ಫ್ರೆಂಚ್ ಟೆಕ್ನಾಲಜಿ ಕಂಪೆನಿ ಕ್ಯಾಪ್ ಜೆಮಿನಿ ಭಾರತದಲ್ಲಿ 1.15 ಲಕ್ಷ ಮಂದಿ ಉದ್ಯೋಗಿಗಳನ್ನು ಹೊಂದಿದ್ದು, ಈ ವರ್ಷ 30 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. ಹೊಸಬರು, ಅನುಭವಿ ವೃತ್ತಿಪರರು, ವೃತ್ತಿಯ ಮಧ್ಯಮ ಹಂತದಲ್ಲಿ ಇರುವವರು ಹೀಗೆ ಎಲ್ಲರನ್ನೂ ನೇಮಿಸಿಕೊಳ್ಳುವುದಾಗಿ ಕ್ಯಾಪ್ ಜೆಮಿನಿ ಮುಖ್ಯ ಅಧಿಕಾರಿ ಅಶ್ವಿನ್ ಯಾರ್ದಿ ತಿಳಿಸಿದ್ದಾರೆ.
ಕ್ಯಾಪ್ ಜೆಮಿನಿಗೆ ಇರುವ ವಿಶ್ವದ ಒಟ್ಟು ಸಿಬ್ಬಂದಿ ಸಂಖ್ಯೆಯಲ್ಲಿ ಭಾರತದಲ್ಲೇ ಅರ್ಧಕ್ಕಿಂತ ಹೆಚ್ಚಿನ ಉದ್ಯೋಗಿಗಳಿದ್ದಾರೆ. "ಭಾರತವು ನಮ್ಮ ಉದ್ಯಮದ ಅತಿ ಮುಖ್ಯವಾದ ಭಾಗ. ಈ ವರ್ಷ ನಾವು 25ರಿಂದ 30 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದ್ದೇವೆ" ಎಂದು ಯಾರ್ದಿ ತಿಳಿಸಿದ್ದಾರೆ.
ಸದ್ಯಕ್ಕೆ ಕಂಪೆನಿಯು ಸಿಬ್ಬಂದಿಯನ್ನು ಭವಿಷ್ಯದ ತಂತ್ರಜ್ಞಾನಕ್ಕಾಗಿ ತರಬೇತುಗೊಳಿಸುವುದಕ್ಕೆ ಶ್ರಮ ಹಾಕುತ್ತಿದೆ. ಇದು ಈಗ ನಿರಂತರ ಪ್ರಕ್ರಿಯೆ ಆಗಿದೆ ಎಂದು ಅವರು ಹೇಳಿದ್ದಾರೆ. 30 ವರ್ಷದೊಳಗಿನ ಸಿಬ್ಬಂದಿ ಕ್ಯಾಪ್ ಜೆಮಿನಿಯ ಒಟ್ಟು ಸಂಖ್ಯೆಯಲ್ಲಿ ಶೇಕಡಾ 65ರಷ್ಟಿದ್ದಾರೆ. ಕಲಿಕೆ ಉತ್ಸಾಹದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಆರ್ಕಿಟೆಕ್ಟ್ ಹುದ್ದೆಯಲ್ಲಿ ಇರುವ, ಹತ್ತರಿಂದ ಹದಿನೈದು ವರ್ಷದ ಅನುಭವ ಇರುವ ಮಧ್ಯಮ ಹಂತದ ಮ್ಯಾನೇಜರ್ ಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications