ನಿರುದ್ಯೋಗ ದೇಶದಲ್ಲಿ ಅತೀ ದೊಡ್ಡ ಸಮಸ್ಯೆಯಾಗಿಯೇ ಮುಂದುವರಿದಿದೆ. ಬೆಂಗಳೂರು ಮೂಲದ ಸಿಇಒ ತಮ್ಮ ಕಂಪನಿಯ ವೆಬ್‌ಸೈಟ್‌ನಲ್ಲಿ ಹುದ್ದೆ ಖಾಲಿಯಿರುವ ಬಗ್ಗೆ ಉಲ್ಲೇಖಿಸಿದ 48 ಗಂಟೆಗಳಲ್ಲಿ 3,000 ಕ್ಕೂ ಹೆಚ್ಚು ರೆಸ್ಯೂಮ್‌ಗಳು ಬಂದಿದೆ ಎಂದು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಬೆಂಗಳೂರು ಮೂಲದ ಮಾರುಕಟ್ಟೆ ತಂತ್ರಜ್ಞಾನ ಸಂಸ್ಥೆ ಸ್ಪ್ರೀಂಗ್‌ವರ್ಕ್ ಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಮಾಂಡ್ವಿಲ್ಲೆ ಈ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ಪ್ರೀಂಗ್‌ವರ್ಕ್ ಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಮಾಂಡ್ವಿಲ್ಲೆ ಪೋಸ್ಟ್ ಮಾಡಿದ್ದು, 48 ಗಂಟೆಯಲ್ಲೇ ಇಷ್ಟು ಪ್ರಮಾಣದಲ್ಲಿ ಉದ್ಯೋಗ ಅರ್ಜಿಯನ್ನು ನೋಡಿದ ಶಾಕ್ ಆಗಿದೆ, ಪ್ರಸ್ತುತ ಉದ್ಯೋಗ ಸ್ಥಿತಿ ಹೇಗಿದೆ ಎಂದು ನೋಡಿ ಆಶ್ಚರ್ಯವಾಗಿದೆ ಎಂದು ತಿಳಿಸಿದ್ದಾರೆ. ಉದ್ಯೋಗಕ್ಕೆ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎಂದು ನೋಡಿ ನಾನು ಆತಂಕಕ್ಕೆ ಒಳಗಾದೆ. ನಮ್ಮ ಸಂಸ್ಥೆಯ ಮೇಲೆ ಇರುವ ಆಸಕ್ತಿಯಿಂದ ಸಂತೋಷವಾಗಿದೆ ಎಂದು ಹೇಳಿದ್ದಾರೆ.

"ನಮ್ಮ ವೆಬ್‌ಸೈಟ್‌ನಲ್ಲಿ 48 ಗಂಟೆಗಳಲ್ಲಿಯೇ 3 ಸಾವಿರ ರೆಸ್ಯೂಮ್ ಸಲ್ಲಿಕೆಯಾಗಿದೆ. ಉದ್ಯೋಗ ಮಾರುಕಟ್ಟೆ ಎಷ್ಟು ಕೆಟ್ಟ ಸ್ಥಿತಿಯಲ್ಲಿದೆ?. ತಿಂಗಳಿಂದ ಹೀಗೆಯೇ ಇದೆ," ಎಂದು ಕಾರ್ತಿಕ್ ಮಾಂಡ್ವಿಲ್ಲೆ ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿಯೇ ಇದು ನಡೆಯುತ್ತದೆಯೇ ಅಥವಾ ಈ ಬಾರಿ ಬೇರೆ ರೀತಿಯಾಗಿದೆಯೇ ಎಂದು ಟ್ವಿಟ್ಟರ್ ಬಳಕೆದಾರರು ಪ್ರಶ್ನೆ ಕೇಳಿದಾಗ, ಈ ಹಿಂದೆ ಒಂದು ತಿಂಗಳಲ್ಲಿ 13,000 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಬರೀ ವೆಬ್‌ಸೈಟ್‌ನಲ್ಲಿಯೇ ಇಷ್ಟು ರೆಸ್ಯೂಮ್
ಉದ್ಯೋಗವಿದೆ ಎಂದು ನಾವು ಬೇರೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಉಲ್ಲೇಖ ಮಾಡಿಲ್ಲ, ಬರೀ ನಮ್ಮ ವೆಬ್‌ಸೈಟ್‌ನಲ್ಲಿ ಮಾತ್ರ ಮಾಹಿತಿಯನ್ನು ನಾವು ಉಲ್ಲೇಖ ಮಾಡಿದ್ದೆವು. ನಾನು ಆಶ್ವರ್ಯಚಕಿತನಾದೆ ಎಂದು ಸ್ಪ್ರೀಂಗ್‌ವರ್ಕ್ ಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಮಾಂಡ್ವಿಲ್ಲೆ ಹೇಳಿದ್ದಾರೆ. ಇದರರ್ಥ ಸಂಸ್ಥೆಗೆ ಲಭ್ಯವಾದ 3,000 ರೆಸ್ಯೂಮ್‌ಗಳು ಸಕ್ರಿಯವಾಗಿ ಉದ್ಯೋಗಗಳನ್ನು ಹುಡುಕುತ್ತಿರುವವರು ಮತ್ತು ಸ್ಪ್ರಿಂಗ್‌ವರ್ಕ್ಸ್‌ನಲ್ಲಿ ಕೆಲಸ ಮಾಡಲು ನಿರ್ದಿಷ್ಟವಾಗಿ ಆಸಕ್ತಿ ಹೊಂದಿರುವ ಜನರಿಂದ ಸಲ್ಲಿಕೆಯಾಗಿದೆ.
ಪ್ರಸ್ತುತ ಕಾರ್ತಿಕ್ ಮಾಂಡ್ವಿಲ್ಲೆ ಟ್ವೀಟ್ ವೈರಲ್ ಆಗಿದೆ. ಇದು ಭಾರತದ ಉದ್ಯೋಗ ಮಾರುಕಟ್ಟೆಯ ಸ್ಥಿತಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಅಧಿಕ ಅಪ್ಲಿಕೇಷನ್ ಬಂದಿರುವುದು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರುವುದರ ಪ್ರತೀಕವಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇನ್ನು ಕೆಲವರು ಹಲವಾರು ಸಂಸ್ಥೆಗಳಲ್ಲಿ ಉದ್ಯೋಗದಿಂದ ವಜಾ ಮಾಡಲಾಗುತ್ತಿದೆ. ಆದ್ದರಿಂದ ಭಾರತದಲ್ಲಿ ಅನೇಕ ಜನರು ಈಗ ಕೆಲಸದ ಹುಡುಕಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
"ಸಾಕಷ್ಟು ಕೆಟ್ಟ ಸ್ಥಿತಿ ಇದೆ. ದೆಹಲಿಯ ಐಟಿ ಕಂಪನಿಯೊಂದಕ್ಕೆ ವಾಕ್-ಇನ್ ಸಂದರ್ಶನಕ್ಕೆ ಹೋಗಿದ್ದೆ. ನನಗೆ ನನಪಿದೆ. ದೊಡ್ಡ ಹೆಸರು ಅಲ್ಲ, ನನ್ನ ಸಂಬಂಧಿಕರೊಬ್ಬರು ಸಂದರ್ಶನಗಳನ್ನು ನಡೆಸುವ ತಂಡವನ್ನು ಮುನ್ನಡೆಸುತ್ತಿದ್ದರು. ನಾನು ಕೇವಲ ವಿಸೀಟರ್ ಆಗಿದ್ದೆ. ಸರಿಸುಮಾರು 20 ಹುದ್ದೆಗಳಿಗೆ 700 ಜನರು ಸಂದರ್ಶನಕ್ಕೆ ಬಂದಿದ್ದರು. ಅದು ಕೂಡಾ ವರ್ಷಕ್ಕೆ 2.5 ರೂಪಾಯಿಗಾಗಿ ಇಷ್ಟು ಜನರು ಬಂದಿದ್ದಾರೆ. 200 ಜನರು ಬರುವ ನಿರೀಕ್ಷೆಯಿತ್ತು," ಎಂದು ಮತ್ತೊಬ್ಬರು ಕಾರ್ತಿಕ್ ಮಾಂಡ್ವಿಲ್ಲೆ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿರುದ್ಯೋಗ ದರ ಎಷ್ಟಿದೆ?
ಸಿಎಂಐಇ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮೇ ತಿಂಗಳಿನಲ್ಲಿ ಭಾರತದ ನಿರುದ್ಯೋಗ ದರವು ಶೇಕಡ 7.7ಕ್ಕೆ ಇಳಿಕೆಯಾಗಿದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ವರ್ಗದಲ್ಲಿ ಭಾರತದಲ್ಲಿ ನಿರುದ್ಯೋಗ ದರವು ಮೇ 2023 ರಲ್ಲಿ ಶೇಕಡ 7.7ಕ್ಕೆ ಇಳಿಕೆಯಾಗಿದೆ. ಆದರೆ ಏಪ್ರಿಲ್‌ನಲ್ಲಿ ನಿರುದ್ಯೋಗ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications