For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾ ಸಿಬ್ಬಂದಿಗೆ ಸಂಬಳ ಇಲ್ಲದೆ ಐದು ವರ್ಷದ ತನಕ ಕಡ್ಡಾಯ ರಜಾ

|

ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಲು ಏರ್ ಇಂಡಿಯಾ ಆಡಳಿತ ಮಂಡಳಿ ಮುಂದಾಗಿದೆ. ಸರಿಯಾಗಿ ಕಾರ್ಯ ನಿರ್ವಹಿಸದ ಸಿಬ್ಬಂದಿಯನ್ನು ಐದು ವರ್ಷದ ತನಕ ಕಡ್ಡಾಯ ರಜಾ ಮೇಲೆ ಕಳುಹಿಸಲು ನಿರ್ಧರಿಸಲಾಗಿದೆ. ಅವರ ಹೊಂದಾಣಿಕೆ, ಕ್ಷಮತೆ, ಸಾಮರ್ಥ್ಯ, ಪ್ರದರ್ಶನ ಗುಣಮಟ್ಟ, ಆರೋಗ್ಯ ಸ್ಥಿತಿ, ಈ ಹಿಂದೆ ಕರ್ತವ್ಯಕ್ಕೆ ಅವರು ಲಭ್ಯ ಇರುತ್ತಿದ್ದ ಬಗೆಯನ್ನು ಗಮನಿಸಿ ಸಿಬ್ಬಂದಿಯನ್ನು ಎಷ್ಟು ಕಾಲ ರಜಾ ಮೇಲೆ ಕಳುಹಿಸಬೇಕು ಎಂದು ವರ್ಗೀಕರಿಸಲಾಗಿದೆ.

ಆರು ತಿಂಗಳಿಂದ ಎರಡು ವರ್ಷದ ರಜಾವನ್ನು ಐದು ವರ್ಷದ ತನಕ ವಿಸ್ತರಣೆ ಮಾಡಬಹುದು ಎಂದು ಅಧಿಕೃತ ಆದೇಶದ ಮೂಲಕ ತಿಳಿಸಲಾಗಿದೆ. "ಸಿಬ್ಬಂದಿಯ ಹೆಸರನ್ನು ಆಯಾ ಇಲಾಖೆಯವರು ಕಳುಹಿಸಿದ ಮೇಲೆ ಅದನ್ನು ಜನರಲ್ ಮ್ಯಾನೇಜರ್ (ಸಿಬ್ಬಂದಿ) ಬಳಿ ಕಳುಹಿಸಿ, ಅಗತ್ಯ ಅನುಮತಿಯನ್ನು ಪಡೆಯಲಾಗುವುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏರ್ ಇಂಡಿಯಾ ಖರೀದಿಗೆ ಈ ತನಕ ಏಕೈಕ ಬಿಡ್ಡರ್ ಟಾಟಾ ಗ್ರೂಪ್ಏರ್ ಇಂಡಿಯಾ ಖರೀದಿಗೆ ಈ ತನಕ ಏಕೈಕ ಬಿಡ್ಡರ್ ಟಾಟಾ ಗ್ರೂಪ್

ಕೇಂದ್ರ ಸರ್ಕಾರವು ಏರ್ ಇಂಡಿಯಾದ ಮಾರಾಟಕ್ಕೆ ಮುಂದಾಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಆ ಪ್ರಕ್ರಿಯೆ ತಡವಾಗಿದೆ. ಆ ಹಿನ್ನೆಲೆಯಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕಡಿತ ಮಾಡಲು ಆಡಳಿತ ಮಂಡಳಿ ಮುಂದಾಗಿದೆ ಎಂಬ ಮಾತು ಸಹ ಇದೆ.

ಏರ್ ಇಂಡಿಯಾ ಸಿಬ್ಬಂದಿಗೆ ಸಂಬಳ ಇಲ್ಲದೆ ಐದು ವರ್ಷದ ತನಕ ಕಡ್ಡಾಯ ರಜಾ

ಆಯಾ ಇಲಾಖೆ ಮುಖ್ಯಸ್ಥರು ಹಾಗೂ ಪ್ರಾದೇಶಿಕ ನಿರ್ದೇಶಕರು ಈಗ ಸಿಬ್ಬಂದಿಯ ಅಗತ್ಯವನ್ನು ಅಳೆದು- ತೂಗುತ್ತಿದ್ದಾರೆ. ಕೆಲವು ಮುಖ್ಯ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡುಕೊಂಡು ಸಂಬಳರಹಿತ ಕಡ್ಡಾಯ ರಜಾ ಮೇಲೆ ಕಳುಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary

Compulsory Without Pay Leave For Air India Staff Up To 5 Years

Air India board decided to send staff compulsory without pay leave for up to 5 years to reduce cost.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X