ಅಮೆರಿಕಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿ ಕಾಗ್ನಿಜಂಟ್ ತಮ್ಮ ಉದ್ಯೋಗಿಗಳಿಗೆ ಗರಿಷ್ಟ ಬೆಂಚ್ ಸಮಯವನ್ನು ಕಡಿತಗೊಳಿಸಿದೆ. ಈ ಮೂಲಕ ಮುಂಬರುವ ತಿಂಗಳುಗಳಲ್ಲಿ ಕಂಪನಿಯಿಂದ ಹೊರಬೀಳುವವರ ಸಂಖ್ಯೆ ಹೆಚ್ಚಾಗಲಿದೆ.
ನಾಸ್ದಾಕ್ ಪಟ್ಟಿಮಾಡಿದ ಐಟಿ ಸೇವೆಗಳ ಸಂಸ್ಥೆ ಬೆಂಚ್ ಸಮಯವನ್ನು 60 ದಿನಗಳಿಂದ 35 ದಿನಗಳವರೆಗೆ ಕುಗ್ಗಿಸಿದೆ. 35 ದಿನಗಳ ಬಳಿಕ ಅವರನ್ನು ಕಂಪನಿ ಬಿಡಲು ಕೇಳಬಹುದು. ಆದರೆ ಪ್ರಚಾರಿಕ ನಿರ್ಗಮನ(Formal exit) 60 ರಿಂದ 90 ದಿನ ತೆಗೆದುಕೊಳ್ಳಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ಶನಿವಾರ ವರದಿ ಮಾಡಿದೆ.

ಹಿಂದೆ, ಅಂತಹ ಉದ್ಯೋಗಿಗಳು ತಮ್ಮ ವ್ಯಾಪಾರ ಘಟಕಗಳಲ್ಲಿ(business units) ಅಥವಾ ಕಾರ್ಪೋರೇಟ್ ಪೂಲ್ ಗಳಲ್ಲಿ ಪ್ರಾಜೆಕ್ಟ್‌ಗಳನ್ನು ಹುಡುಕಲು ಹೆಚ್ಚು ಸಮಯವನ್ನು ಪಡೆಯುತ್ತಿದ್ದರು. ಬೇರೆ ನಗರಕ್ಕೆ ಸ್ಥಳಾಂತರಗೊಳ್ಳಲು ಅಥವಾ ಡೊಮೇನ್‌ಗಳಿಗೆ ತೆರಳಲು ಹಿಂಜರಿಯುವ ನೌಕರರು ಅಥವಾ ಇತರೆ ಕಾರ್ಯಗಳಿಗೆ ಈ ಬೆಂಚ್ ಗರಿಷ್ಟ ಸಮಯವು ಸಹಾಯವಾಗುತ್ತಿತ್ತು. ಆದರೆ ಈಗ ಸಮಯ ಕಡಿತದಿಂದ ನೌಕರರು ಮೊದಲೇ ಕಂಪನಿಯಿಂದ ಹೊರಬೀಳುವಂತಾಗಿದೆ ಎಂದು ವರದಿಯಾಗಿದೆ.
ಕಾಗ್ನಿಜಂಟ್ ಕಂಪನಿಯ ಈ ಹೊಸ ನಿಯಮವು Fit for-growth ಯೋಜನೆಯ ಒಂದು ಭಾಗವಾಗಿದ್ದು, ನೌಕರರ ಬೆಂಚ್ ಸಮಯ ಪರಿಷ್ಕರಣೆ ಕುರಿತು ಕೇಳಲಾದ ಇ-ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ. ಈ ನಿಯಮ ಪರಿಷ್ಕರಣೆಯು ನೌಕರರ ಮೇಲೆ ಒತ್ತಡ ಹೆಚ್ಚಿಸುವುದರ ಜೊತೆಗೆ ಉತ್ತಮ ಕೆಲಸ ಹೊರತೆಗೆಯುವ ಪ್ರಕ್ರಿಯೆಯು ಆಗಿದೆ ಎಂದು ಹೇಳಲಾಗುತ್ತಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications