For Quick Alerts
ALLOW NOTIFICATIONS  
For Daily Alerts

7 ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರ ಅಸ್ತು: 4,445 ಕೋಟಿ ವೆಚ್ಚ

|

ಏಳು ಹೊಸ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಕ್ರಮವು ಜವಳಿ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸಲು ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ರೈಲ್ವೇ ಉದ್ಯೋಗಿಗಳಿಗೆ ಶುಭಸುದ್ದಿ: ಬೋನಸ್ ರೂಪದಲ್ಲಿ 78 ದಿನಗಳ ಸಂಬಳರೈಲ್ವೇ ಉದ್ಯೋಗಿಗಳಿಗೆ ಶುಭಸುದ್ದಿ: ಬೋನಸ್ ರೂಪದಲ್ಲಿ 78 ದಿನಗಳ ಸಂಬಳ

ಕೇಂದ್ರ ಸರ್ಕಾರದ ಈ ಹೆಜ್ಜೆಯ ಹಿಂದಿರುವ ಸರ್ಕಾರದ ಉದ್ದೇಶವೂ ಭಾರತವನ್ನು ಟೆಕ್ಸ್‌ಟೈಲ್ಸ್‌ ಕ್ಷೇತ್ರದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು. ಮುಂದಿನ ಐದು ವರ್ಷಗಳಲ್ಲಿ ಏಳು ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ಸ್‌ ಪ್ರದೇಶಗಳು ಮತ್ತು ಅಪರೆಲ್ ಪಾರ್ಕ್‌ಗಳ (ಪಿಎಂ-ಮಿತ್ರ) ನಿರ್ಮಾಣಕ್ಕಾಗಿ ಒಟ್ಟು 4,445 ಕೋಟಿ ವೆಚ್ಚವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಹಲವಾರು ರಾಜ್ಯಗಳಲ್ಲಿ ಸ್ಥಾಪನೆಯಾಗಲಿರುವ ರಫ್ತು ಮತ್ತು ಉದ್ಯೋಗವನ್ನು ಹೆಚ್ಚಿಸಲು ಮೋದಿ ಸರ್ಕಾರದ ಬೃಹತ್ ಸ್ಥಾವರಗಳ ಒಂದು ನೋಟವನ್ನು ಹಂಚಿಕೊಂಡ ಕೇಂದ್ರ ಕ್ಯಾಬಿನೆಟ್, ವಿವಿಧ ರಾಜ್ಯಗಳಲ್ಲಿ (ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ) ಗ್ರೀನ್ ಫೀಲ್ಡ್ ಅಥವಾ ಬ್ರೌನ್ ಫೀಲ್ಡ್ ತಾಣಗಳಲ್ಲಿ ಇಂಟಿಗ್ರೇಟೆಡ್ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ. ಗ್ರೀನ್‌ಫೀಲ್ಡ್ ಸೈಟ್‌ಗಳಲ್ಲಿ ಪಿಎಂ-ಮಿತ್ರ ಸಾಮಾನ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಕೇಂದ್ರ ಸರ್ಕಾರವು ರೂ. 500 ಕೋಟಿಗಳಷ್ಟು ಬಂಡವಾಳದ ಸಹಾಯವನ್ನು ಅಥವಾ ಯೋಜನಾ ವೆಚ್ಚದ ಶೇಕಡಾ 30 ರಷ್ಟನ್ನು ನೀಡುತ್ತದೆ.

7 ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳ ಸ್ಥಾಪನೆಗೆ ಮುಂದಾದ ಸರ್ಕಾರ

ಬ್ರೌನ್‌ಫೀಲ್ಡ್ ಸೈಟ್‌ಗಳಿಗೆ ಬೆಂಬಲ ಮೊತ್ತವು ವೆಚ್ಚದ 30 ಪ್ರತಿಶತ ಮತ್ತು ಮೌಲ್ಯಮಾಪನದ ನಂತರ ರೂ 200 ಕೋಟಿಗೆ ಸೀಮಿತವಾಗಿದೆ. ಈ ಯೋಜನೆಯನ್ನು ಖಾಸಗಿ ವಲಯಕ್ಕೆ ಆಕರ್ಷಕವಾಗಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ, ಜವಳಿ ಉತ್ಪಾದನಾ ಘಟಕಗಳ ಆರಂಭಿಕ ಸ್ಥಾಪನೆಗೆ ಸರ್ಕಾರ ಪ್ರತಿ ಉದ್ಯಾನವನಕ್ಕೆ 300 ಕೋಟಿ ರೂ. ಅಥವಾ ಪಿಎಂ-ಮಿತ್ರದಲ್ಲಿ ಹೊಸದಾಗಿ ಸ್ಥಾಪಿಸಲಾದ ಘಟಕದ ವಹಿವಾಟಿನ ಶೇಕಡಾ 3 ರ ವರೆಗೆ ಇದನ್ನು ಪಾವತಿಸಲಾಗುವುದು.

ಬಜೆಟ್ 2021 ರಲ್ಲಿ ಘೋಷಿಸಲಾದ ಬೃಹತ್ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳು ಸಾರಿಗೆ ಸೌಲಭ್ಯವನ್ನು ಕಡಿಮೆ ಮಾಡಲು ಏಕೀಕೃತ ಸೌಲಭ್ಯಗಳನ್ನು ಮತ್ತು ತ್ವರಿತ ತಿರುವು ಸಮಯವನ್ನು ಹೊಂದಿರುತ್ತದೆ. ಭಾರತವು ಜವಳಿ ಕ್ಷೇತ್ರದ ಸಂಪೂರ್ಣ ಸಮಗ್ರ ಜಾಗತಿಕ ಸ್ಪರ್ಧಾತ್ಮಕ ಉತ್ಪಾದನೆ ಮತ್ತು ದೇಶವು ರಫ್ತು ಕೇಂದ್ರವಾಗಿ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು.

ಕೇವಲ ಉತ್ಪಾದನೆ ಅಷ್ಟೇ ಅಲ್ಲದೆ ಇವುಗಳು ವಿನ್ಯಾಸ ಕೇಂದ್ರಗಳು ಮತ್ತು ಪರೀಕ್ಷಾ ಕೇಂದ್ರಗಳನ್ನು ಸಹ ಹೊಂದಿರುತ್ತವೆ. ಇವುಗಳಲ್ಲಿ ಕಾರ್ಮಿಕರ ಆಸ್ಪತ್ರೆಗಳು ಮತ್ತು ವಸತಿ, ಲಾಜಿಸ್ಟಿಕ್ಸ್ ಪಾರ್ಕ್, ಗೋದಾಮು, ವೈದ್ಯಕೀಯ, ತರಬೇತಿ ಮತ್ತು ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ ಸೌಲಭ್ಯಗಳು ಕೂಡ ಇರುತ್ತವೆ. ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಜವಳಿ ಪಾರ್ಕ್ ನಿವ್ವಳ ಉತ್ಪಾದನಾ ಚಟುವಟಿಕೆಗಾಗಿ ಶೇ .50 ಪ್ರದೇಶ, ಉಪಯುಕ್ತತೆಗಳಿಗೆ ಶೇ .20 ಪ್ರದೇಶ ಮತ್ತು ವಾಣಿಜ್ಯ ಅಭಿವೃದ್ಧಿಗೆ ಶೇ .10 ಪ್ರದೇಶವನ್ನು ಅಭಿವೃದ್ಧಿಪಡಿಸುತ್ತದೆ.

English summary

Central Govt Approves Rs 4445 Crore Plan To Setup 7 Mega Textile Parks

The Cabinet Wednesday approved the setting up of 7 Mega Integrated Textile Region and Apparel parks with a total outlay of Rs 4,445 crore for five years to position India strongly on the global textiles map.
Story first published: Thursday, October 7, 2021, 9:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X