For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2022: ಕೇಂದ್ರದಿಂದ ಕ್ಯಾಪೆಕ್ಸ್ ಯೋಜನೆಗಳಿಗೆ ಉತ್ತೇಜನ

|

ನವದೆಹಲಿ, ಜನವರಿ 20: ಭಾರತದ 2022-23ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಉತ್ತಮ ನಿಧಿ ಸಂಗ್ರಹಣೆ ಮತ್ತು ನಿರ್ವಹಣೆಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ.

 

ಉಕ್ಕು ಮತ್ತು ಸಿಮೆಂಟ್‌ನಂತಹ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ಮೂಲಸೌಕರ್ಯದಲ್ಲಿನ ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸು ಸಚಿವಾಲಯ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕ್ಯಾಪೆಕ್ಸ್ ಯೋಜನೆಗಳು ಮುಂಬರುವ ಹಣಕಾಸು ವರ್ಷದ ಸರ್ಕಾರದ ಬಜೆಟ್‌ನ ಪ್ರಮುಖ ವಿಷಯವಾಗಲಿದೆ.

 

ಕೇಂದ್ರ ಬಜೆಟ್-2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂಡದ ಪರಿಚಯಕೇಂದ್ರ ಬಜೆಟ್-2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂಡದ ಪರಿಚಯ

ಸರ್ಕಾರವು ತಮ್ಮ ಕ್ಯಾಪೆಕ್ಸ್ ಯೋಜನೆಗಳನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹಿಸಲಾಗುತ್ತದೆ. ಇದರ ಜೊತೆಗೆ ರಾಜ್ಯಗಳ ಕ್ಯಾಪೆಕ್ಸ್ ಯೋಜನೆಗಳು 5.8 ಲಕ್ಷ ಕೋಟಿ ರೂಪಾಯಿಗೆ ತಲುಪಿದರೆ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತುತ ನೀತಿಯನ್ನು ಮುಂದುವರಿಸುವ ನಿರೀಕ್ಷೆಯಿದೆ.

ಕೇಂದ್ರ ಬಜೆಟ್ 2022: ಕೇಂದ್ರದಿಂದ ಕ್ಯಾಪೆಕ್ಸ್ ಯೋಜನೆಗಳಿಗೆ ಉತ್ತೇಜನ

ಏನಿದು ಕ್ಯಾಪೆಕ್ಸ್ ಯೋಜನೆಗಳು?:

ಬಂಡವಾಳ ವೆಚ್ಚ (CapEx) ಆದಾಯದ ಮೇಲೆ ಖರ್ಚು ಮಾಡುವ ಬದಲು ಬ್ಯಾಲೆನ್ಸ್ ಶೀಟ್‌ನಲ್ಲಿ ದಾಖಲಾದ ಸರಕುಗಳು ಅಥವಾ ಸೇವೆಗಳ ಪಾವತಿ ಆಗಿರುತ್ತದೆ. ಅಸ್ತಿತ್ವದಲ್ಲಿರುವ ಆಸ್ತಿ ಮತ್ತು ಉಪಕರಣಗಳನ್ನು ನಿರ್ವಹಿಸಲು ಕಂಪನಿಗಳಿಗೆ CapEx ಖರ್ಚು ಮುಖ್ಯವಾಗಿರುತ್ತದೆ. ಕಂಪನಿಯ ಬೆಳವಣಿಗೆಗೆ ಅಗತ್ಯವಾದ ಹೊಸ ತಂತ್ರಜ್ಞಾನ ಮತ್ತು ಇತರ ವಸ್ತುಗಳ ಮೇಲಿನ ಹೂಡಿಕೆ ಆಗಿರುತ್ತದೆ.

ರಾಜ್ಯಗಳಿಗೆ ಹಣ ಖರ್ಚಿನ ಸ್ವಾತಂತ್ರ್ಯ:

ಕೇಂದ್ರ ಸರ್ಕಾರದ ನಿರ್ಧಾರವು ಮೂಲಸೌಕರ್ಯಗಳನ್ನು ನಿರ್ಮಿಸುವ ಸಲುವಾಗಿ ತಮ್ಮ ಕ್ಯಾಪೆಕ್ಸ್ ಗುರಿಗಳನ್ನು ಪೂರೈಸಲು ರಾಜ್ಯಗಳನ್ನು ಪ್ರೋತ್ಸಾಹಿಸುತ್ತದೆ. ಅದಲ್ಲದೆ, ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡುತ್ತದೆ. ಕಳೆದ 18 ತಿಂಗಳುಗಳಲ್ಲಿ ಕ್ಯಾಪೆಕ್ಸ್ ಯೋಜನೆಗಳು ಅಥವಾ ವಿದ್ಯುತ್ ಸುಧಾರಣೆಗಳಂತಹ ಕೆಲವು ಮಾನದಂಡಗಳನ್ನು ಪೂರೈಸಿದರೆ ರಾಜ್ಯಗಳು ಹೆಚ್ಚಿನ ಸಾಲವನ್ನು ಪಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿತು. ಅಂತಹ ಉತ್ತೇಜನಗಳು ರಾಜ್ಯಗಳಿಗೆ ಉತ್ತಮ ಕಾರ್ಯತಂತ್ರವನ್ನು ರೂಪಿಸಲು ಮತ್ತು ಕೇಂದ್ರದೊಂದಿಗೆ ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಕ್ಯಾಪೆಕ್ಸ್ ಪುಶ್ ಹೊರತಾಗಿಯೂ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಹಣಕಾಸಿನ ಬಲವರ್ಧನೆಯ ಹಾದಿಯಲ್ಲಿ ಮುಂದುವರಿಯುತ್ತದೆ. ಮುಂದಿನ ವರ್ಷಕ್ಕೆ ನೇರ ಮತ್ತು ಪರೋಕ್ಷ ತೆರಿಗೆಗಳ ಮೂಲಕ ಹೆಚ್ಚು ಆದಾಯದ ಸಹಾಯದಿಂದ ಸರ್ಕಾರವು ತನ್ನ ಹಣಕಾಸಿನ ಗುರಿಗಳು ಮತ್ತು ಖರ್ಚು ಅಗತ್ಯತೆಗಳನ್ನು ಸಮತೋಲನಗೊಳಿಸುತ್ತದೆ. ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವೆಚ್ಚವನ್ನು ಹೆಚ್ಚಿಸುವುದಕ್ಕೆ ಅವಕಾಶ ನೀಡಿದರೂ ಸಹ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಕೇಂದ್ರ ಬಜೆಟ್ ಮಂಡನೆ ಯಾವಾಗ?:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2022-2023 ಸಾಲಿನ ಕೇಂದ್ರೀಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರ ಈ ಬಾರಿ ಮಂಡಸಲಿರುವ ಬಜೆಟ್ ಹಿಂದೆಂದಿಗಿಂತಲೂ ವಿಭಿನ್ನ ಮತ್ತು ವಿಶೇಷವಾಗಿರಲಿದೆ. ಹಣಕಾಸಿನ ಕಾಳಜಿಯನ್ನು ಬದಿಗಿಟ್ಟು ಸಾರ್ವಜನಿಕ ಖರ್ಚು, ಬೇಡಿಕೆ ಹೆಚ್ಚಿಸುವ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ದೇಶದ ಆರ್ಥಿಕತೆಗೆ ಮುಷ್ಠಿ ನೀಡುವ ಉದ್ದೇಶದಿಂದ ಬಜೆಟ್ ರಚಿಸುವಲ್ಲಿ ಸಚಿವರಿಗೆ ಹಲವು ಸಲಹೆಗಾರರು ಮತ್ತು ಕಾರ್ಯದರ್ಶಿಗಳು ತಂಡವು ಸಹಾಯ ಮಾಡುತ್ತಿದ್ದಾರೆ.

English summary

Central Finance Ministry to incentivise states for higher Capex Push in Union Budget 2022

Central Finance Ministry to incentivise states for higher Capex Push in Union Budget 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X