For Quick Alerts
ALLOW NOTIFICATIONS  
For Daily Alerts

ಚೆಕ್ ಬೌನ್ಸ್ ಗೆ ಇನ್ನು ಜೈಲು ಶಿಕ್ಷೆ ಇರುವುದಿಲ್ಲವೆ !

By ಅನಿಲ್ ಆಚಾರ್
|

2020ರ ಬಜೆಟ್ ಮಂಡಿಸುವ ವೇಳೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವು ಪ್ರಸ್ತಾವ ಮುಂದಿರಿಸಿದ್ದರು. ಕಾನೂನು ತಿದ್ದುಪಡಿ ತಂದು, ಕೆಲವು ಆರ್ಥಿಕ ಅಪರಾಧವನ್ನು ಕ್ರಿಮಿನಲ್ ವರ್ಗೀಕರಣದಿಂದ ತೆಗೆದು, ಅವುಗಳನ್ನು ಸಿವಿಲ್ ವ್ಯಾಜ್ಯಗಳೆಂದು ಪರಿಗಣಿಸಲು ತೀರ್ಮಾನಿಸಲಾಗಿತ್ತು. ಇದೇ ಮಾತುಗಳನ್ನು ಆತ್ಮನಿರ್ಭರ್ ಪ್ಯಾಕೇಜ್ ಘೋಷಣೆ ಮಾಡುವ ವೇಳೆಯೂ ಅವರು ಪುನರುಚ್ಚರಿಸಿದ್ದರು.

ಇಂಥ ಅಪರಾಧಗಳು ಆರ್ಥಿಕ ಕ್ಷೇತ್ರದಲ್ಲಿ ಕಂಡುಬರುತ್ತವೆ. ಅದರ ಅಡಿಯಲ್ಲಿ ಚೆಕ್ ಬೌನ್ಸ್ ಇತ್ಯಾದಿಗಳು ಕ್ರಿಮಿನಲ್ ವ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಇನ್ನು ಮುಂದೆ ಸಿವಿಲ್ ವ್ಯಾಜ್ಯಗಳ ಅಡಿಯಲ್ಲಿ ತರಬಹುದು. ಇದರಿಂದ ವ್ಯಾಪಾರ- ವ್ಯವಹಾರ ಸಲೀಸಾಗಿ ಮಾಡಬಹುದು. ಕೋರ್ಟ್ ಕೆಲಸಗಳು ಕೂಡ ಕಡಿಮೆ ಆಗುತ್ತದೆ.

'ಹರತಾಳ ಮಾಡುವುದಿದ್ದರೆ ಹದಿನಾಲ್ಕು ದಿನಕ್ಕೆ ಮುಂಚೆ ನೋಟಿಸ್ ನೀಡಬೇಕು''ಹರತಾಳ ಮಾಡುವುದಿದ್ದರೆ ಹದಿನಾಲ್ಕು ದಿನಕ್ಕೆ ಮುಂಚೆ ನೋಟಿಸ್ ನೀಡಬೇಕು'

ಇನ್ನು ಇಂಥ ತಪ್ಪುಗಳಿಗೆ ಜುಲ್ಮಾನೆ ವಿಧಿಸಿ ಬಿಡಬಹುದು. ಯಾವುದೇ ಜೈಲು ಅಥವಾ ಮತ್ಯಾವುದೇ ಶಿಕ್ಷೆ ವಿಧಿಸುವುದಿಲ್ಲ. 19 ಕಾಯ್ದೆಗಳಲ್ಲಿನ 39 ಸೆಕ್ಷನ್ ಗಳ ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣನೆಗೆ ತೆಗೆದುಕೊಳ್ಳದಿರುವ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳಲಾಗಿದೆ.

ಚೆಕ್ ಬೌನ್ಸ್ ಗೆ ಇನ್ನು ಜೈಲು ಶಿಕ್ಷೆ ಇರುವುದಿಲ್ಲವೆ !

ಸದ್ಯಕ್ಕೆ ಚೆಕ್ ಬೌನ್ಸ್ ಆದಲ್ಲಿ ಎರಡು ವರ್ಷದ ತನಕ ಜೈಲು ಶಿಕ್ಷೆ ಅಥವಾ ಚೆಕ್ ಮೊತ್ತದ ಎರಡರಷ್ಟು ಜುಲ್ಮಾನೆ ವಿಧಿಸಬಹುದು. ಅಥವಾ ಎರಡೂ ಆಗಬಹುದು. ಇದು ನೆಗೋಷಿಯಬಲ್ ಇನ್ ಸ್ಟ್ರುಮೆಂಟ್ ಕಾಯ್ದೆಯಲ್ಲಿ ಇದೆ. ಇದೇ ರೀತಿ ಸಾರ್ವಜನಿಕರಿಂದ ಠೇವಣಿ ಸಂಗ್ರಹದಲ್ಲಿ ನಿಯಮ ಉಲ್ಲಂಘಿಸಿದರೂ ಕೆಲವು ಕಾಯ್ದೆಗಳು ಅನ್ವಯ ಆಗುತ್ತವೆ. ಅವುಗಳನ್ನು ಸಹ ಕ್ರಿಮಿನಲ್ ವ್ಯಾಜ್ಯ ಎಂದು ಪರಿಗಣಿಸದಿರಲು ನಿರ್ಧರಿಸಲಾಗಿದೆ.

English summary

Cheque Bouncing, Loan Repayment Delays Could Soon Be Decriminalised

Such as Cheque bouncing and other financial offence may now be put into civil offences category.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X