For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸಾವಿರಾರು ಕೋಟಿ ಹೂಡಿದ ಚೈನೀಸ್ ಕಂಪೆನಿಗಳಿವು

|

ಭಾರತದಲ್ಲಿ ಚೀನಾ ವಿರುದ್ಧ ಸದ್ಯಕ್ಕೆ ತಣ್ಣಗೆ ಆಗದಷ್ಟು ಸಿಟ್ಟಿದೆ. ಆದರೆ ನಿಮಗೆ ಗೊತ್ತಿರಲಿ, ಭಾರತದ ಆರ್ಥಿಕತೆಯಲ್ಲಿ ಚೀನಾ ದೇಶ ತುಂಬ ಆಳವಾಗಿ ಬೇರೂರಿದೆ. ಭಾರತದ ಹಲವು ಸ್ಟಾರ್ಟ್ ಅಪ್ ಕಂಪೆನಿಗಳಲ್ಲಿ ಚೀನಾದ ಕಂಪೆನಿಗಳು ಭರ್ಜರಿ ಹೂಡಿಕೆಯನ್ನೇ ಮಾಡಿವೆ. ಇದರಿಂದ ಹೊಸ ಉದ್ಯಮಿಗಳನ್ನು ಮಾತ್ರ ಸೃಷ್ಟಿಸಿಲ್ಲ. ಜತೆಗೆ ತಂತ್ರಜ್ಞಾನ ಒದಗಿಸಿವೆ ಹಾಗೂ ಉದ್ಯೋಗ ಸೃಷ್ಟಿಯಾಗಲು ಕಾರಣವಾಗಿವೆ.

ಈಗ ಗಡಿ ಕ್ಯಾತೆ ಹಿನ್ನೆಲೆಯಲ್ಲಿ ವಿವಿಧ ಮಗ್ಗಲುಗಳನ್ನು ನೋಡಲಾಗುತ್ತಿದೆ. ಹಾಗಿದ್ದರೆ ಭಾರತದಲ್ಲಿ ದೊಡ್ಡ ಮಟ್ಟದ, ಮೊತ್ತದ ಹೂಡಿಕೆ ಮಾಡಿರುವ ಚೀನಾದ ಕಂಪೆನಿಗಳು ಯಾವುವು ಹಾಗೂ ಅವುಗಳು ಯಾವುದರಲ್ಲಿ ಹೂಡಿಕೆ ಮಾಡಿವೆ ಎಂಬುದರ ಆಸಕ್ತಿಕರ ಸಂಗತಿಗಳು ಇಲ್ಲಿವೆ.

ಆಂಟ್ ಫೈನಾನ್ಷಿಯಲ್/ಆಲಿಬಾಬ

ಆಂಟ್ ಫೈನಾನ್ಷಿಯಲ್/ಆಲಿಬಾಬ

ಭಾರತದಲ್ಲಿ ಹೂಡಿಕೆ ಮಾಡಿರುವ ಅತ್ಯಂತ ಮುಖ್ಯ ಕಂಪೆನಿ ಆಂಟ್ ಫೈನಾನ್ಷಿಯಲ್. ಜಾಕ್ ಮಾ ಅವರಿಗೆ ಸೇರಿದ ಆಲಿಬಾಬ ಗ್ರೂಪ್ ಗೆ ಸೇರಿದ ಅಂಗ ಸಂಸ್ಥೆ ಇದು. ಪೇಟಿಎಂ ಹಾಗೂ ಸ್ನ್ಯಾಪ್ ಡೀಲ್ ನಲ್ಲಿ ಮಿಲಿಯನ್ ಗಟ್ಟಲೆ ಡಾಲರ್ ಹೂಡಿಕೆ ಮಾಡಿದೆ. ಭಾರತದ ಏಳು ಕಂಪೆನಿಗಳಲ್ಲಿ 270 ಕೋಟಿ ಅಮೆರಿಕನ್ ಡಾಲರ್ ಹೂಡಿದೆ. ಭಾರತದ ರುಪಾಯಿಗಳಲ್ಲಿ 20,500 ಕೋಟಿಗೂ ಹೆಚ್ಚು ಮೊತ್ತವಾಗುತ್ತದೆ. ಪೇಟಿಎಂ ಒಳಗೆ ಫೇಟಿಎಂ ಮಾಲ್ ನಲ್ಲಿ ಹಾಗೂ ಇ ಕಾಮರ್ಸ್ ನಲ್ಲಿ ಹಣ ಹೂಡಿದೆ. ನವೆಂಬರ್ 2019ರಲ್ಲಿ ಆಂಟ್ ಫೈನಾನ್ಷಿಯಲ್ ಹೇಳಿದ ಪ್ರಕಾರ, ಭಾರತ ಮತ್ತು ಆಗ್ನೇಯ ಏಷ್ಯಾದ ಸ್ಟಾರ್ಟ್ ಅಪ್ ಗಳಲ್ಲಿ ಹಣ ಹೂಡಲು ನೂರಾರು ಕೋಟಿ ಡಾಲರ್ ಸಂಗ್ರಹಿಸುತ್ತಿದೆ.

ಟೆನ್ಸೆಂಟ್

ಟೆನ್ಸೆಂಟ್

ಟೆನ್ಸೆಂಟ್ ಎಂಬುದು ಮತ್ತೊಂದು ಪ್ರಮುಖ ಕಂಪೆನಿ. ಫ್ಲಿಪ್ ಕಾರ್ಟ್, ಸ್ವಿಗ್ಗಿ ಹಾಗೂ ಓಲಾದಲ್ಲಿ ಹೂಡಿಕೆ ಮಾಡಿದೆ. ಚೀನಾದಲ್ಲಿ ಟೆನ್ಸೆಂಟ್ ಕಂಪೆನಿಯು ಇನ್ ಸ್ಟಂಟ್ ಮೆಸೇಜಿಂಗ್ ಪ್ಲಾಟ್ ಫಾರ್ಮ್ WeChat ನಡೆಸುತ್ತದೆ. ಅದು ಅಲ್ಲಿ ವಾಟ್ಸಾಪ್ ಇದ್ದಂತೆ. ಜತೆಗೆ ಗೇಮಿಂಗ್ ಅಪ್ಲಿಕೇಷನ್ ಗಳು ಮತ್ತು ಇ ಕಾಮರ್ಸ್ ಉದ್ಯಮ ನಡೆಸುತ್ತದೆ. ಭಾರತದ ಹದಿನೈದು ಸ್ಟಾರ್ಟ್ ಅಪ್ ಗಳಲ್ಲಿ 200 ಕೋಟಿ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಿದೆ. ಭಾರತದ ರುಪಾಯಿಗಳಲ್ಲಿ 15 ಸಾವಿರ ಕೋಟಿಗೂ ಹೆಚ್ಚು. ಖಾತಾಬುಕ್, ಮೈಗೇಟ್, ನಿಯೋ ಸಲ್ಯೂಷನ್, ಪಾಲಿಸಿಬಜಾರ್, ಉಡಾನ್ ನಂಥವಕ್ಕೆ ಇದರದೇ ಬೆಂಬಲ. ವರದಿಗಳ ಪ್ರಕಾರ, ಟೆನ್ಸೆಂಟ್ ಹಲವು ಹೊಸ ಸ್ಟಾರ್ಟ್ ಅಪ್ ಗಳ ಜತೆಗೆ ಮಾತುಕತೆ ನಡೆಸುತ್ತಿದ್ದು, 1ರಿಂದ 1.5 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಇರಾದೆಯಲ್ಲಿದೆ.

ಶುನ್ವೆ ಕ್ಯಾಪಿಟಲ್

ಶುನ್ವೆ ಕ್ಯಾಪಿಟಲ್

ಶುನ್ವೆ ಕ್ಯಾಪಿಟಲ್ ಹದಿನೇಳು ಕಂಪೆನಿಗಳಲ್ಲಿ 12.9 ಕೋಟಿ ಅಮೆರಿಕನ್ ಡಾಲರ್ ನಷ್ಟು ಭಾರತದಲ್ಲಿ ಹೂಡಿಕೆ ಮಾಡಿದೆ. ಅದರಲ್ಲಿ ಝೊಮಾಟೋ, ಮೀಶೋ, ಶೇರ್ ಚಾಟ್ ಹಾಗೂ ಕ್ರೇಜಿಬೀ ಮತ್ತು ಲೋನ್ ಟ್ಯಾಪ್ ಒಳಗೊಂಡಿವೆ.

ಫೋಸನ್ ಗ್ರೂಪ್

ಫೋಸನ್ ಗ್ರೂಪ್

ಫೋಸನ್ ಆರ್ ಜೆಡ್ ಕ್ಯಾಪಿಟಲ್ ಭಾರತದಲ್ಲಿ ಅತ್ಯಂತ ವೇಗವಾಗಿ ಹೂಡಿಕೆ ಮಾಡುತ್ತಿದೆ. ಈ ಕಂಪೆನಿ ಆರಂಭವಾದದ್ದು 2013ರಲ್ಲಿ. ಭಾರತದ 12 ಸ್ಟಾರ್ಟ್ ಅಪ್ ಗಳಲ್ಲಿ 8.5 ಕೋಟಿ ಅಮೆರಿಕನ್ ಡಾಲರ್ ಹೂಡಿದೆ. ಐಕ್ಸಿಗೋ, ಡೆಲ್ಹಿವೆರಿ, ಲೆಟ್ಸ್ ಟ್ರಾನ್ಸ್ ಪೋರ್ಟ್, ಮೈಲೋ ಮತ್ತಿತರ ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ. ಈ ಕಂಪೆನಿಯು ಟೆನ್ಸೆಂಟ್ ಹಾಗೂ ಆಲಿಬಾಬದಂಥ ಕಂಪೆನಿಗಳ ಜತೆ ಸ್ಪರ್ಧೆಗೆ ಇಳಿಯಲ್ಲ.

ಶಿಯೋಮಿ

ಶಿಯೋಮಿ

ಹೆಸರಾಂತ ಸ್ಮಾರ್ಟ್ ಫೋನ್ ತಯಾರಕ ಕಂಪೆನಿ ಶಿಯೋಮಿ ಭಾರತದ ಸ್ಟಾರ್ಟ್ ಅಪ್ ಗಳಲ್ಲಿ ಈಗಾಗಲೇ ಹೂಡಿಕೆ ಮಾಡಿದೆ. ಶೇರ್ ಚಾಟ್, ಕ್ರೇಜಿಬೀ ಮತ್ತು ಇತರ ಕೆಲವು ಸಾಲ ನೀಡುವ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದೆ. 2018ನೇ ಇಸವಿಯಲ್ಲಿ ಈ ಕಂಪೆನಿಯ ಹಿರಿಯ ಅಧಿಕಾರಿ ಮನು ಕುಮಾರ್ ಜೈನ್, ಭಾರತದ ನೂರು ಸ್ಟಾರ್ಟ್ ಅಪ್ ಗಳಲ್ಲಿ 6000 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಹೇಳಿದ್ದರು. ಈ ವರೆಗೆ ಎಂಟು ಕಂಪೆನಿಗಳಲ್ಲಿ 6.1 ಕೋಟಿ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಿದೆ.

ಹಿಲ್ ಹೌಸ್ ಕ್ಯಾಪಿಟಲ್

ಹಿಲ್ ಹೌಸ್ ಕ್ಯಾಪಿಟಲ್

ಬೈದು, ಟೆನ್ಸೆಂಟ್, ಗ್ರಾಬ್ ಏರ್ ಬಿಎನ್ ಬಿ ಮತ್ತಿತರ ಕಂಪೆನಿಗಳಲ್ಲಿ ಹಿಲ್ ಹೌಸ್ ಕ್ಯಾಪಿಟಲ್ ಹೂಡಿಕೆ ಮಾಡಿದೆ. ಭಾರತದಲ್ಲಿ ಈಗಾಗಲೇ 16.5 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. ಸ್ವಿಗ್ಗಿ, ಉಡಾನ್ ಮತ್ತು ಕ್ರೆಡ್ ಸೇರಿದಂತೆ ಏಳು ಕಂಪೆನಿಗಳಲ್ಲಿ ಷೇರನ್ನು ಹೊಂದಿದೆ. ಇದು 2005ರಲ್ಲಿ ಆರಂಭವಾಗಿದ್ದು, ತುಂಬ ಸಕ್ರಿಯವಾಗಿ ಮೊಬಿಲಿಟಿ ಸೆಗ್ಮೆಂಟ್ ನಲ್ಲಿದೆ. 2014ರಲ್ಲಿ ಕಾರ್ ದೇಖೋದಲ್ಲಿ 5 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ.

ಟಿಆರ್ ಕ್ಯಾಪಿಟಲ್

ಟಿಆರ್ ಕ್ಯಾಪಿಟಲ್

ಟಿಆರ್ ಕ್ಯಾಪಿಟಲ್ ಭಾರತದಲ್ಲಿ ಸಕ್ರಿಯ ಸೆಕೆಂಡರಿ ಹೂಡಿಕೆದಾರ ಕಂಪೆನಿ. 2018ರಲ್ಲಿ ಮುಂಬೈನಲ್ಲಿ ಕಚೇರಿ ಕೂಡ ಆರಂಭಿಸಿದೆ. ಫ್ಲಿಪ್ ಕಾರ್ಟ್, ಲೆನ್ಸ್ ಕಾರ್ಟ್, ಅರ್ಬನ್ ಲ್ಯಾಡರ್ ಮತ್ತು ಬಿಗ್ ಬ್ಯಾಸ್ಕೆಟ್ ಸೇರಿದಂತೆ ಒಂಬತ್ತು ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ. ಭಾರತದಲ್ಲಿ 10.1 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ.

English summary

Chinese Companies Invested Crores Of Rupees In India

Including Alibaba, Tencent many Chinese companies invested crores of rupees in India. Here is the list Indian companies invested by Chinese investors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X