ಶುಕ್ರವಾರ ಸೆನ್ಸೆಕ್ಸ್ 67,927 ಅಂಕಗಳ ಏರಿಕೆಯಾಗಿದ್ದರೆ, ನಿಫ್ಟಿ 20,223 ಅಂಕಗಳ ಇಂಟ್ರಾಡೇ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ನಿಫ್ಟಿ 89 ಅಂಕಗಳನ್ನು ಗಳಿಸಿ 20,192ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 320 ಅಂಕಗಳನ್ನು ಗಳಿಸಿ 67,839ಕ್ಕೆ ವಹಿವಾಟು ಕೊನೆ ಮಾಡಿದೆ. ಹೆಚ್ಚುವರಿಯಾಗಿ, ಮಿಡ್‌ಕ್ಯಾಪ್ ಸೂಚ್ಯಂಕ 114 ಪಾಯಿಂಟ್‌ಗಳ ಏರಿಕೆ ಕಂಡು 40,830 ಕ್ಕೆ ಕೊನೆಗೊಂಡರೆ, ನಿಫ್ಟಿ ಬ್ಯಾಂಕ್ 231 ಪಾಯಿಂಟ್‌ಗಳನ್ನು ಗಳಿಸಿ 46,232 ಕ್ಕೆ ಸ್ಥಿರವಾಗಿದೆ.
ಚೀನಾ ಸೆಪ್ಟೆಂಬರ್ 20 ರಂದು 1 ವರ್ಷ ಮತ್ತು 5 ವರ್ಷಗಳ ಸಾಲಗಳಿಗೆ ಬಡ್ಡಿದರ ಬಿಡುಗಡೆ ಮಾಡಲಿದೆ. ಜಪಾನ್ ಸೆಪ್ಟೆಂಬರ್ 22 ರಂದು ಹಣದುಬ್ಬರದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಿದೆ. ಇದು ಭಾರತದ ಮಾರುಕಟ್ಟೆ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ನಡುವೆ ಬ್ರೋಕಿಂಗ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ತಾಂತ್ರಿಕ ಮತ್ತು ಉತ್ಪನ್ನಗಳ ತಂಡವು ಈ ವಾರ ನೀವು ಖರೀದಿ ಮಾಡಬಹುದಾದ ಮೂರು ಷೇರುಗಳನ್ನು ಶಿಫಾರಸು ಮಾಡಿದೆ, ಇಲ್ಲಿದೆ ವಿವರ.

ಆಕ್ಸಿಸ್ ಬ್ಯಾಂಕ್ ಸ್ಟಾಕ್
ಆಕ್ಸಿಸ್ ಬ್ಯಾಂಕ್ ಸ್ಟಾಕ್ ಅನ್ನು ಪ್ರಸ್ತುತ ಮಾರುಕಟ್ಟೆ ದರ 1,021.15 ರೂಪಾಯಿಗೆ ಖರೀದಿಸಿ, ಸ್ಟಾಪ್-ಲಾಸ್: 990 ರೂಪಾಯಿ, ಟಾರ್ಗೆಟ್: 1111 ರೂಪಾಯಿ
ಆಕ್ಸಿಸ್ ಬ್ಯಾಂಕ್ ಸಾರ್ವಕಾಲಿಕ ರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ದೈನಂದಿನ ವಹಿವಾಟಿನಲ್ಲಿ, ಸ್ಟಾಕ್ ಕಳೆದ ಆರು ಸೆಷನ್‌ಗಳಿಂದ ಗರಿಷ್ಟ ಮಟ್ಟವನ್ನು ತಲುಪಿದೆ. ಆರ್‌ಎಸ್‌ಐ ಕೂಡಾ ಅತೀ ಅಧಿಕವಾಗಿದ್ದು, ಸ್ಟಾಕ್ ಕಳೆದ ವಾರ ಪ್ರಬಲವಾಗಿದೆ. ಇದು ಬ್ಯಾಂಕಿಂಗ್ ಸೂಚ್ಯಂಕವನ್ನು ಮೀರಿಸುತ್ತಿದೆ. ಮುಂಬರುವ ಸೆಷನ್‌ಗಳಲ್ಲಿಯೂ ಸ್ಟಾಕ್ ಸಾರ್ವಕಾಲಿಕ ಮಟ್ಟಕ್ಕೆ ತಲುಪುವ ನಿರೀಕ್ಷೆಯಿದೆ. 990 ರೂಪಾಯಿಗಿಂತ ಅಧಿಕ ಬೆಲೆ ಇರುವಾಗ ಈ ಸ್ಟಾಕ್ ಖರೀದಿಸಲು ಸಲಹೆ ನೀಡಲಾಗಿದೆ.
ಟೆಕ್ ಮಹೀಂದ್ರ ಸ್ಟಾಕ್
ಟೆಕ್ ಮಹೀಂದ್ರ ಮಾರುಕಟ್ಟೆ ದರ 1,287.85 ರೂಪಾಯಿಗೆ ಖರೀದಿಸಿ, ಸ್ಟಾಪ್-ಲಾಸ್: 1250 ರೂಪಾಯಿ, ಟಾರ್ಗೆಟ್: 1400 ರೂಪಾಯಿ
ಟೆಕ್ ಮಹೀಂದ್ರಾ ಕಳೆದ ವಾರದಲ್ಲಿ ಸಾಕಷ್ಟು ಇಳಿಕೆ ಕಂಡಿದೆ. ದೈನಂದಿನ ವಹಿವಾಟಿನಲ್ಲಿ ಒಂಬತ್ತು ಸೆಷನ್‌ಗಳ ಬಳಿಕ ಸ್ಟಾಕ್ ಬಲಗೊಂಡಿದೆ. ಸ್ಟಾಕ್ ಜಿಗಿತ ಕಂಡು ಅಂತಿಮವಾಗಿ 1270 ರೂಪಾಯಿಗೆ ಶುಕ್ರವಾರ ಕೊನೆಗೊಂಡಿದೆ. ಆರ್‌ಎಸ್‌ಐ ಅಥವಾ ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್ ದೈನಂದಿನ ಪ್ರಮಾಣದಲ್ಲಿ ಹೆಚ್ಚಿದೆ. ಐಟಿ ಸ್ಟಾಕ್‌ಗಳ ಪೈಕಿ ಈ ಸ್ಟಾಕ್ ಖರೀದಿ ಆಸಕ್ತಿದಾಯಕ. 1250 ಸ್ಟಾಪ್ ಲಾಸ್ ಇರಿಸಿಕೊಂಡು, 1400 ರೂಪಾಯಿವರೆಗೆ ಈ ಸ್ಟಾಕ್ ಖರೀದಿಸಲು ಸಲಹೆ ನೀಡಲಾಗಿದೆ.
ಮಾರುತಿ ಸುಜುಕಿ ಸ್ಟಾಕ್
ಮಾರುತಿ ಸುಜುಕಿ ಮಾರುಕಟ್ಟೆ ದರ 10,577.45 ರೂಪಾಯಿಗೆ ಖರೀದಿಸಿ, ಸ್ಟಾಪ್-ಲಾಸ್: 10200 ರೂಪಾಯಿ, ಟಾರ್ಗೆಟ್: 11000 ರೂಪಾಯಿ
ಮಾರುತಿ ಸುಜುಕಿ ಸಾರ್ವಕಾಲಿಕವಾಗಿ ಏರಿಕೆ ಕಂಡು ವಹಿವಾಟು ನಡೆಸುತ್ತಿದೆ. ಕಳೆದ ನಾಲ್ಕು ವಾರಗಳಿಂದ ಗರಿಷ್ಠ ಮಟ್ಟವನ್ನು ತಲುಪಿತ್ತಾ, ಹೊಸ ದಾಖಲೆ ಸೃಷ್ಟಿಸುತ್ತಿದೆ. ಕಳೆದ ವಾರದ ಕೊನೆಯಲ್ಲಿ ಸಾರ್ವಕಾಲಿಕ ವಾರದ ವಹಿವಾಟು ನಡೆಸಿದೆ. ಆದ್ದರಿಂದಾಗಿ ಈ ಸ್ಟಾಕ್ ಅನ್ನು 10200 ಕಡಿಮೆ ನಷ್ಟದೊಂದಿಗೆ ಖರೀದಿ ಮಾಡಲು ಮೋತಿಲಾಲ್ ಓಸ್ವಾಲ್ ಶಿಫಾರಸು ನೀಡಿದೆ.
ಇಲ್ಲಿ ಗಮನಿಸಿ:
ಮೇಲಿನ ಶಿಫಾರಸುಗಳನ್ನು ಮಾರುಕಟ್ಟೆ ವಿಶ್ಲೇಷಕರು ನೀಡಿದ ಸಲಹೆಯಾಗಿದೆ. ಲೇಖಕರು ಅಥವಾ ಗ್ರೇನಿಯಮ್ ಇನ್ಫಾರ್ಮೆಷನ್ ಟೆಕ್ನಾಲಜಿ ನೀಡಿದ ಸಲಹೆ, ಶಿಫಾರಸು ಅಲ್ಲ. ಈ ಲೇಖನದ ಆಧಾರದಲ್ಲಿ ಖರೀದಿ ಮಾಡಿ ಯಾವುದೇ ನಷ್ಟ ಉಂಟಾದರೂ ಲೇಖಕರು ಅಥವಾ ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್ ಜವಾಬ್ದಾರಿಯಾಗಿರುವುದಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ಕನ್ನಡ ಸಲಹೆ ನೀಡುತ್ತದೆ.


Click it and Unblock the Notifications