ಆನ್‌ಲೈನ್ ಶಾಪಿಂಗ್‌ಗೆ ಬರಲಿದೆ ಕಾನೂನು?

ಇತ್ತೀಚಿನ ದಿನಗಳಲ್ಲಿ ಜನರು ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚು ಮೊರೆ ಹೋಗಿದ್ದಾರೆ. ಏನೇ ಖರೀದಿಸಬೇಕು ಎಂದರೆ ಮೊಬೈಲ್‌ನಲ್ಲೇ ಬುಕ್ ಮಾಡಿ ಮನೆಗೆ ತರಿಸಿಕೊಳ್ಳುವ ಗ್ರಾಹಕರು ಹೆಚ್ಚಾಗಿದ್ದಾರೆ. ಆದ್ರೆ ಇ-ಕಾಮರ್ಸ್ ಮೇಲೆ ನಿಗಾ ಇಡಲು ಮತ್ತು ನಿಯಂತ್ರಣ ರಚಿಸಲು ಕಾನೂನು ರಚನೆಯಾಗುವ ಸಾಧ್ಯತೆ ಇದೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ ಆ್ಯಪ್‌ಗಳ ಮೂಲಕ ನಡೆಸಲಾಗುತ್ತಿರುವ ವಾಣಿಜ್ಯಿಕ ವಹಿವಾಟುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಂಚನೆಗೆ ಕಾರಣವಾಗಿವೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಆನ್‌ಲೈನ್ ಶಾಪಿಂಗ್‌ಗೆ ಬರಲಿದೆ ಕಾನೂನು?

ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವಾಲಯ ಈ ಬಗ್ಗೆ ಕಾನೂನು ಸಿದ್ದಪಡಿಸುತ್ತಿದ್ದು, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯಪ್ ಮೂಲಕ ನಡೆಸಲಾಗುವ ಶಾಪಿಂಗ್‌ನ್ನು ನಿಯಮದ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಈ ಮೂಲಕ ವಂಚನೆ ಪ್ರಕರಣಗಳಿಗೆ ತಡೆಯೊಡ್ಡಲು ಸಹಾಯವಾಗಲಿದೆ.

ಗ್ರಾಹಕರಿಗಾಗಿ ಇರುವ ರಾಷ್ಟ್ರೀಯ ದೂರು ಸ್ವೀಕರಿಸುವ ವ್ಯವಸ್ಥೆಯಲ್ಲಿ ಮತ್ತು ಆಯಾ ವೆಬ್‌ಸೈಟ್‌ಗಳ ಗ್ರಾಹಕರ ಕುಂದು-ಕೊರತೆ ಪರಿಹರಿಸುವ ವಿಭಾಗಕ್ಕೆ ದೂರುಗಳೇ ಹೆಚ್ಚಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಎಕಾನಿಮಿಕ್ಸ್ ಟೈಮ್ಸ್' ವರದಿ ಮಾಡಿದೆ. ಆದರೆ ಇನ್ಮುಂದೆ ನಿಯಮಗಳ ವ್ಯಾಪ್ತಿಗೆ ತರುವ ಮೂಲಕ ವಂಚನೆಯನ್ನು ತಡೆಗಟ್ಟುವ ಪ್ರಯತ್ನಕ್ಕೆ ಕೇಂದ್ರ ಮುಂದಾಗಿದೆ.

ಭಾರತದಲ್ಲಿ ಅತಿ ಹೆಚ್ಚು ವಾಟ್ಸ್ಆ್ಯಪ್ ಬಳಕೆದಾರರಿದ್ದು 400 ಮಿಲಿಯನ್ ಜನರು ಈ ಮೆಸೇಜಿಂಗ್ ಆ್ಯಪ್ ಬಳಸುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+