For Quick Alerts
ALLOW NOTIFICATIONS  
For Daily Alerts

ಕೊರೊನಾ ಇಂಪ್ಯಾಕ್ಟ್‌: ರಿಟೇಲ್ ವ್ಯಾಪಾರ ವಲಯಕ್ಕೆ 60 ದಿನದಲ್ಲಿ 9 ಲಕ್ಷ ಕೋಟಿ ರುಪಾಯಿ ನಷ್ಟ

|

ದೇಶಾದ್ಯಂತ ಕೊರೊನಾವೈರಸ್ ಸೋಂಕು ತಪ್ಪಿಸಲು ದೀರ್ಘಾವಧಿ ಲಾಕ್‌ಡೌನ್‌ದಿಂದಾಗಿ ರಿಟೇಲ್ ವ್ಯಾಪಾರ ವಲಯದಲ್ಲಿ 60 ದಿನಗಳಲ್ಲಿ 9 ಲಕ್ಷ ಕೋಟಿ ರುಪಾಯಿ ನಷ್ಟವುಂಟಾಗಿದೆ.

ದೇಶಿಯ ರಿಟೇಲ್ ವ್ಯಾಪಾರವು ಲಾಕ್‌ಡೌನ್‌ದಿಂದಾಗಿ ನೆಲಕಚ್ಚಿದ್ದು, ಭಾರೀ ಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ. ಲಾಕ್‌ಡೌನ್ ಸಡಿಲಿಕೆಯ ನಂತರದ ಒಂದು ವಾರದ ಅವಧಿಯಲ್ಲಿ ಕೇವಲ 5 ಪರ್ಸೆಂಟ್‌ರಷ್ಟು ವ್ಯಾಪಾರ ನಡೆದಿದೆ. ಮಳಿಗೆಗಳಲ್ಲಿ 8 ಪರ್ಸೆಂಟ್‌ನಷ್ಟು ಕಾರ್ಮಿಕರು ಕೆಲಸಕ್ಕೆ ಮರಳಿದ್ದಾರೆ. ಇನ್ನು 80 ಪರ್ಸೆಂಟ್‌ನಷ್ಟು ಕಾರ್ಮಿಕರು ತಮ್ಮ ಸ್ವಂತ ರಾಜ್ಯಗಳಿಗೆ ಮರಳಿದ್ದಾರೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ.

ರಿಟೇಲ್ ವ್ಯಾಪಾರ ವಲಯಕ್ಕೆ 60 ದಿನದಲ್ಲಿ 9 ಲಕ್ಷ ಕೋಟಿ ರುಪಾಯಿ ನಷ್ಟ

ರಿಟೇಲ್ ವಲಯದಲ್ಲಿ 9 ಲಕ್ಷ ಕೋಟಿ ನಷ್ಟದಿಂದಾಗಿ ಕೇಂದ್ರ / ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ರೂಪದಲ್ಲಿ ಬರಬೇಕಿದ್ದ 1.5 ಲಕ್ಷ ಕೋಟಿ ಆದಾಯವೂ ಖೋತಾ ಬಿದ್ದಿದೆ. ಸರ್ಕಾರದ ಯಾವುದೇ ಬೆಂಬಲ ಇಲ್ಲದೆ ವರ್ತಕರು ಭವಿಷ್ಯ ಆತಂಕಕ್ಕೆ ಎಡೆಮಾಡಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಹೇಳಿದ್ದಾರೆ.

ಕಳೆದ ವಾರ, ಸಿಎಐಟಿ ಆರ್ಥಿಕ ಪ್ಯಾಕೇಜ್ ಅನ್ನು ಮರುಪರಿಶೀಲಿಸುವಂತೆ ಮತ್ತು ವ್ಯಾಪಾರಿಗಳನ್ನು ಬೆಂಬಲಿಸುವ ಕ್ರಮಗಳನ್ನು ಪ್ರಕಟಿಸುವಂತೆ ಸರ್ಕಾರವನ್ನು ಒತ್ತಾಯಿಸಿತು.

ಆದಾಗ್ಯೂ, ಭಾರತದಾದ್ಯಂತ 40,000 ವ್ಯಾಪಾರ ಸಂಘಗಳು ಮತ್ತು ಏಳು ಕೋಟಿ ಸದಸ್ಯರನ್ನು ಹೊಂದಿರುವ ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ), ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಾರ ಸಮುದಾಯವು ರಾಷ್ಟ್ರದ ಬಗೆಗಿನ ತನ್ನ ಬಾಧ್ಯತೆಗಳನ್ನು ಪೂರೈಸುತ್ತಲೇ ಇರುತ್ತದೆ ಎಂದು ಹೇಳಿದರು.

English summary

Corona Impact Retail Trade Lost Business Worth 9 Lakh Crore In 60 Days

COVID-19 has hit retail business with a loss of Rs 9 lakh in 60 days Said CAIT
Story first published: Monday, May 25, 2020, 20:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X