ಬೆಂಗಳೂರಿನ ಸಾಫ್ಟ್‌ವೇರ್ ವೃತ್ತಿಪರರೊಬ್ಬರು ಆನ್‌ಲೈನ್ ಹೂಡಿಕೆ ಹಗರಣದಲ್ಲಿ 50 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವನ್ನು ಅನುಭವಿಸಿದ್ದಾರೆ. ಇದು ಇತ್ತೀಚಿನ ತಿಂಗಳುಗಳಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ವರದಿಯಾದ ನೂರಾರು ಪ್ರಕರಣಗಳಂತೆಯೇ ಇದೆ.
ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ದರ್ಶನ್ ಎಸ್ ಎಂಬ ಟೆಕ್ಕಿಗೆ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ 50.53 ಲಕ್ಷ ರೂಪಾಯಿ ವಂಚಿಸಿದ್ದಾರೆ. ಪಾವತಿ ಮೇಲೆ ಆರಂಭದಲ್ಲಿ ಅವರಿಗೆ ಭಾರೀ ಆದಾಯವನ್ನು ಕೂಡಾ ನೀಡಲಾಗಿದೆ.

ಆರಂಭಿಕ ಹೂಡಿಕೆಯಿಂದ ತನ್ನ ಖಾತೆಗೆ ಹಣ ಬರುತ್ತಿರುವುದನ್ನು ನೋಡಿದ ಈ ಟೆಕ್ಕಿಯೂ ಆರೋಪಿಗಳನ್ನು ನಂಬಿದ್ದಾರೆ. ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಟೆಕ್ಕಿ ದರ್ಶನ್ ಎಸ್ ಅನ್ನು ಸಂಪರ್ಕ ಮಾಡಲಾಗಿದೆ. ಹೂಡಿಕೆ ಮಾಡಿದ ಉತ್ತಮ ರಿಟರ್ನ್ ನೀಡಲಾಗುತ್ತದೆ ಎಂದು ವಂಚಕರು ಹೇಳಿದ್ದು ಟೆಕ್ಕಿ ಹೂಡಿಕೆ ಮಾಡಿದ್ದಾರೆ.
ಆರಂಭದಲ್ಲಿ ಟೆಕ್ಕಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದು, ಆದಾಯವನ್ನು ಗಳಿಸಿದ್ದಾರೆ. ಈ ಯೋಜನೆ ನಿಜವೆಂದು ನಂಬಿದ್ದಾರೆ. ಅದಾದ ಬಳಿಕ ವಂಚಕರು ಹತ್ತು ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡುವಂತೆ ಟೆಕ್ಕಿಗೆ ಹೇಳಿದ್ದಾರೆ. ಈ ಮೊತ್ತವನ್ನು ಬಡ್ಡಿಯೊಂದಿಗೆ ವಾಪಾಸ್ ನೀಡಲಾಗುತ್ತದೆ ಎಂದು ಕೂಡಾ ವಂಚಕರು ಹೇಳಿದ್ದಾರೆ. ಹಾಗೆಯೇ ಕೆಲಸಕೊಡುವುದಾಗಿಯೂ ಹೇಳಿದ್ದಾರೆ.
ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ದರ್ಶನ್ ಎಸ್‌ಗೆ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ 50.53 ಲಕ್ಷ ರೂಪಾಯಿ ವಂಚಿಸಿದ್ದಾರೆ. "ಸಂತ್ರಸ್ತರು 50 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವಿವಿಧ ಖಾತೆಗಳಲ್ಲಿ ಡೆಪಾಸಿಟ್ ಮಾಡಲು ಹೇಳಿದ ಡೆಪಾಸಿಟ್ ಮಾಡಿದ ಬಳಿಕ ಈ ವಂಚಕರು ಹಣವನ್ನು ಹಿಂದಿರುಗಿಸಿಲ್ಲ, ಪ್ರತಿಕ್ರಿಯೆಯನ್ನು ಕೂಡಾ ನೀಡಿಲ್ಲ," ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಗರಣವು ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 15 ರ ನಡುವೆ ನಡೆದಿದೆ ಎಂದು ಹೇಳಲಾಗಿದೆ. ಖಾಸಗಿ ಜಾಹೀರಾತು ಸಂಸ್ಥೆಯ ಮಹಿಳೆ ಎಂದು ಹೇಳಿಕೊಂಡು ಏಮಾ ಎಂಬ ಮಹಿಳೆ ಈ ಟೆಕ್ಕಿಯನ್ನು ಸಂಪರ್ಕ ಮಾಡಿರುವುದು ಎಂದು ಆರೋಪ ಮಾಡಲಾಗಿದೆ. "ಪ್ರಕರಣದ ರೀತಿಯು ಇತ್ತೀಚಿನ ದಿನಗಳಲ್ಲಿ ನಾವು ಹಲವಾರು ಪ್ರಕರಣಗಳಲ್ಲಿ ನೋಡಿದಂತೆಯೇ ಇದೆ. ಸ್ಥಳೀಯ ಆಪರೇಟರ್‌ಗಳನ್ನು ನಾವು ಟ್ರ್ಯಾಕ್ ಮಾಡಿದ್ದೇವೆ," ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಮಹಿಳೆಗೆ ವಂಚನೆ
ಈ ಹಿಂದೆ ಮಹಿಳೆಯೊಬ್ಬರು ಆಮಿಷಕ್ಕೆ ಒಳಗಾಗಿ 8.5 ಲಕ್ಷ ರೂಪಾಯಿಗಳ ವಂಚನೆಗೆ ಒಳಗಾಗಿದ್ದಾರೆ. ಕೊಂಚ ಹೂಡಿಕೆ ಮಾಡಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವಿದೆ ಎಂದು ಈ ವಂಚಕರು ಹೇಳಿದ್ದಾರೆ. ಅದಾದ ಬಳಿಕ ಈ ಮಹಿಳೆಯು ಹೂಡಿಕೆ ಮಾಡಿದ್ದು, ಹಣವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ 84 ಬ್ಯಾಂಕ್ ಖಾತೆಗಳ ಮೂಲಕ ವಂಚನೆ ನಡೆದಿದ್ದು ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ಈ ಬ್ಯಾಂಕ್ ಖಾತೆಗಳಲ್ಲಿ 854 ಕೋಟಿ ರೂಪಾಯಿ ಜಮೆ ಮಾಡಲಾಗಿದೆ. ಸೈಬರ್ ಕ್ರೈಂ ಪೊಲೀಸರು ಈ ಖಾತೆಗಳನ್ನು ಪತ್ತೆಹಚ್ಚಿ ಸೆಪ್ಟೆಂಬರ್‌ನಲ್ಲಿ ಫ್ರೀಜ್ ಮಾಡುವ ವೇಳೆಗೆ, ಈ ಖಾತೆಯಲ್ಲಿ ಬರೀ 5 ಕೋಟಿ ರೂಪಾಯಿ ಇತ್ತು ಎಂದು ವರದಿ ಉಲ್ಲೇಖಿಸಿದೆ. ಭಾರತದಾದ್ಯಂತ ಇದೇ ರೀತಿಯಾಗಿ 5,013 ಪ್ರಕರಣಗಳು ನಡೆದಿದೆ.


Click it and Unblock the Notifications