For Quick Alerts
ALLOW NOTIFICATIONS  
For Daily Alerts

ಗಮನಿಸಿ: ಆಗಸ್ಟ್‌ ತಿಂಗಳ ಇನ್ನುಳಿದ 7 ದಿನದಲ್ಲಿ ನಾಲ್ಕು ದಿನ ಬ್ಯಾಂಕ್‌ ಬಂದ್‌!

|

ಪ್ರಸ್ತುತ ಆಗಸ್ಟ್‌ನ ಕೊನೆಯ ವಾರದಲ್ಲಿ ನಾವು ಇದ್ದೇವೆ. ಆಗಸ್ಟ್‌ ತಿಂಗಳು ಕೊನೆಗೊಳ್ಳಲು ಇನ್ನು ಕೇವಲ 7 ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ನಿಮ್ಮ ಬ್ಯಾಂಕ್‌ನ ಯಾವುದೇ ಕೆಲಸಗಳು ಬಾಕಿ ಉಳಿದಿದ್ದರೆ ಶೀಘ್ರದಲ್ಲೇ ಪೂರ್ಣಗೊಳಿಸಿ. ಯಾಕೆಂದರೆ ಆಗಸ್ಟ್‌ ತಿಂಗಳು ಕೊನೆಗೊಳ್ಳಲು 7 ದಿನಗಳು ಮಾತ್ರ ಬಾಕಿ ಉಳಿದಿರುವಾಗ ಈ ಏಳು ದಿನದಲ್ಲೇ ನಾಲ್ಕು ದಿನಗಳು ರಜೆ ಇದೆ.

ಆಗಸ್ಟ್‌ನ ಉಳಿದ 7 ದಿನಗಳಲ್ಲಿ, 4 ದಿನಗಳು ಬ್ಯಾಂಕ್ ಬಂದ್‌ ಉಳಿಯಲಿದೆ. ಆದ್ದರಿಂದ ನೀವು ನಿಮ್ಮ ಬ್ಯಾಂಕ್‌ನ ಯಾವುದೇ ವ್ಯವಹಾರವನ್ನು ನಡೆಸಬೇಕಾದರೆ ಮುಂದಿನ ತಿಂಗಳಿನವರೆಗೆ ಅಂದರೆ ನಾಲ್ಕು ದಿನ ಕಾಯಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಬ್ಯಾಂಕ್‌ಗೆ ಹೋಗುವ ಮುನ್ನ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿಕೊಂಡು ನೀವು ಬ್ಯಾಂಕ್‌ಗೆ ತೆರಳುವುದು ಅತ್ಯುತ್ತಮ.

ನೂತನ ಕಾರ್ಮಿಕ ನೀತಿಯ ಸಮಸ್ಯೆಗಳೇನು?: ಕೆಲಸದ ಅವಧಿ, ವೇತನ ಬದಲಾಗಲಿದೆ ಗಮನಿಸಿ!ನೂತನ ಕಾರ್ಮಿಕ ನೀತಿಯ ಸಮಸ್ಯೆಗಳೇನು?: ಕೆಲಸದ ಅವಧಿ, ವೇತನ ಬದಲಾಗಲಿದೆ ಗಮನಿಸಿ!

ಆಗಸ್ಟ್‌ ತಿಂಗಳಿನಲ್ಲೇ ಬ್ಯಾಂಕ್‌ಗಳಿಗೆ ಅಧಿಕ ರಜೆಗಳು ಇದ್ದವು. ಈ ತಿಂಗಳಿನ ಕೊನೆಯಲ್ಲಿ ಬ್ಯಾಂಕುಗಳು ನಿರಂತರ ನಾಲ್ಕು ದಿನಗಳ ಕಾಲ ಬಂದ್‌ ಇರಲಿದೆ. ಆಗಸ್ಟ್ ಕೊನೆಯ ವಾರದಲ್ಲಿ, ದೇಶದ ವಿವಿಧ ನಗರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸ ಉಳಿದಿದ್ದರೆ, ನಿಮ್ಮ ನಗರದಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ನೋಡಿದ ನಂತರವೇ ಮನೆಯಿಂದ ಹೊರಡಿ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕುಗಳ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಆರ್‌ಬಿಐ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕುಗಳು ಆಗಸ್ಟ್ 28 ರಿಂದ ಆಗಸ್ಟ್ 31 ರವರೆಗೆ ಬಂದ್‌ ಆಗಿ ಇರುತ್ತದೆ. ಆ ನಾಲ್ಕು ದಿನಗಳ ಕಾಲ ಗ್ರಾಹಕರಿಗೆ ಯಾವುದೇ ಬ್ಯಾಂಕುಗಳಲ್ಲಿ ಸೇವೆ ಇರುವುದಿಲ್ಲ. ಇತರೆ ಯಾವುದೇ ವ್ಯವಹಾರಗಳು ಬ್ಯಾಂಕಿನಲ್ಲಿ ನಡೆಯುವುದಿಲ್ಲ. ಆದರೆ ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆಗಳು ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಎಟಿಎಂ ಗಳು ಕೂಡಾ ಎಂದಿನಂತೆ ತೆರೆದಿರಲಿದೆ.

ಗಮನಿಸಿ: ಇನ್ನುಳಿದ 7 ದಿನದಲ್ಲಿ ನಾಲ್ಕು ದಿನ ಬ್ಯಾಂಕ್‌ ಬಂದ್‌!

ಆರ್‌ಬಿಐ ಪ್ರಕಟಣೆಯಂತೆ ಎಂದೆಲ್ಲಾ ರಜೆ?

ಆಗಸ್ಟ್ 28 ನೇ ತಿಂಗಳಿನ ನಾಲ್ಕನೇ ಶನಿವಾರವಾದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಬಂದ್‌ ಆಗಿರುತ್ತದೆ.
ಆಗಸ್ಟ್ 29 ರಂದು, ಭಾನುವಾರದ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ವಾರದ ರಜೆ ಇರುತ್ತದೆ.
ಆಗಸ್ಟ್ 30 ರಂದು ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಹಬ್ಬದ ಪ್ರಯುಕ್ತವಾಗಿ ಅಹಮದಾಬಾದ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಜಮ್ಮು, ಕಾನ್ಪುರ, ಲಕ್ನೋ, ಪಾಟ್ನಾ, ರಾಯ್‌ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಬ್ಯಾಂಕುಗಳು ಬಂದ್‌ ಆಗಿರುತ್ತದೆ.
ಆಗಸ್ಟ್ 31 ರಂದು ಕೂಡಾ ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆಯ ಹಿನ್ನೆಲೆಯಲ್ಲಿ ಹೈದರಾಬಾದ್‌ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಎಲ್ಲಾ ಬ್ಯಾಂಕುಗಳು ಬಂದ್‌ ಆಗಲಿದೆ.

ಗಮನಿಸಿ: ಇನ್ನುಳಿದ 7 ದಿನದಲ್ಲಿ ನಾಲ್ಕು ದಿನ ಬ್ಯಾಂಕ್‌ ಬಂದ್‌!

ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆ ಎಂದಿನಂತೆ ಇರಲಿದೆ

ಆಗಸ್ಟ್ 28 ರಿಂದ 31 ರವರೆಗೆ ದೇಶದ ವಿವಿಧ ನಗರಗಳಲ್ಲಿ ಬ್ಯಾಂಕ್ ರಜೆ ಇದ್ದರೂ ಕೂಡಾ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು, ಎಟಿಎಂ ಸೇವೆಗಳು, ಡಿಜಿಟಲ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಇತ್ಯಾದಿ ಸೇವೆಗಳು ಈ ಅವಧಿಯಲ್ಲಿ ಎಂದಿನಂತೆ ಇರಲಿದೆ. ಬ್ಯಾಂಕ್ ಮುಚ್ಚಿದ ಸಂದರ್ಭದಲ್ಲೂ ನೀವು ಆನ್‌ಲೈನ್ ​​ಬ್ಯಾಂಕಿಂಗ್ ಬಳಸಿ ವಹಿವಾಟು ನಡೆಸಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್ ಬಿ ಐ) ಪ್ರಕಟ ಮಾಡಿದ ಆಗಸ್ಟ್ ತಿಂಗಳ ರಜಾ ದಿನಗಳ ಪ್ರಕಾರ 2021 ರ ಆಗಸ್ಟ್ ತಿಂಗಳಿನಲ್ಲಿ ಸುಮಾರು 15 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇತ್ತು.

English summary

Bank will be closed for 4 consecutive days in last weekend of august 2021

Bank will be closed for 4 consecutive days in last weekend of august 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X