ಪ್ರಸ್ತುತ ವಂಚಕರು ಎಲ್ಲೆಡೆ ಇರುತ್ತಾರೆ. ನಾವು ನಮ್ಮ ಕಣ್ಣು ಕಿವಿ ಚುರುಕಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯ, ಈ ಬಗ್ಗೆ ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡುತ್ತಾ ಬರುತ್ತಿದೆ. ಈ ನಡುವೆಯೂ ಬೆಂಗಳೂರಿನ ಇಂಜಿನಿಯರ್ ಒಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ 95 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ನಗರದ 53 ವರ್ಷದ ಇಂಜಿನಿಯರ್ ಒಬ್ಬರು ಸೈಬರ್‌ಕ್ರೂಕ್‌ಗಳಿಗೆ ಬಲಿಯಾಗಿ ಇಷ್ಟೊಂದು ಪ್ರಮಾಣದ ಮೊತ್ತವನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಹಣವನ್ನು ರಿಟರ್ನ್ ಆಗಿ ಪಡೆಯಬಹುದು ಎಂದು ಭರವಸೆ ನೀಡಿ ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲು ಹೇಳಿದ್ದಾರೆ.

ಸೋನಿಯಾ ಶೆಣೈ ಎಂದು ಗುರುತಿಸಿಕೊಂಡ ಮಹಿಳೆಯೊಬ್ಬರು 2021 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತನ್ನೊಂದಿಗೆ ಸ್ನೇಹ ಬೆಳೆಸಿದರು. ಜನವರಿ 2022 ಮತ್ತು ಜನವರಿ 2023 ರ ನಡುವೆ ಬಿಟ್‌ಕಾಯಿನ್‌ಗಳಲ್ಲಿ 95 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿದ್ದಾರೆ. ಶೆಣೈ ಮತ್ತು ಅವರ ಸ್ನೇಹಿತರು ಯಾರು ಕೂಡಾ ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಶಾಂತಲಾನಗರದ ನಿವಾಸಿ ಕುಮಾರ್ (ಹೆಸರು ಬದಲಾಯಿಸಲಾಗಿದೆ) ದೂರಿನಲ್ಲಿ ತಿಳಿಸಿದ್ದಾರೆ.
ಶೆಣೈ ಮತ್ತು ಕುಮಾರ್ ಇನ್‌ಸ್ಟಾಗ್ರಾಂನಲ್ಲಿ ಪರಿಚಿತರಾಗಿದ್ದಾರೆ. ಸೋನಿಯಾ ಶೆಣೈ ಬಿಟ್‌ಕಾಯಿನ್‌ಗಳಲ್ಲಿ ವ್ಯವಹರಿಸುವ ಅನೇಕ ಬಹುರಾಷ್ಟ್ರೀಯ ಹೂಡಿಕೆ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ ಎಂದು ಹೇಳಿ ನಂಬಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
"ಅವಳನ್ನು ನಂಬಿ, ನಾನು ಜೂನ್ 2022 ರಲ್ಲಿ ಹೂಡಿಕೆ ಮಾಡಿದೆ. ಜುಲೈನಲ್ಲಿ, ನನ್ನ ಲಾಭದ 2 ಕೋಟಿ ರೂಪಾಯಿ ಸಿದ್ಧವಾಗಿದೆ. ಆದರೆ ನಾನು ಟಿಡಿಎಸ್‌ಗೆ 50 ಲಕ್ಷ ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಳು. ಆಕೆಯನ್ನು ನಂಬಿ ವಿವಿಧ ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲ ಪಡೆದು 50 ಲಕ್ಷ ರೂಪಾಯಿ ನೀಡಿದೆ," ಎಂದು ದೂರುದಾರರು ಹೇಳುತ್ತಾರೆ.
"ನಾನು 50 ಲಕ್ಷ ರೂಪಾಯಿ ನೀಡಿದ ಬಳಿಕ 2 ಕೋಟಿ ಲಾಭವನ್ನು ಶೀಘ್ರದಲ್ಲೇ ನನ್ನ ಖಾತೆಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು. ನಾನು ಈವರೆಗೂ ಕಾಯುತ್ತಾ ಕೂತಿದ್ದೇನೆ. ನಾನು ಮೋಸ ಹೋಗಿದ್ದೇನೆ ಎಂದು ಈಗ ನನ್ನ ಗಮನಕ್ಕೆ ಬರುತ್ತಿದೆ," ಎಂದು ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
500 ಮಂದಿಯ ವಂಚಿಸಿದ ವ್ಯಕ್ತಿ
ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರ 500 ಮಂದಿಯನ್ನು ವಂಚಿಸಿದ್ದಾನೆ. ಕೊನೆಗೆ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಅದೆಷ್ಟೋ ಮಂದಿ ವಂಚನೆಯನ್ನು ಮಾಡಿ ತಪ್ಪಿಸಿಕೊಂಡು, ತಲೆಮರೆಸಿಕೊಂಡು ಬದುಕುತ್ತಿರುವುದು ಇದೆ. ಆದರೆ ಈ ವ್ಯಕ್ತಿ ತಾನು ವಂಚಿಸಿದ ಜನರಿಂದ ರಕ್ಷಣೆ ಪಡೆಯಲು ತಾನೇ ಪೊಲೀಸರಿಗೆ ಕರೆ ಮಾಡಿ ಬಂಧಿಸಿ ಎಂದು ಹೇಳಿದ್ದಾರೆ.
ಹಲವಾರು ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸಿದ 38 ವರ್ಷದ ವ್ಯಕ್ತಿ, ಕೆಲವು ಸಂತ್ರಸ್ತರು ತಮ್ಮ ಹಣವನ್ನು ಮರುಪಡೆಯಲು ಒತ್ತಡವನ್ನು ಹೇರಿದಾಗ ತನ್ನನ್ನು ತಾನು ಉಳಿಸಿಕೊಳ್ಳಲು 112 ಗೆ ಕರೆ ಮಾಡಿದ್ದಾನೆ ಎಂದು ವರದಿಯಾಗಿದೆ. ಆರೋಪಿಗಳು ಸಂತ್ರಸ್ತರಾದ ಕೆಲವರಿಂದ ಲಕ್ಷಗಟ್ಟಲೆ ಹಣ ಪಡೆದಿದ್ದರು ಎನ್ನಲಾಗಿದೆ.


Click it and Unblock the Notifications