ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಜುಲೈ 2022 ರಲ್ಲಿ ರಜಾದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಜೂನ್ 2022 ರಲ್ಲಿ ದೇಶವ್ಯಾಪಿ ರಜಾದಿನಗಳು ಕಡಿಮೆ ಇದ್ದರೂ ಆಯಾ ರಾಜ್ಯಗಳಿಗೆ ಸಂಬಂಧಪಟ್ಟಂತೆ 14 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ.
ಜುಲೈ ತಿಂಗಳಲ್ಲಿ ರಥಯಾತ್ರೆ, ಖರ್ಚಿ ಪೂಜಾ, ಈದ್ ಉಲ್ ಅದಾ(ಬಕ್ರೀದ್), ಈದ್ ಉಲ್ ಅಳಾ, ಭಾನು ಜಯಂತಿ, ಬೆಹ್ದಿಂಖಲಂ, ಹರೆಲಾ ಹಾಗೂ ಕೇರ್ ಪೂಜಾ ಹೀಗೆ ರಜಾದಿನಗಳಿವೆ. ಆದರೆ, ಎಲ್ಲಾ ರಾಜ್ಯಗಳು ಈ ಹಬ್ಬಗಳು ಮತ್ತು ವಿಶೇಷ ದಿನಗಳನ್ನು ಆಚರಣೆ ಮಾಡಲ್ಲ. ಆದ್ದರಿಂದ ಈ ರಜೆಗಳು ಎಲ್ಲಾ ರಾಜ್ಯಗಳಲ್ಲಿ ಇರಲಾರದು.
ಆದರೂ ನೀವು ರಜೆ ಇದ್ದ ದಿನ ಕೂಡಾ ಬ್ಯಾಂಕ್‌ಗೆ ಹೋಗಿ ಸಮಯ ವ್ಯರ್ಥ ಮಾಡುವ ಮುನ್ನ ರಜೆಯನ್ನು ತಿಳಿದುಕೊಳ್ಳಿ. ಮೇಲ್ಕಂಡ ರಜಾದಿನಗಳಲ್ಲದೆ, ಎಲ್ಲಾ ದಿನಗಳಲ್ಲೂ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ದೇಶಾದ್ಯಂತ ಲಭ್ಯವಿರುತ್ತವೆ.
ಭಾರತದಾದ್ಯಂತ ಹಬ್ಬಗಳ ಆಚರಣೆ ಮತ್ತು ವಿಶೇಷ ದಿನಗಳನ್ನು ಆಚರಿಸುವುದರ ಜೊತೆಗೆ ವಾರಾಂತ್ಯದಲ್ಲಿ ರಜೆಗಳಿರಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾದಿನಗಳ ಕ್ಯಾಲೆಂಡರ್ ಪ್ರಕಾರ, ಜುಲೈ ತಿಂಗಳಲ್ಲಿ ಶನಿವಾರ ಹಾಗೂ ಭಾನುವಾರ ಸೇರಿದಂತೆ ಏಳು ವಾರಾಂತ್ಯದ ರಜಾ ದಿನಗಳಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ....
ರಜಾ ದಿನಗಳ ಪಟ್ಟಿ ಇಲ್ಲಿದೆ
- ಜುಲೈ 1: ಭುವನೇಶ್ವರ ಹಾಗೂ ಇಂಫಾಲ ಇತರ ಪ್ರದೇಶಗಳಲ್ಲಿ ರಥ್ ಯಾತ್ರೆ ಹಾಗೂ ಕಂಗ್ ಹಬ್ಬದ ಪ್ರಯುಕ್ತ ಬ್ಯಾಂಕ್‌ಗಳು ಬಂದ್ ಆಗಲಿದೆ
- ಜುಲೈ 3: ತಿಂಗಳ ಮೊದಲ ಭಾನುವಾರ (ವಾರದ ರಜೆ)
- ಜುಲೈ 7: ಖರ್ಚಿ ಪೂಜೆಯ ಅಂಗವಾಗಿ ಅಗರ್ತಲಾದಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ.
- ಜುಲೈ 9: ಈದ್ ಉಲ್ ಅದಾ ಅಥವಾ ಬಕ್ರೀದ್ ಅಂಗವಾಗಿ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್ ಮುಚ್ಚಿರಲಿದೆ. ಎರಡನೇ ಶನಿವಾರವಾದ್ದರಿಂದ ದೇಶದ ಇತರೆಡೆ ಕೂಡಾ ಬ್ಯಾಂಕ್ ಬಂದ್ ಆಗಿರಲಿದೆ.
- ಜುಲೈ 10: ತಿಂಗಳ ಎರಡನೇ ಭಾನುವಾರ (ವಾರದ ರಜೆ)
- ಜುಲೈ 11: ಈದ್ ಅಲ್ -ಅಳಾ ಅಂಗವಾಗಿ ಶ್ರೀನಗರ ಹಾಗೂ ಜಮ್ಮು ಪ್ರದೇಶದ ಬ್ಯಾಂಕ್ ರಜೆ ಇರಲಿದೆ.
- ಜುಲೈ 13: ಭಾನು ಜಯಂತಿ ಅಂಗವಾಗಿ ಗ್ಯಾಂಗ್‌ಟಕ್‌ನಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ.
- ಜುಲೈ 14: ಬೆಹ್ದಿಂಖ್ಲಾಹಂ(Behdienkhlam) ಅಂಗವಾಗಿ ಶಿಲ್ಲಾಂಗ್ ಪ್ರದೇಶದಲ್ಲಿ ಬ್ಯಾಂಕ್ ಮುಚ್ಚಿರಲಿದೆ.
- ಜುಲೈ 16: ಹರೆಲಾ ಅಂಗವಾಗಿ ಡೆಹ್ರಾಡೂನ್ ಭಾಗದಲ್ಲಿ ಬ್ಯಾಂಕ್ ಬಂದ್ ಆಗಿರಲಿವೆ.
- ಜುಲೈ 17: ತಿಂಗಳ ಮೂರನೇ ಭಾನುವಾರ (ವಾರದ ರಜೆ)
- ಜುಲೈ 23: ತಿಂಗಳ ನಾಲ್ಕನೇ ಶನಿವಾರ (ವಾರದ ರಜೆ)
- ಜುಲೈ 24: ತಿಂಗಳ ನಾಲ್ಕನೇ ಭಾನುವಾರ (ವಾರದ ರಜೆ)
- ಜುಲೈ 26: ಕೇರ್ ಪೂಜಾ ಅಂಗವಾಗಿ ಅಗರ್ತಲಾದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.
ಜುಲೈ 31: ತಿಂಗಳ ಐದನೇ ಭಾನುವಾರ (ವಾರದ ರಜೆ)


Click it and Unblock the Notifications