2020ರಲ್ಲಿ ಬೆಳವಣಿಗೆ ದರ 0; ಇದು 60 ವರ್ಷದಲ್ಲೇ ಮೊದಲು

ಏಷ್ಯಾದ ಆರ್ಥಿಕ ಬೆಳವಣಿಗೆಯು 60 ವರ್ಷದಲ್ಲೇ ಮೊದಲ ಬಾರಿಗೆ 0 ಆಗಲಿದ್ದು, ಸ್ಥಗಿತವಾಗಲಿದೆ. ಅದಕ್ಕೆ ಕೊರೊನಾ ವ್ಯಾಪಕವಾಗಿ ಹಬ್ಬಿರುವುದರಿಂದ ಆಗುವ ವ್ಯಾಪಾರ, ಸೇವೆ ಇತರ ವಲಯದ ಮೇಲಿನ ಪರಿಣಾಮ ಕಾರಣವಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಗುರುವಾರ ಹೇಳಿದೆ.

60 ವರ್ಷದಲ್ಲಿ ಮೊದಲ ಬಾರಿಗೆ ಈ ವರ್ಷ ಏಷ್ಯಾದ ಆರ್ಥಿಕತೆಯು ಶೂನ್ಯ ಬೆಳವಣಿಗೆ ಕಾಣಲಿದೆ ಎಂದು ಐಎಂಎಫ್ ನ ಏಷ್ಯಾ ಪೆಸಿಫಿಕ್ ವಲಯದ ವರದಿಯಲ್ಲಿ ದಾಖಲಿಸಲಾಗಿದೆ. ಸಂಚಾರ ನಿರ್ಬಂಧ, ಸಾಮಾಜಿಕ ಅಂತರದ ನಿಯಮಗಳಿಂದ ಕುಟುಂಬಗಳಿಗೆ, ಸಂಸ್ಥೆಗಳಿಗೆ ಸಮಸ್ಯೆಯಾಗಿದ್ದು, ನೀತಿ ರೂಪಿಸುವವರ ಬೆಂಬಲದ ಅಗತ್ಯ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ಆರ್ಥಿಕತೆಗೆ ಈಗಿನ ಸನ್ನಿವೇಶವು ಅತ್ಯಂತ ಅನಿಶ್ಚಿತತೆ ಹಾಗೂ ಸವಾಲಿನಿಂದ ಕೂಡಿದೆ. ಅದಕ್ಕೆ ಏಷ್ಯಾ ಪೆಸಿಫಿಕ್ ಹೊರತಲ್ಲ. ಈ ಭಾಗದ ಮೇಲೆ ಕೊರೊನಾ ವೈರಾಣುವಿನ ಪ್ರಭಾವ ಗಂಭೀರವಾಗಲಿದೆ ಎಂದು ಐಎಂಎಫ್ ತಿಳಿಸಿದೆ. ಈಗ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುವ ಸಮಯ ಅಲ್ಲ. ಏಷ್ಯನ್ ದೇಶಗಳು ಎಲ್ಲ ನಿಯಮಗಳನ್ನು ಸಲಕರಂಎಯಾಗಿ ಬಳಸಬೇಕಿದೆ ಎನ್ನಲಾಗಿದೆ.

2020ರಲ್ಲಿ ಬೆಳವಣಿಗೆ ದರ 0; ಇದು 60 ವರ್ಷದಲ್ಲೇ ಮೊದಲು

ಜಾಗತಿಕ ಮಟ್ಟದ ಇತರ ಭಾಗಗಳಿಗೆ ಉಳಿಸಿದರೆ ಏಷ್ಯಾದ ಸ್ಥಿತಿ ಉತ್ತಮವಾಗಿದೆ. 2009ರಲ್ಲಿ ಇದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವೇಳೆಯಲ್ಲಿ ಬೆಳವಣಿಗೆ ದರವು 4.7 ಪರ್ಸೆಂಟ್ ಇತ್ತು. 1990ರಲ್ಲಿ ಏಷ್ಯನ್ ಆರ್ಥಿಕ ಬಿಕ್ಕಟ್ಟಿನ ವೇಳೆ 1.3 ಪರ್ಸೆಂಟ್ ಹೆಚ್ಚಿತ್ತು ಎಂದು ಐಎಂಎಫ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+