ಬ್ರಿಟಿಷ್ ಹೆಸರಾಂತ ಉದ್ಯಮಿ ಸರ್ ರಿಚರ್ಡ್ ಚಾರ್ಲ್ಸ್ ನಿಕೋಲಸ್ ಬ್ರಾನ್ಸನ್ ತನ್ನ ಪೂರ್ವಜರ ಮೂಲ ಭಾರತದ ತಮಿಳುನಾಡಿನಲ್ಲಿನ ಕಡಲೂರು ಎಂದು ಹೇಳಿಕೊಂಡಿರುವುದು ಭಾರೀ ಸುದ್ದಿಯಾಗಿದೆ. ವರ್ಜಿನ್ ಗ್ರೂಪ್ ನ ಸಂಸ್ಥಾಪಕರಾದ ಬ್ರಾನ್ಸನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅಂದ ಹಾಗೆ ವರ್ಜಿನ್ ಗ್ರೂಪ್ ನಿಂದ ವಿಮಾನ ಯಾನವೂ ಸೇರಿದಂತೆ ನಾನೂರು ವಿವಿಧ ಕ್ಷೇತ್ರಗಳಲ್ಲಿ ಹಣ ತೊಡಗಿಸಿ, ವ್ಯವಹಾರ ಮಾಡಲಾಗುತ್ತಿದೆ. 'ಕೆಲ ವರ್ಷಗಳ ಹಿಂದೆ ಟೀವಿ ಕಾರ್ಯಕ್ರಮವೊಂದರ ಸಲುವಾಗಿ ನನ್ನ ಡಿಎನ್ ಎ ಪರೀಕ್ಷೆ ಮಾಡಿಸಿದಾಗ ನನ್ನ ಅಜ್ಜಿಯ ಮುತ್ತಜ್ಜಿ (ಪೂರ್ವಜರು) ಭಾರತದ ತಮಿಳುನಾಡು ರಾಜ್ಯದ ಕಡಲೂರಿನವರು ಎಂಬುದು ಗೊತ್ತಾಯಿತು' ಎಂದಿದ್ದಾರೆ.
1793ನೇ ಇಸವಿಯಿಂದ ನಾಲ್ಕು ತಲೆಮಾರಿನವರು ಕಡಲೂರಿನಲ್ಲೇ ವಾಸವಿದ್ದಾರೆ ಎಂದಿರುವ ಅವರು, ನಾನು ಯಾವಾಗೆಲ್ಲ ಭಾರತೀಯರನ್ನು ಭೇಟಿ ಮಾಡುತ್ತೀನೋ ಆಗ, "ನಾವು ಸಂಬಂಧಿಗಳಿರಬಹುದು ಎನ್ನಲು ಹೆಮ್ಮೆ ಎನಿಸುತ್ತದೆ" ಎಂದೇ ಹೇಳ್ತೀನಿ ಎಂಬ ಮಾತನ್ನು ಬ್ರಾನ್ಸನ್ ಹೇಳಿಕೊಂಡಿದ್ದಾರೆ.

ಭಾರತದೊಂದಿಗಿನ ತಮ್ಮ ನಂಟನ್ನು ಸಂಭ್ರಮಿಸುವ ಕಾರಣಕ್ಕೆ ವರ್ಜಿನ್ ಆಟ್ಲಾಂಟಿಕ್ ನಿಂದ ಭಾರತಕ್ಕಾಗಿ ಹೊಸ ಐಕಾನ್ ಸಿದ್ಧಪಡಿಸಲಾಗಿದೆ. ಅದನ್ನು 'ಅರಿಯಾ' ಎನ್ನಲಾಗಿದೆ. ಬ್ರಾನ್ಸನ್ ನ ಅಜ್ಜಿಯ ಮುತ್ತಜ್ಜಿಯನ್ನು ಇದೇ ಹೆಸರಿನಿಂದ ಕರೆಯಲಾಗುತ್ತಿತ್ತಂತೆ. ಬಿಲಿಯನೇರ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲೂ ಹಣ ತೊಡಗಿಸಿದ್ದಾರೆ.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications