ್ನ ಹಣವನ್ನು ಹಿಂದಿರುಗಿಸಲು ನಿರಾಕರಿಸಿದರು," ಎಂದು ಸುಮನ್ ಹೇಳಿದರು. ಕೊನೆಗೆ ತಾನು ಮೋಸ ಹೋಗಿದ್ದೇನೆ ಎಂದು ಅರಿವಾದಾಗ ಸೈಬರ್ ಸಹಾಯವಾಣಿ 1930ಗೆ ಕರೆ ಮಾಡಿದೆ. "ಅಷ್ಟರಲ್ಲಿ ನಾನು 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದೆ. ಮರುದಿನ ನಾನು ಪೊಲೀಸರಿಗೆ ದೂರು ನೀಡಿದ್ದೇನೆ," ಎಂದು ಸುಮನ್ ಹೇಳಿದರು.


Click it and Unblock the Notifications