For Quick Alerts
ALLOW NOTIFICATIONS  
For Daily Alerts

ಗಮನಿಸಿ: ಈ ಮೂರು ಬ್ಯಾಂಕುಗಳ ಚೆಕ್‌ಬುಕ್‌ ಅ.1 ರಿಂದ ಅಮಾನ್ಯ, ಕೂಡಲೇ ಬದಲಾಯಿಸಿಕೊಳ್ಳಿ

|

2021 ರ ಅಕ್ಟೋಬರ್‌ 1 ರ ಒಳಗೆ ಮೂರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವವರು ತಮ್ಮ ಚೆಕ್‌ಬುಕ್‌ ಅನ್ನು ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಬೇಕು ಅಥವಾ ಅಪ್‌ಡೇಟ್‌ ಮಾಡಬೇಕು. ಏಕೆಂದರೆ ಆ ಬಳಿಕ ಈ ಎರಡು ಬ್ಯಾಂಕುಗಳ ಹಳೆಯ ಚೆಕ್‌ಬುಕ್‌ ಅನಧಿಕೃತವಾಗಲಿದೆ ಅಥವಾ ಅಮಾನ್ಯವಾಗಲಿದೆ.

 

ಅಲಹಾಬಾದ್‌ ಬ್ಯಾಂಕು, ಒರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್ (ಒಬಿಸಿ) ಹಾಗೂ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ತಮ್ಮ ಚೆಕ್‌ಬುಕ್‌ ಅನ್ನು ಬದಲಾವಣೆ ಮಾಡಿಕೊಂಡಿದ್ದು ಈ ಮೂರು ಬ್ಯಾಂಕುಗಳ ಹಳೆಯ ಚೆಕ್‌ಬುಕ್‌ಗಳು 2021 ರ ಅಕ್ಟೋಬರ್‌ 1 ರಿಂದ ಕಾರ್ಯನಿರ್ವಹಿಸಲ್ಲ. ಈ ಮೂರು ಬ್ಯಾಂಕುಗಳ ಮಾಲೀಕತ್ವ ಬದಲಾವಣೆಯಾಗಿದೆ.

 

LIC ಜೀವನ್ ಲಕ್ಷ್ಯ ಯೋಜನೆ: ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಕೊಡುಗೆLIC ಜೀವನ್ ಲಕ್ಷ್ಯ ಯೋಜನೆ: ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಕೊಡುಗೆ

ಎಪ್ರಿಲ್‌ 1, 2020 ಅಲಹಾಬಾದ್‌ ಹಾಗೂ ಇಂಡಿಯಾನ್‌ ಬ್ಯಾಂಕ್‌ ವಿಲೀನವಾಗಿದೆ. ಎಪ್ರಿಲ್‌ 1, 2019 ರಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಜೊತೆ ಒರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್ (ಒಬಿಸಿ) ಹಾಗೂ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿಲೀನವಾಗಿದೆ.

ಗಮನಿಸಿ: ಈ ಮೂರು ಬ್ಯಾಂಕುಗಳ ಚೆಕ್‌ಬುಕ್‌ ಅ.1 ರಿಂದ ಅಮಾನ್ಯ

ಇನ್ನು ಈ ಬಗ್ಗೆ 2021 ರ ಸೆಪ್ಟೆಂಬರ್‍ 14 ರಂದು ಟ್ವೀಟ್‌ ಮಾಡಿರುವ ಇಂಡಿಯನ್‌ ಬ್ಯಾಂಕ್‌ ಈ ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ನೀಡಿದೆ. "ಹೊಸ ಚೆಕ್‌ಬುಕ್‌ ಅನ್ನು ಪಡೆಯುವ ಮೂಲಕ ಅಲಹಾಬಾದ್‌ ಬ್ಯಾಂಕಿನ ಗ್ರಾಹಕರು ಇಂಡಿಯನ್‌ ಬ್ಯಾಂಕಿನ ಸೇವೆಯನ್ನು ಪಡೆಯಬಹುದು. 2021 ರ ಅಕ್ಟೋಬರ್‌ 1 ರಿಂದ ಅಲಹಾಬಾದ್‌ ಬ್ಯಾಂಕಿನ ಹಳೆಯ ಚೆಕ್‌ಬುಕ್‌ ಅನ್ನು ಸ್ವೀಕರಿಸಲಾಗುವುದಿಲ್ಲ," ಎಂದು ತಿಳಿಸಿದೆ.

ಹಾಗೆಯೇ ಬಳಿಕ ಬ್ಯಾಂಕು ಇದು ಗ್ರಾಹಕರಿಗೆ ಅತೀ ಮುಖ್ಯ ಘೋಷನೆ ಎಂದು ಹೇಳಿದೆ. "2021 ರ ಅಕ್ಟೋಬರ್‌ 1 ರಿಂದ ಅಲಹಾಬಾದ್‌ ಬ್ಯಾಂಕಿನ ಹಳೆಯ ಚೆಕ್‌ಬುಕ್‌ ಅನ್ನು ಸ್ವೀಕರಿಸಲಾಗುವುದಿಲ್ಲ. ಯಾವುದೇ ತೊಂದರೆ ರಹಿತ ಬ್ಯಾಂಕು ಸೇವೆಗಾಗಿ ಇಂಡಿಯನ್‌ ಬ್ಯಾಂಕಿನ್‌ ಚೆಕ್‌ ಅನ್ನು ಪಡೆಯಬೇಕು. ಅಲಹಾಬಾದ್‌ ಬ್ಯಾಂಕಿನ ಗ್ರಾಹಕರಿಗೆ ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಅಥವಾ ಬ್ಯಾಂಕ್‌ ಬ್ರಾಂಚ್‌ನ ಮೂಲಕ ಇಂಡಿಯನ್‌ ಬ್ಯಾಂಕಿನ ಚೆಕ್‌ಬುಕ್‌ ಅನ್ನು ಪಡೆಯಬಹುದು," ಎಂದು ಹೇಳಿದೆ.

ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

ಇನ್ನೊಂದೆಡೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಸೆಪ್ಟೆಂಬರ್‌ 8, 2021 ರಂದು ಅಗತ್ಯ ಮಾಹಿತಿಯನ್ನು ಗ್ರಾಹಕರಿಗೆ ನೀಡಿದೆ. "ಒರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್ (ಒಬಿಸಿ) ಹಾಗೂ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಳೆಯ ಚೆಕ್‌ಬುಕ್‌ 2021 ರ ಅಕ್ಟೋಬರ್‌ 1 ರಿಂದ ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ಒರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್ (ಒಬಿಸಿ) ಹಾಗೂ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಳೆಯ ಚೆಕ್‌ಬುಕ್‌ ಅನ್ನು ನೀವು ಪಂಜಾಬ್‌ ಬ್ಯಾಂಕಿನ ಅಪ್‌ಡೇಟ್‌ ಚೆಕ್‌ಬುಕ್‌ನೊಂದಿಗೆ ಬಲದಾಯಿಸಿಕೊಳ್ಳಿ. ನಿಮ್ಮ ಬ್ಯಾಂಕಿನಿಂದ ಹೊಸ ಚೆಕ್‌ಬುಕ್‌ ಅನ್ನು ಪಡೆದುಕೊಳ್ಳಿ. ಹಾಗೆಯೇ ಹೊಸ ಚೆಕ್‌ಬುಕ್‌ಗಾಗಿ ಎಟಿಎಂ, ಐಬಿಎಸ್‌, ಪಿಎನ್‌ಬಿ ಒನ್‌ ಮೂಲಕ ಅರ್ಜಿ ಸಲ್ಲಿಸಿ," ಎಂದಿದೆ.

ಇನ್ನು ಬ್ಯಾಂಕ್‌, "ಎಲ್ಲಾ ಗ್ರಾಹಕರು ಪಿಎನ್‌ಬಿ ಐಎಫ್‌ಎಸ್‌ಸಿ ಹಾಗೂ ಎಮ್‌ಐಸಿಆರ್‌ ಅನ್ನು ಅಪ್‌ಡೇಟ್‌ ಮಾಡಿದ ಚೆಕ್‌ಬುಕ್‌ ಅನ್ನು ಬಳಸುವಂತೆ ಗ್ರಾಹಕರಿಗೆ ಒತ್ತಾಯ ಮಾಡಲಾಗುತ್ತದೆ. ಯಾವುದೇ ಸೇವೆಯನ್ನು ತಪ್ಪಿಸಲು ನೀವು ಈ ಅಪ್‌ಡೇಟ್‌ ಆದ ಚೆಕ್‌ಬುಕ್‌ ಅನ್ನು ಪಡೆಯಿರಿ. ಬ್ಯಾಂಕಿನ ಸೇವೆಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳು, ಅನುಮಾನವಿದ್ದರೆ, ಸಹಾಯವಾಣಿ 1800-180-2222 ಗೆ ಕರೆ ಮಾಡಿ," ಎಂದು ಬ್ಯಾಂಕ್‌ ತಿಳಿಸಿದೆ.

ಇನ್ನು ಕೇಂದ್ರ ಸರ್ಕಾರದ ಬೃಹತ್ ಏಕೀಕರಣ ಯೋಜನೆಯಿಂದಾಗಿ ಇತರ ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳು ಕೂಡಾ ವಿಲೀನವಾಗಿದೆ. ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನ ಜೊತೆ ವಿಲೀನ ಮಾಡಲಾಗಿದೆ. ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ವಿಲೀನ ಮಾಡಲಾಗಿದೆ.

English summary

Cheque Book of These 3 Banks To Be Invalid From October 1: Here’s What To Do

Cheque Book of Allahabad Bank, Oriental Bank of Commerce (OBC), and United Bank of India To Be Invalid From October 1: Here’s What To Do. Read on
Story first published: Friday, September 24, 2021, 19:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X