For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್‌ನ 6 ಮ್ಯೂಚುವಲ್ ಫಂಡ್ ಬಂದ್: 30,800 ಕೋಟಿ ಹಣ ಲಾಕ್

|

ಅಮೆರಿಕಾ ಮೂಲದ ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಏಪ್ರಿಲ್ 23ರಿಂದ ಅನ್ವಯವಾಗುವಂತೆ ಭಾರತದಲ್ಲಿನ ಆರು ಸ್ಥಿರ ಆದಾಯದ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಬಂದ್ ಮಾಡಿದೆ.

 

ಗುರುವಾರ ಕಂಪನಿಯೇ ಅಧಿಕೃತವಾಗಿ ಘೋಷಿಸಿದ ಮಾಹಿತಿಯ ಪ್ರಕಾರಣ ಕೊರೊನಾವೈರಸ್‌ ಕಾರಣದಿಂದಾಗಿ ಆರು ಸ್ಥಿರ ಆದಾಯ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ಹೇಳಿದೆ. ಕೊರೊನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿದೆ. ಜೊತೆಗೆ ಮ್ಯೂಚುವಲ್ ಫಂಡ್ ವಹಿವಾಟು ಇಲ್ಲದಿರುವುದು ದೊಡ್ಡ ಪರಿಣಾಮ ಬೀರಿದೆ ಎಂದು ತಿಳಿಸಿದೆ.

ಭಾರತದಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್‌ನ 6 ಮ್ಯೂಚುವಲ್ ಫಂಡ್ ಬಂದ್!

ಭಾರತದಲ್ಲಿನ ಆರು ಮ್ಯೂಚುವಲ್ ಫಂಡ್ ನಿಲ್ಲಿಸಿದ ಪರಿಣಾಮ ಹೂಡಿಕೆದಾರರ 30,800 ಕೋಟಿ ರೂಪಾಯಿ ಹಣ ಲಾಕ್ ಆಗಿದ್ದು ಹಿಂಪಡೆಯಲು ಅಸಾಧ್ಯ ಆದಂತಾಗಿದೆ. ಮ್ಯೂಚುವಲ್ ಫಂಡ್ ಗಳ ಮಾರಾಟದ ಆಧಾರದ ಮೇಲೆ ಹೂಡಿಕೆದಾರರ ಹಣದ ಮೌಲ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫ್ರಾಂಕ್ಲಿನ್ ಟೆಂಪಲ್ಟನ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆರು ಯೋಜನೆ ನಿಲ್ಲಿಸಿದ ಪರಿಣಾಮ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಅವಕಾಶ ಇಲ್ಲದಂತಾಗಿದೆ. ಜೊತೆಗೆ ಮ್ಯೂಚುವಲ್ ಫಂಡ್ ಮಾರುವ ಮತ್ತು ಕೊಳ್ಳುವ ಸೌಲಭ್ಯ ನಿಲ್ಲಿಸಲಾಗಿದೆ.

ಫ್ರಾಂಕ್ಲಿನ್ ಟೆಂಪಲ್ಟನ್ ಬಂದ್ ಮಾಡಿರುವ 6 ಮ್ಯೂಚುವಲ್ ಫಂಡ್ ಯೋಜನೆಗಳು:

1)ಫ್ರಾಂಕ್ಲಿನ್ ಇಂಡಿಯಾ ಲೋ ಡ್ಯುರೇಷನ್ ಫಂಡ್
2)ಫ್ರಾಂಕ್ಲಿನ್ ಇಂಡಿಯಾ ಡೈನಾಮಿಕ್ ಆ್ಯಕ್ಯುರಲ್ ಫಂಡ್
3)ಫ್ರಾಂಕ್ಲಿನ್ ಇಂಡಿಯಾ ಕ್ರೆಡಿಟ್ ರಿಸ್ಕ್ ಫಂಡ್
4)ಫ್ರಾಂಕ್ಲಿನ್ ಇಂಡಿಯಾ ಶಾರ್ಟ್ ಟರ್ಮ್ ಇನ್ ಕಮ್ ಪ್ಲ್ಯಾನ್
5)ಫ್ರಾಂಕ್ಲಿನ್ ಇಂಡಿಯಾ ಆಲ್ಟ್ರಾ ಶಾರ್ಟ್ ಬಾಂಡ್ ಫಂಡ್
6)ಫ್ರಾಂಕ್ಲಿನ್ ಇಂಡಿಯಾ ಇನ್ ಕಂ ಅಪಾರ್ಚುನಿಟೀಸ್ ಫಂಡ್

English summary

Corona Impact Franklin Templeton India Closes 6 Debt Schemes

America Based Franklin Templeton India Closes 6 Debt Schemes
Story first published: Friday, April 24, 2020, 16:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X