ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರು ನಗರದಲ್ಲಿ ವಿವಿಧೆಡೆ ಗಣೇಶ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆ ಮತ್ತು ಇತರ ಕಾರ್ಯಗಳಿಂದ ಕೆಲವು ರಸ್ತೆಗಳ ಮಾರ್ಗಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಅದರ ವಿವರ ಇಲ್ಲಿದೆ.
ಬೆಂಗಳೂರು ನಗರ ಸಂಚಾರ ಉತ್ತರ ವಿಭಾಗದ ವ್ಯಾಪ್ತಿಯ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮುನಿರೆಡ್ಡಿಪಾಳ್ಯದಲ್ಲಿ ಸೆಪ್ಟೆಂಬರ್ 14 ರಂದು ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಜರುಗಲಿದ್ದು, ಈ ಮೆರವಣಿಗೆಯಲ್ಲಿ ಡಿ.ಜೆ. ಟ್ಯಾಬೋಗಳು. ಸಂಗೀತ. ಡೊಳ್ಳುಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಮಾರು 55 ರಿಂದ 60 ಗಣೇಶ ಮೂರ್ತಿಗಳು ಮೆರವಣಿಗೆಯ ಮೂಲಕ ಸಾಗುವುದರಿಂದ ಸುಗಮ ಸಂಚಾರ ಹಿತದೃಷ್ಟಿಯಿಂದ ಈ ಕೆಳಕಂಡ ರಸ್ತೆಗಳಲ್ಲಿ ದಿನಾಂಕ : 14 ರಂದು ಸಂಜೆ 06.00 ಗಂಟೆಯಿಂದ 15ರಂದು ಬೆಳಗ್ಗೆ 04.00 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ತ ಸ್ಥಳಗಳಲ್ಲಿ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಸಂಚಾರ ಬಂದೋಬಸ್ತ್ ಮಾಡಿಕೊಳ್ಳಲಾಗಿರುತ್ತದೆ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮದ ನಿಮಿತ್ತವಾಗಿ ಸಂಚಾರ ಬದಲಿ ಮಾರ್ಗಗಳ ವಿವರಗಳು ಈ ಕೆಳಗಿನಂತೆ ಇರುತ್ತದೆ

ಮಾರ್ಗ ಬದಲಾವಣೆ ವಿವರಗಳು
1. ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ವೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ದಿಣ್ಣೂರು ಮುಖ್ಯ ರಸ್ತೆ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು-ಆರ್.ಟಿ.ನಗರ ಮುಖ್ಯರಸ್ತೆ ಗುಂಡುರಾವ್ ಮನೆ ಜಂಕ್ಷನ್ - ಬಲತಿರುವು ಬೆಂಗಳೂರ ಬಳ್ಳಾರಿ ರಸ್ತೆ-ಎಡತಿರುವು- (ಮೇಕ್ರಿ ಸರ್ಕಲ್ ಅಂಡರ್‌ಪಾಸ್ ಮೂಲಕ ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದು) ಹಾಗೂ ಮೇಟ್ರಿ ಸರ್ಕಲ್ ಸರ್ವಿಸ್ ರಸ್ತೆ ಎಡತಿರುವು -ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋಸ್ಟೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
2. ಕಂಟೋನ್ಮಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸುಲ್ತಾನ್ ಪಾಳ್ಯ ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು.
ಜಯಮಹಲ್ ರಸ್ತೆ ಮೇಕ್ರಿ ಸರ್ಕಲ್ ಬಲತಿರುವು ಬೆಂಗಳೂರು ಬಳ್ಳಾರಿ ರಸ್ತೆ 2.3.0
ಪಾಸ್ ಬಲತಿರುವು ಸಿ.ಬಿ.ಐ ರಸ್ತೆ ಬಲತಿರುವು ಆರ್.ಟಿ.ನಗರ ಮುಖ್ಯರಸ್ತೆ-ಆರ್.ಟಿ.ನಗರ
ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
3. ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಮೇಕ್ರಿಸರ್ಕಲ್-ಎಡತಿರುವು ಬೆಂಗಳೂರು ಬಳ್ಳಾರಿ ರಸ್ತೆ-ಸಿ.ಬಿ.ಐ ಅಂಡರ್ ಪಾಸ್-ಬಲತಿರುವು ಸಿ.ಬಿ.ಐ ರಸ್ತೆ -ಬಲತಿರುವು ಆರ್.ಟಿ ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
4. ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:
ಮೇಕ್ರಿ ಸರ್ಕಲ್ ಅಂಡರ್‌ಪಾಸ್-ಬೆಂಗಳೂರು ಬಳ್ಳಾರಿ ರಸ್ತೆ- ಸಿ.ಬಿ.ಐ. ಜಂಕ್ಷನ್ - ಕರ್ನಾಟಕ ಸ್ಪಿರಿಟ್ -ಬಲ ತಿರುವು ಬಿಬಿ ಸರ್ವೀಸ್ ರಸ್ತೆ-ಎಡತಿರುವು-ಸಿ.ಬಿ.ಐ ರಸ್ತೆ -ಬಲ ತಿರುವು ಆರ್.ಟಿ.ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
ಈ ಮೇಲ್ಕಂಡ ಮುಖ್ಯರಸ್ತೆಗಳಲ್ಲಿ ದಿನಾಂಕಃ 14.09.2024 ರ ಸಂಜೆ 06.00 ಗಂಟೆಯಿಂದ ಪ್ರಾರಂಭಗೊಂಡು ದಿನಾಂಕಃ 15.09.2024 ರ ಬೆಳಗ್ಗೆ 04.00 ಗಂಟೆಯವರೆಗೆ ಈ ಸಂಚಾರ ಮಾರ್ಗದ ಮಾರ್ಪಾಡು ಜಾರಿಯಲ್ಲಿರುತ್ತದೆ ಎಂದು ಸಂಚಾರಿ ಪೊಲೀಸರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications