ಗ್ರಾಹಕರೇ ಗಮನಿಸಿ: ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 17 ರಜಾದಿನಗಳು

Bank Holidays November 2021: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಕೃತ ರಜಾದಿನದ ಪಟ್ಟಿಯಲ್ಲಿ ನವೆಂಬರ್‌ ತಿಂಗಳಲ್ಲಿ ದೇಶಾದ್ಯಂತದ ಬ್ಯಾಂಕುಗಳು ಒಟ್ಟು 17 ದಿನಗಳವರೆಗೆ ಮುಚ್ಚಲ್ಪಡುತ್ತವೆ. ವಿವಿಧ ರಾಜ್ಯಗಳ ವಿವಿಧ ಹಬ್ಬಗಳು, ವಾರಾಂತ್ಯದ ದಿನಗಳು ಸೇರಿದಂತೆ ವಿವಿಧ ರಜೆಗಳು ಸೇರಿವೆ.

ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಮುಂದುವರಿಯುತ್ತವೆಯಾದರೂ, ನವೆಂಬರ್‌ 2021 ರಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳು ಮುಚ್ಚಲ್ಪಡುವ ಕೆಲವು ದಿನಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಉಲ್ಲೇಖಿಸಿದೆ. ಆದಾಗ್ಯೂ ವಿವಿಧ ರಾಜ್ಯಗಳಲ್ಲಿನ ಬ್ಯಾಂಕಿಂಗ್ ಚಟುವಟಿಕೆಗಳು ಪರಸ್ಪರ ಬದಲಾಗಬಹುದು.

ನೀವು ಮುಂದಿನ ಬಾರಿ ಬ್ಯಾಂಕುಗಳಿಗೆ ಭೇಟಿ ಮಾಡಲು ಯೋಜಿಸುವಾಗ, ಈ ಯಾವುದೇ ರಜಾದಿನಗಳು ಯಾವುದೇ ರೀತಿಯಲ್ಲಿ ಏಕರೂಪವಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ವಾರಾಂತ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೂ ಈ ರಜಾದಿನಗಳು ಅನ್ವಯಿಸುವುದಿಲ್ಲ. ಎಲ್ಲಾ ರಜಾದಿನಗಳನ್ನು ಭೌಗೋಳಿಕತೆ ಮತ್ತು ಆರ್‌ಬಿಐ ಸೂಚಿಸಿದ ದಿನಾಂಕಗಳ ಆಧಾರದ ಮೇಲೆ ವಿಸ್ತರಿಸಲಾಗಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಲ್ಲಿ ಕಡಿಮೆ ರಜೆ ದಿನಗಳಿತ್ತು. ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 21 ದಿನಗಳ ರಜೆ ಸಿಕ್ಕರೂ ಕರ್ನಾಟಕ ಎರಡು ದಿನ ಮಾತ್ರ ರಜೆ ಇತ್ತು. ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಆರ್‌ಬಿಐ ಕಡ್ಡಾಯ ರಜೆ ದಿನಗಳಲ್ಲೂ ಕೆಲವು ನಿರ್ಬಂಧಿತ ಸೇವೆಗಳು ಲಭ್ಯವಿರಲಿದ್ದು, ಆನ್ ಲೈನ್ ಸೇವೆ ಕೂಡಾ ಹಲವು ಬ್ಯಾಂಕುಗಳು ನೀಡುತ್ತಿವೆ.

ಹಬ್ಬಗಳ ದಿನದಂದು ರಜೆ:

ಸಾರ್ವತ್ರಿಕ ರಜೆ ದಿನಗಳಂದು ಸರ್ಕಾರಿ ಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಮತ್ತಷ್ಟು ತಿಳಿಯಿರಿ.

ಇನ್ನು ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಆರ್‌ಬಿಐ ರಜೆಯ ಪಟ್ಟಿ ರಾಜ್ಯೋತ್ಸವಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬಗಳ ವರ್ಗಗಳ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದು ರಜೆ ಇರಲಿದೆ.

ಗ್ರಾಹಕರೇ ಗಮನಿಸಿ: ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 17 ರಜಾದಿನಗಳು

ನವೆಂಬರ್ 2021ರ ರಜಾದಿನಗಳ ಪಟ್ಟಿ ಈ ಕೆಳಗಿದೆ
ನವೆಂಬರ್ 1, 2021 - ಕನ್ನಡ ರಾಜ್ಯೋತ್ಸವ (ಕರ್ನಾಟಕ)
ನವೆಂಬರ್ 3- ನರಕ ಚತುರ್ದಶಿ (ಕರ್ನಾಟಕ),
ನವೆಂಬರ್ 4- ದೀಪಾವಳಿ ಅಮಾವಾಸ್ಯೆ, ಲಕ್ಷ್ಮಿಪೂಜೆ(ಕರ್ನಾಟಕ ಹೊರತುಪಡಿಸಿ ಹಲವು ರಾಜ್ಯಗಳಲ್ಲಿ ರಜೆ ಇರಲಿದೆ).

ನವೆಂಬರ್ 5- ಬಲಿ ಪಾಡ್ಯಮಿ, ಗೋವರ್ಧನ ಪೂ (ಕರ್ನಾಟಕ, ಗುಜರಾತ್,ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಸಿಕ್ಕಿಂ)
ನವೆಂಬರ್ 6 - ಲಕ್ಷ್ಮಿ ಪೂಜೆ, ಭಾಯಿ ದೂಜ್ (ಸಿಕ್ಕಿಂ, ಮಣಿಪುರ ಹಾಗೂ ಉತ್ತರಪ್ರದೇಶ)
ನವೆಂಬರ್ 10 - ಸೂರ್ಯಪಶ್ತಿ ದಾಲ ಛಾತ್ (ಬಿಹಾರ ಹಾಗೂ ಜಾರ್ಖಂಡ್)
ನವೆಂಬರ್ 11- ಛಾತ್ ಪೂಜೆ (ಬಿಹಾರ)
ನವೆಂಬರ್ 12 - ವಂಗಲಾ ಹಬ್ಬ (ಮೇಘಾಲಯ)

ನವೆಂಬರ್ 19 - ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಾ (ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರೆ ಕೆಲ ರಾಜ್ಯಗಳು),
ನವೆಂಬರ್ 22 - ಕನಕದಾಸ ಜಯಂತಿ (ಕರ್ನಾಟಕ)
ನವೆಂಬರ್ 23 - ಸೆಂಗ್ ಕುತ್ಸ್ ನೆಮ್ (ಮೇಘಾಲಯ).

ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ.

ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್​ ಕ್ಲೋಸಿಂಗ್.

ನೀವು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಈ ಲಿಂಕ್ ಅನ್ನು ಪರಿಶೀಲಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+