For Quick Alerts
ALLOW NOTIFICATIONS  
For Daily Alerts

ಭಾರತದ ಕಾಲು ಭಾಗದಷ್ಟು ಉದ್ಯೋಗಿಗಳಿಗೆ ನಿರುದ್ಯೋಗ ಬಿಕ್ಕಟ್ಟು ಸೃಷ್ಟಿ :CMIE

|

ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಮಾರ್ಚ್ 24 ರಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿರುವುದರಿಂದ ಭಾರತದ ನಿರುದ್ಯೋಗ ದರವು 20 ಪರ್ಸೆಂಟ್‌ಕ್ಕಿಂತ ಹೆಚ್ಚಾಗಿದೆ. ಇದರೊಂದಿಗೆ ದೇಶದ ಆರ್ಥಿಕ ಪರಿಣಾಮ ತೀವ್ರವಾಗಿ ಹದಗೆಡುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಪ್ರಕಾರ, ಮೇ 24 ಕ್ಕೆ ಕೊನೆಗೊಂಡ ವಾರದಲ್ಲಿ ನಿರುದ್ಯೋಗ ದರವು 24.3 ಪರ್ಸೆಂಟ್ ಆಗಿತ್ತು.

ನಿರುದ್ಯೋಗ ದರ ಏರಿಕೆ
 

ನಿರುದ್ಯೋಗ ದರ ಏರಿಕೆ

ನಿರುದ್ಯೋಗ ದರವು ಏಪ್ರಿಲ್ 20 ರಿಂದ ಲಾಕ್‌ಡೌನ್ ಸ್ವಲ್ಪ ವಿನಾಯಿತಿ ಪಡೆದರು ನಿರುದ್ಯೋಗ ದರದ ಮೇಲೆ ಯಾವುದೇ ಸಕಾರಾತ್ಮಕ ಪರಿಣಾಮ ಬೀರಿಲ್ಲ ಎಂದು ಸೂಚಿಸುತ್ತದೆ. ವಾಸ್ತವವಾಗಿ, ಮೇ 17 ಕ್ಕೆ ಕೊನೆಗೊಂಡ ವಾರದಲ್ಲಿ ನಗರದ ನಿರುದ್ಯೋಗ ದರವು ಸುಮಾರು 27 ಪರ್ಸೆಂಟ್‌ನಷ್ಟಿತ್ತು. ಇದು ಗ್ರಾಮೀಣ ನಿರುದ್ಯೋಗ ದರಕ್ಕಿಂತ ಹೆಚ್ಚಾಗಿದೆ. ಇದರರ್ಥ ನಗರ ಕಾರ್ಮಿಕರಲ್ಲಿ 25 ಪರ್ಸೆಂಟ್‌ಕ್ಕಿಂತ ಕಡಿಮೆ ಜನರು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ.

ಒಂದರ ಹಿಂದೆ ಮತ್ತೊಂದು ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿವೆ

ಒಂದರ ಹಿಂದೆ ಮತ್ತೊಂದು ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿವೆ

ಲಾಕ್‌ಡೌನ್ ಕಾರಣದಿಂದಾಗಿ ಪ್ರಸ್ತುತ ಉದ್ಯೋಗ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕಂಪನಿಗಳು ಸಿಬ್ಬಂದಿಯನ್ನು ಕಡಿತಗೊಳಿಸುತ್ತಿವೆ ಮತ್ತು ನಿರ್ವಹಣಾ ವೆಚ್ಚವನ್ನು ಉಳಿಸಿಕೊಳ್ಳಲು ಸಂಬಳವನ್ನು ತಗ್ಗಿಸಿದೆ. ಹೆಚ್ಚುತ್ತಿರುವ ನಷ್ಟವನ್ನು ಸರಿದೂಗಿಸಲು, ಉಡುಪು ತಯಾರಕ ರೇಮಂಡ್ ಇತ್ತೀಚೆಗೆ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಸ್ಟಾರ್ಟ್ಅಪ್‌ಗಳಾದ ಓಲಾ, ಐಬರ್, ಜೊಮಾಟೊ, ಮತ್ತು ಸ್ವಿಗ್ಗಿ ಸಹ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.

ಹೊಸ ನೇಮಕಾತಿಗಳಿಲ್ಲ

ಹೊಸ ನೇಮಕಾತಿಗಳಿಲ್ಲ

ಗಳಿಕೆಯ ಕುಸಿತದ ನಂತರ ಓಲಾ ಮತ್ತು ಸ್ವಿಗ್ಗಿ ಕ್ರಮವಾಗಿ 1100 ಮತ್ತು 1,400 ಉದ್ಯೋಗಿಗಳನ್ನು ವಜಾ ಮಾಡಿದೆ. ಜೊಮಾಟೊ ತನ್ನ 13 ಪರ್ಸೆಂಟ್‌ ಕಾರ್ಮಿಕರನ್ನು ವಜಾಗೊಳಿಸಿದೆ. ಇದಲ್ಲದೆ, ಉಬರ್ ಮತ್ತು ಗಾರ್ಟ್ನರ್ ನಂತಹ ಕಂಪನಿಗಳು ಹೊಸ ಪದವೀಧರರಿಗೆ ನೀಡುವ ಪ್ರಮುಖ ಕೊಡುಗೆಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಟಿ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಎಂ) ಗಳನ್ನು ರದ್ದುಗೊಳಿಸಿವೆ. ಈ ಮೂಲಕ ಹೊಸ ನೇಮಕಾತಿಯು ತಗ್ಗಿದೆ.

ಆರ್ಥಿಕ ಕುಸಿತ ಗ್ಯಾರೆಂಟಿ ಎನ್ನುತ್ತಿರುವ ಆರ್ಥಿಕ ವಿಶ್ಲೇಷಕರು
 

ಆರ್ಥಿಕ ಕುಸಿತ ಗ್ಯಾರೆಂಟಿ ಎನ್ನುತ್ತಿರುವ ಆರ್ಥಿಕ ವಿಶ್ಲೇಷಕರು

ಆರ್ಥಿಕ ತಜ್ಞರ ಪ್ರಕಾರ, 2020-21ರ ಮೂರನೇ ತ್ರೈಮಾಸಿಕದಲ್ಲಿ ಆರ್ಥಿಕತೆಯು ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಸಾಧ್ಯತೆಯಿದೆ. ಸಾಂಕ್ರಾಮಿಕ ರೋಗದ ನಂತರ ಉದ್ಯೋಗ ನಷ್ಟ ಮತ್ತು ವೇತನ ಕಡಿತವು ಚೇತರಿಕೆ ನಿಧಾನವಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

English summary

Corona Impact One In Four Indians Unemployed As Corporate Layoffs

According to the Centre for Monitoring Indian Economy (CMIE) the unemployment rate stood at 24.3% during the week ending May 24. One In Four Indians Unemployed
Story first published: Tuesday, May 26, 2020, 19:29 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more