ಬೆಂಗಳೂರು, ಜನವರಿ 15: ಮೈಸೂರು ಬೆಂಗಳೂರು ಹಾಗೂ ಚೆನ್ನೈ ರೈಲ್ವೆ ಪ್ರಯಾಣಿಕರಿಗೆ ಸಂಕ್ರಾತಿಯಂದು ಶುಭ ಸುದ್ದಿಯೊಂದು ಬಂದಿದೆ. ಮೈಸೂರು ಚೆನ್ನೈ ನಡುವೆ ವಂದೇ ಭಾರತ್ ಬಳಿಕ ಬುಲೆಟ್ ರೈಲು ಶೀಘ್ರವೇ ಸಂಚರಿಸಲಿದೆ.
ದೇಶದ ಮೊದಲ ಬುಲೆಟ್ ರೈಲು ಯೋಜನೆಯು ಗುಜರಾತ್‌ನ ಅಹಮದಾಬಾದ್ ಹಾಗೂ ಮುಂಬೈ ನಡುಗೆ ಈಗಾಗಲೇ ಭೂಮಿ ಸ್ವಾಧೀನ ಕಾರ್ಯ ಮುಗಿಸಿ ವೇಗವಾಗಿ ಪ್ರಗತಿ ಕಾರ್ಯ ನಡೆಯುತ್ತಿದೆ. ಈ ನಡುವೆ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡಿಗೆ ಬುಲೆಟ್ ರೈಲು ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ.

ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಬುಲೆಟ್ ರೈಲಿನ ನಕ್ಷೆ ಸಾಮಾಜಿಕ ಜಾಲತಣದಲ್ಲಿ ಹರಿದಾಡಿದೆ. ಚೆನ್ನೈ ಮತ್ತು ಬೆಂಗಳೂರು ನಗರಗಳ ನಡುವೆ ವೇಗದ ಸಂಪರ್ಕವನ್ನು ಹೊಂದಲು ಎರಡು ಪ್ರಮುಖ ರೈಲ್ವೆ ಯೋಜನೆಗಳು ನಡೆಯುತ್ತಿವೆ. ಇದರಲ್ಲಿ ಚೆನ್ನೈ ಬೆಂಗಳೂರು ಸೆಮಿ ಹೈಸ್ಪೀಡ್ ರೈಲು ಯೋಜನೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಎಫ್‌ಎಲ್ ಹಾಗೂ ಲಿಡಾರ್ ಸವೇ ಕಾರ್ಯ ನಡೆಯಲಿದೆ. ಇದು ಅರಕೋಣಂ, ಕಾಡ್ಪಾಡಿ, ಜೋಲಾರ್‌ಪೇಟೆ ವೈಟ್‌ಫೀಲ್ಡ್ ಮಾರ್ಗದಲ್ಲಿ ಸಂಚರಿಸುತ್ತದೆ. ಈ ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿಲೋ ಮೀಟರ್.
ಮತ್ತೊಂದು ಚೆನ್ನೈ ಮೈಸೂರು ನಡುವಿನ ಬುಲೆಟ್ ರೈಲು ಯೋಜನೆ, ಇದಕ್ಕೆ ಸಮೀಕ್ಷೆ ಕಾರ್ಯ ಆರಂಭವಾಗಬೇಕಿದೆ. ಇದು ಹೈಸ್ಪೀಡ್ ರೈಲು ಯೋಜನೆಯಾಗಿದ್ದು, ಇದು ಅರಕೋಣಂ, ಚಿತ್ತೂರು, ಬಂಗಾರಪೇಟೆ ಹಾಗೂ ಮಂಡ್ಯ ಮಾರ್ಗದಲ್ಲಿ ಸಂಚರಿಸುತ್ತದೆ. ಇದು ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತದೆ.
ಇದಕ್ಕಾಗಿ ಗುಡಿಪಾಲ ಮಂಡಲದಲ್ಲಿ ಭೂಮಿಗೆ 5 ಪಟ್ಟು ಹೆಚ್ಚು ಮಾರುಕಟ್ಟೆ ದರದ ಭರವಸೆ ನೀಡಿ ಭೂಸ್ವಾಧೀನಕ್ಕೆ ಆಕ್ಷೇಪಣೆಗಳನ್ನು ದಾಖಲಿಸಲು ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬುಲೆಟ್ ರೈಲಿನ ಮಾರ್ಗದ ಸಮೀಕ್ಷೆ ಕಾರ್ಯಗಳು ನಡೆದಿದ್ದವು. ಹೈದರಾಬಾದ್ ಮೂಲದ ಕಂಪನಿಯು ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆಗಾಗಿ ಭೂ ಸಮೀಕ್ಷೆಯನ್ನು ಪ್ರಾರಂಭಿಸಿತ್ತು.
ಕಂಪನಿಯು ಕೋಲಾರ ಮತ್ತು ಚೆನ್ನೈ ನಡುವಿನ ಭೂ ಸಮೀಕ್ಷೆಯನ್ನು ಪೂರ್ಣಗೊಳಿಸಿತ್ತು. ಇದೇ ಕಂಪನಿಯಿಂದ ದಕ್ಷಿಣದ ಎರಡು ರಾಜ್ಯಗಳ ರಾಜಧಾನಿಗಳ ನಡುವೆ ವೈಮಾನಿಕ ಸಮೀಕ್ಷೆ ಕೂಡ ಆರಂಭವಾಗಲಿದೆ. ಸಮೀಕ್ಷೆಗಳು ಪೂರ್ಣಗೊಂಡ ನಂತರ ಬುಲೆಟಿನ್ ರೈಲು ಯೋಜನೆಗಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಕಂಪನಿಯು ಸಿದ್ಧಪಡಿಸುತ್ತದೆ.
ಮೈಸೂರು-ಬೆಂಗಳೂರು-ಚೆನ್ನೈ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ವಿವಿಧ ಹೈಸ್ಪೀಡ್ ಕಾರಿಡಾರ್‌ಗಳಿಗಾಗಿ ರೈಡರ್‌ಶಿಪ್ ಅಧ್ಯಯನವನ್ನು ಪ್ರಾರಂಭಿಸಿದ ನಂತರ ಮೊದಲ ಅನುಮೋದನೆಯನ್ನು ಪಡೆದಿತ್ತು.
ಪ್ರಸ್ತುತ, ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವಿನ ಅತ್ಯಂತ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್, ಇದು 435 ಕಿಮೀ ದೂರವನ್ನು ಕ್ರಮಿಸಲು ಸುಮಾರು 4:30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಪ್ರಕಾರ ಬುಲೆಟ್ ರೈಲು 435 ಕಿಮೀ ದೂರವನ್ನು ಕ್ರಮಿಸಲು 1:10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಡಿಪಿಆರ್ ವರದಿಯು ಎರಡೂ ನಗರಗಳ ನಡುವಿನ ಏಕೀಕೃತ ರೈಡರ್‌ಶಿಪ್‌ನ ಡೇಟಾವನ್ನು ಒಳಗೊಂಡಿರುತ್ತದೆ. ಇದು ಬೆಂಗಳೂರು-ಚೆನ್ನೈ ಹೆದ್ದಾರಿಗಳ ನಡುವಿನ ಟೋಲ್ ಪ್ಲಾಜಾಗಳ ಟ್ರಾಫಿಕ್ ಡೇಟಾ ಮತ್ತು ಅದೇ ಅವಧಿಯಲ್ಲಿ ರೈಲು ಮತ್ತು ವಿಮಾನ ಪ್ರಯಾಣದ ಸವಾರರ ಡೇಟಾವನ್ನು ಒಳಗೊಂಡಿರುತ್ತದೆ.
ಬೆಂಗಳೂರು-ಮೈಸೂರು-ಚೆನ್ನೈ ಮಾರ್ಗವು ಹೆಚ್ಚಿನ ಜನಸಾಂದ್ರತೆಯ ಪ್ರದೇಶವಾಗಿದ್ದು, ಈ ನಗರ ನಡುವೆ ಅನೇಕ ಕಂಪನಿಗಳಿವೆ. ಯೋಜನೆಯು ಪ್ರಯಾಣದ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.


Click it and Unblock the Notifications